ನೇಸರಗಿ. ಇಲ್ಲಿನ ಪ್ರತಿಷ್ಠಿತ ವಿದ್ಯಾಸಂಸ್ಥೆ, ಅನೇಕರ ಬಾಳನ್ನು ಬೆಳಗಿ, ಉನ್ನತ ಮಟ್ಟದ ವಿದ್ಯಾರ್ಜನೆ ನೀಡಿದ ಮಹೋನ್ನತ ವಿದ್ಯಾ ಸಂಸ್ಥೆ ಬೆಳಗಾವಿ ಡಯೋಸಿಸ್ ಬೋರ್ಡ್ ಆಫ್ ಎಜ್ಯುಕೇಶನ್ ಮತ್ತು ಸೋಶಿಯಲ್ ವೆಲಫೇರ್ ರವರ ವಿದ್ಯಾಮಂದಿರ ಪ್ರೌಢಶಾಲೆ, ನೇಸರಗಿ ಈ ಶಾಲೆಯ (1952-2026) ಅಮೃತ ಮಹೋತ್ಸವ ಸಂಭ್ರಮವು ಶುಕ್ರವಾರ ದಿ. 6 ನವೆಂಬರ್ 2026 ರಂದು ಮದ್ಯಾಹ್ನ 3-00 ಘಂಟೆಗೆ ಗ್ರಾಮದ ವಿದ್ಯಾಮಂದಿರ ಪ್ರೌಢ ಶಾಲೆಯ ಆವರಣದಲ್ಲಿ ನಡೆಯಲಿದೆ.ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಗದಗ - ಡಂಬಳ ಮಠದ ಜಗದ್ಗುರು ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳು ಹಾಗೂ ನೇಸರಗಿ - ಮಲ್ಲಾಪೂರ ಗಾಳೇಶ್ವರ ಮಠದ ಶ್ರೀ ಚಿದಾನಂದ ಮಹಾಸ್ವಾಮಿಗಳು ವಹಿಸುವರು,ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳಗಾವಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಡಾ. ಡೆರಿಕ್ ಫರ್ನಾಂಡೀಸ್, ಉದ್ಘಾಟಕರಾಗಿ ಉತ್ತರ ಕನ್ನಡ (ಕೆನರಾ ) ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಮುಖ್ಯ ಅಥಿತಿಗಳಾಗಿ ಕಿತ್ತೂರು ಶಾಸಕರಾದ ಬಾಬಾಸಾಹೇಬ ಪಾಟೀಲ, ಬೈಲಹೊಂಗಲ ಶಾಸಕರಾದ ಮಹಾಂತೇಶ ಕೌಜಲಗಿ, ವಿಶೇಷ ಆಮಂತ್ರಿತರಾಗಿ ಧಾರವಾಡ ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತ ಈಶ್ವರ ಉಳ್ಳಾಗಡ್ಡಿ, ಬೆಳಗಾವಿ ಶಾಲಾ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರಾದ ಜಿ ಎಂ ವೃಷಬೇಂದ್ರಯ್ಯ ಅಥಿತಿಗಳಾಗಿ ಬೆಳಗಾವಿ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಶ್ರೀಮತಿ ಲೀಲಾವತಿ ಎಸ್ ಹಿರೇಮಠ, ಬೈಲಹೊಂಗಲ ಕ್ಷೇತ್ರ ಶಿಕ್ಷಣಾಧಿಕಾರಿ ಎ ಎನ್ ಪ್ಯಾಟಿ, ಬೈಲಹೊಂಗಲ ಕ್ಷೇತ್ರ ಸಮನ್ವಯ ಅಧಿಕಾರಿ ರವಿ ಹಿರೇಮಠ,ಗೋವಾ ಪ್ರೊವಿನ್ಸಿಯಲ್ ಫಾ. ಫೀಟರ್ ರೊಡ್ರೀಗಸ್,ಅಳ್ನಾವರ ಸೆಂಟ್ ತೆರಿಜಾ ಬಿ ಎಡ್ ಕಾಲೇಜು, ಪ್ರಾಂಶುಪಾಲರಾದ ಫಾ. ಆಲ್ವಿನ್ ಸುಧೀರ್, ವಿದ್ಯಾಮಂದಿರ ಪ್ರೌಢ ಶಾಲೆಯ ನಿವೃತ್ತ ಮುಖ್ಯ್ಯೊಪಾಧ್ಯಾಯ ಸಿಸ್ಟರ್ ಟ್ರೀನಾ, ಮುಖ್ಯ್ಯೊಪಾಧ್ಯಾಯರಾದ ಫಾ. ಮೈಕಲ್ ಸೋಜ್, ಫಾ. ಸಿರಿಲ್ ಬ್ರ್ಯಾಗ್ಸ್, ಫಾ. ನೆಲ್ಸನ್ ಪಿಂಟೋ ಆಗಮಿಸಲಿದ್ದಾರೆ. ಕಾರ್ಯಕ್ರಮದ ಸ್ವಾಗತ ಸಮಿತಿ ಸದಸ್ಯರಾಗಿ ಬೆಳಗಾವಿ ಬಿ ಡಿ ಬಿ ಇ ಕಾರ್ಯದರ್ಶಿ ಫಾ. ಜೆರಾಲ್ಡ್ ಡಿಸಿಲ್ವಾ, ಸಂಚಾಲಕರಾದ ಫಾ. ಮೆನಿನೊ ಗೊನ್ಸಾಲ್ವಿಸ್, ಸ್ವಾಗತ ಸಮಿತಿ ಅಧ್ಯಕ್ಷರಾಗಿ ಮಾಜಿ ಶಾಸಕರಾದ ಮಹಾಂತೇಶ ದೊಡ್ಡಗೌಡರ, ನೇಸರಗಿ ಪಿ ಕೆ ಪಿ ಎಸ್ ಅಧ್ಯಕ್ಷರಾದ ರಾಜಶೇಖರ ಯತ್ತಿನಮನಿ, ವಕೀಲರಾದ ಎಂ ವಾಯ್ ಸೋಮಣ್ಣವರ, ಯುವ ಧುರೀನ ಸಚಿನ ವಾಯ್ ಪಾಟೀಲ್ ಅವರುಗಳು ಕಾರ್ಯ ನಿರ್ವಹಿಸಲಿದ್ದಾರೆ ಎಂದು ವಿದ್ಯಾಮಂದಿರ ಪ್ರೌಢಶಾಲೆಯ ಮುಖ್ಯ್ಯೊಪಾಧ್ಯಾಯರಾದ ಫಾ. ಹ್ಯಾರಿ ವಿಕ್ಟರ್ ಪಿ. ಡಿಕ್ರುಜ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.