LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Bellary

೧೦ನೇ ಸಾಂಸ್ಕೃತಿಕ ಜನೋತ್ಸವಕ್ಕೆ ಯಶಸ್ವೀ ಚಾಲನೆ, ನೋಡುಗರÀ ಮನಸೂರೆಗೊಂಡ ವಿವಿಧ ಕಲಾಪ್ರಕಾರಗಳು



    ,bellary.26: ಆವಿಷ್ಕಾರ ಪ್ರಗತಿಪರ ಸಾಂಸ್ಕೃತಿಕ ವೇದಿಕೆ ಮತ್ತು ಪ್ರೋಗ್ರೆಸ್ಸಿವ್ ಕಲ್ಚರಲ್ ಅಸೋಸಿಯೇಷನ್ ಆಫ್ ಇಂಡಿಯಾವತಿಯಿAದ ನಗರದ ಡಾ.ಜೋಳದ ರಾಶಿ ದೊಡ್ಡನಗೌಡ ರಂಗಮAದಿರದಲ್ಲಿ ೧೦ನೇ ಬಳ್ಳಾರಿ ಸಾಂಸ್ಕೃತಿಕ ಜನೋತ್ಸವಕ್ಕೆ ಚಾಲನೆ ದೊರೆಯಿತು. ವಿವಿಧ ಕಲಾ ಪ್ರಕಾರಗಳು ನಮಗೆ ನೀಡಬೇಕಿರುವುದು ಕೇವಲ ಮನರಂಜನೆ ನೀಡುವ ಕಲೆಗಳಲ್ಲ. ಬದಲಾಗಿ ಮಾನವೀಯತೆಯನ್ನು ಜಾಗೃತಗೊಳಿಸುವ, ಪ್ರಗತಿಪರ ಸಾಂಸ್ಕೃತಿಕ ಹೆಜ್ಜೆಗಳಾಗಬೇಕಿದೆ. ಜೊತೆಗೆ ಇಂದು ಮೂಢನಂಬಿಕೆ, ಅಸಹಿಷ್ಣುತೆ ಮತ್ತು ಸಾಮಾಜಿಕ ಶೋಷಣೆಗಳು ಬೇರೂರುತ್ತಿರುವ ಸಂದರ್ಭದಲ್ಲಿ ಸಮಾನತೆಯನ್ನು ಎತ್ತಿ ಹಿಡಿಯುವುದು ಈ ಮೂಲಕ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಉಳಿಸಲು ಸಾಂಸ್ಕೃತಿಕ ರಂಗ ಧುಮುಕಬೇಕೆನ್ನುವ ನಿಟ್ಟಿನಲ್ಲಿ ಈ ಜನೋತ್ಸವ ಸಂಘಟಿಸಲಾಗಿದೆ.
     ೧೦ನೇ ಬಳ್ಳಾರಿ ಸಾಂಸ್ಕೃತಿಕ ಜನೋತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಶ್ರೀಯುತ ಬಿ.ಪೀರ್ ಬಾಷಾ, ಸಾಹಿತಿಗಳು ಹಾಗೂ ಸಿಂಡಿಕೇಟ್ ಸದಸ್ಯರು ವಿ ಎಸ್ ಕೆ ವಿಶ್ವವಿದ್ಯಾಲಯ, ಇವರು ಆಗಮಿಸಿ ಮಾತನಾಡುತ್ತಾ- ಆಳುವ ಸಂಸ್ಕೃತಿ ವಿರುದ್ಧ, ಜನ ಸಂಸ್ಕೃತಿ ಅಂದರೆ ಯಾವತ್ತಿಗೂ ಸಾಮಾನ್ಯ ಜನರ ಸಂಸ್ಕೃತಿ ಬೇಕು. ಕೇವಲ ಮನರಂಜನೆ ಅಲ್ಲ. ಇದರಲ್ಲಿ ಒಂದು ಮೌಲ್ಯ ಇದೆ.  ಇಂದು ಆಳುವ ವರ್ಗದ ಬಲತ್ಕಾರದ ಸಂಸ್ಕೃತಿಯು ಪೊಲೀಸ್, ಸೈನ್ಯದ ಮೂಲಕ ಹತೋಟಿಯಲ್ಲಿಟ್ಟುಕೊಳ್ಳುವುದು ಆಗಿದೆ. ಮತ್ತೊಂದು ಆಳುವ ವರ್ಗದ ಬಲಾತ್ಕಾರಕ ಅಲ್ಲದ ಸಂಸ್ಕೃತಿಯ ಮೂಲಕ ಶಿಕ್ಷಣ, ಕೆಲವು ಕಲಾಪ್ರಕಾರದ  ಮೂಲಕ ವಿಧೇಯತೆ, ವಿನಯಶೀಲತೆ ಹರಡಿ ಅಧಿಕಾರದಲ್ಲಿರುವವರು ಭಾವನಾತ್ಮಕವಾಗಿ ಜನತೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಂಡು ಶೋಷಣೆ ಮಾಡುತ್ತಿವೆ. ಜನಸಂಸ್ಕೃತಿಯ ಮೂಲಕ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಉಳಿಸಲು ಸಾಂಸ್ಕೃತಿಕ ರಂಗ ಮುಂಬರಬೇಕು. ಈ ಕೆಲಸ ಆವಿಷ್ಕಾರ ಮಾಡುತ್ತಿರುವುದಕ್ಕೆ ಶ್ಲಾಘಿಸಿದರು.
   ಇದಕ್ಕೂ ಮುಂಚೆ ನವೋದಯದ ಮಹಾನ್ ಚೇತನ ಜ್ಯೋತಿಬಾ ಫುಲೆ ರವರ ೨೦೦ನೇ ಜನ್ಮ ವಾರ್ಷಿಕಕ್ಕೆ ಸಮರ್ಪಿತವಾದ ೧೦ನೇ ಬಳ್ಳಾರಿ ಸಾಂಸ್ಕೃತಿಕ ಜನೋತ್ಸವದ ಸಂದರ್ಭದಲ್ಲಿ ಸೂಕ್ತಿ ಮತ್ತು ಉದ್ಘಾಟನೆ ಗೊಂಡಿತು. ಈ ಪ್ರದರ್ಶನದ ಉದ್ಘಾಟನೆಯನ್ನು ಡಾ. ಗೋವರ್ಧನ್ ರೆಡ್ಡಿ, ಖ್ಯಾತ ಯುರಾಲಜಿಸ್ಟ್ ಬಳ್ಳಾರಿ ಇವರು  ನೆರವೇರಿಸಿದರು. ಕಾರ್ಯಕ್ರಮದಲ್ಲಿ ಮಾತನಾಡುತ್ತಾ- ಇಂದು ಶಿಕ್ಷಣ, ಆರೋಗ್ಯದಂತಹ ಸಾಮಾಜಿಕ ಕ್ಷೇತ್ರಗಳು ಬಂಡವಾಳಶಾಹಿಗಳಿAದ ಜನಸಾಮಾನ್ಯರಿಗೆ ಕೈಗೆಟುಕದಂತೆ ಅಗಿದೆ. ಮುಂದೆ ಗಾಳಿಯನ್ನು ಸಹ ಕೊಂಡುಕೊಳ್ಳುವ ಪರಿಸ್ಥಿತಿ ಉಂಟಾಗಬಹುದು ಎಂದು ಹೇಳಿದರು. ಸೂಕ್ತಿ ಮತ್ತು ಛಾಯಾಚಿತ್ರ ಪ್ರದರ್ಶನದಲ್ಲಿ ನವೋದಯದ ಮಹಾ ಚೇತನ ಜ್ಯೋತಿಬಾ ಫುಲೆ ಅವರ ಸೂಕ್ತಿಗಳು ಹೋರಾಟದ ಕುರಿತು ಚಿತ್ರಣ ನೀಡುವ ಪ್ರದರ್ಶನ ನಡೆಯಿತು.
     ಹಾಗೆಯೇ ಅತಿಥಿಗಳಾಗಿ ಶ್ರೀಯುತ ಬಿ. ರವಿ ಆಗಮಿಸಿ ಶುಭ ಹಾರೈಸಿ, ಇಂದು ಇಡೀ ದೇಶ, ವಿಶ್ವ ಒಂದು ಚಳುವಳಿಯ ಕಾವಿನಲ್ಲಿದೆ. ಅದಕ್ಕೆ ಪೂರಕವಾಗಿ ಸಾಂಸ್ಕೃತಿಕ ಚಳುವಳಿ ರೂಪಗೊಳ್ಳಬೇಕು. ಈ ರಸದ ಮೂಲಕ ಜನರ ಬಳಿ ವಿಚಾರಗಳನ್ನು ತೆಗೆದುಕೊಂಡು ಹೋಗಬೇಕು. ಕಲೆ ಕೇವಲ ಕಲೆ ಗಾಗಿ ಅಲ್ಲ ಜನಗಳಿಗೆ ಹೊಸ ವಿಚಾರಗಳು ಮೌಲ್ಯ ಪ್ರಜ್ಞೆ ಬೆಳೆಸಿ, ಜನತೆಯನ್ನು ಭಾವನಾತ್ಮಕವಾಗಿ ಸಾಮಾಜಿಕ ಚಿಂತನೆಗೆ ಹಚ್ಚಬೇಕು ಎಂದರು.     ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಪ್ರಮೋದ್ ಎನ್, ಸಾಮಾಜಿಕ ಹೋರಾಟಗಾರರು ವಹಿಸಿಕೊಂಡು ಕಾರ್ಯಕ್ರಮ ನಡೆಸಿಕೊಟ್ಟರು.
   ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಸದಾಭಿರುಚಿಯ ಕಾರ್ಯಕ್ರಮಗಳು ನಡೆದವು. ಮುಖ್ಯವಾಗಿ ಮಂಡ್ಯದಿAದ ಅಗಮಿಸಿದ ಜಾನಪದ ಮತ್ತು ರಂಗಭೂಮಿ ಗಾಯಕರಾದ ಸಂಗೀತ ರಸಾಯನ ಶ್ರೀಯುತ ಸ್ವಾಮಿ ಗಾಮನಹಳ್ಳಿಯವರಿಂದ ಕೇಳುಗರಿಗೆ ರಸದೂಟ ಉಂಟು ಮಾಡಿತು. ಹಾಗೆಯೇ ಸಂಗೀತ ಶಿಕ್ಷಕರಾದ ಶ್ರೀಪಾಲಾಕ್ಷ ಹೊಸಪೇಟೆ ಇವರ ಪ್ರಗತಿಪರ ಗೀತೆಗಳು ನಿಜಕ್ಕೂ ಯುವಜನರಲ್ಲಿ ಅತ್ಯಂತ ಉತ್ಸಾಹವನ್ನು ತುಂಬಿದವು. ಸುಜಾತ ಕಲಾ ಟ್ರಸ್ಟ್ ಬಳ್ಳಾರಿ ಇವರ ನೃತ್ಯ ವೈಭವ ಅತ್ಯಂತ ಆಕರ್ಷಣೀಯವಾಗಿದ್ದು, ನೃತ್ಯ ವೈಭವವನ್ನು ನೆರದ ಜನತೆಗೆ ಸಾರಿದರು. ಇದರ ನಿರ್ದೇಶನ ವಿದ್ವಾನ್ ಶ್ರೀ ವಿಜಯೇಂದ್ರ ಕುಮಾರ್ ನೃತ್ಯ ಶಿಕ್ಷಕರು ಅತ್ಯಂತ ಉತ್ತಮವಾದ ನೃತ್ಯ ಸಂಯೋಜನೆ ನಡೆಸಿ ನೃತ್ಯ ವೈಭವಕ್ಕೆ ಕಳೆ ತಂದಿದ್ದರು. ಹಾಗೆಯೇ ವಾದ್ಯ ಸಂಗೀತ ಡಾ. ಕೆ ರಾಮ್ ಕಿರಣ್ ಅವರಿಂದ ವೀಣಾ ವಾದನ ಇವರು ಪ್ರಾಂಶುಪಾಲರು ಶ್ರೀಮೇಧ ಕಾಲೇಜು ಬಳ್ಳಾರಿ ಅವರಿಂದ ನಿಜಕ್ಕೂ ಸಂಗೀತ ರಸದೌತಣತನವನ್ನು ನೀಡಿದರು.ಶ್ರೀ ಭರತ್ ಗುಂಡಿ ದಿನೇಶ್ ಕೆ ವಿಜಯ್ ಕುಮಾರ್ ಇವರ ಭಾವಸುಧೆ ನೆರೆದಿದ್ದ ಜನ ಸಮೂಹವನ್ನು ಮಂತ್ರ ಮುಗ್ದರನ್ನಾಗಿಸಿತು. ಅಂಕುರ ಸಾಂಸ್ಕೃತಿಕ ವೇದಿಕೆ ಯಿಂದ   ಕನ್ನಡದ ನವ್ಯ ಸಾಹಿತ್ಯದ ದಿಗ್ಗಜರಾದ ಡಾ. ಎಂ. ಗೋಪಾಲಕೃಷ್ಣ ಅಡಿಗರ - ಕಟ್ಟುವೆವು ನಾವು ಹೊಸ ನಾಡೊಂದನು ಅತ್ಯಾಕರ್ಷಕ  ನೃತ್ಯ ರೂಪಕ ನೋಡುಗರ  ತನ್ಮಾನ ಸೆಳೆಯಿತು. ಎಸ್.ಐ.ಆರ್ ಯಿಂದ  ಹಲವಾರು ನಾಗರಿಕರು ತಮ್ಮ ಸಂವಿಧಾನಿಕ ಮತ ಹಕ್ಕನ್ನು ಕಳೆದುಕೊಳ್ಳುತ್ತಿರುವಂತಹ ಪರಿಸ್ಥಿತಿ ತಿಳಿಸುವ ದಾಖಲೆ ಕೊಡಿ ದಾಖಲೆ ಆವಿಷ್ಕಾರ ಬಳ್ಳಾರಿ ತಂಡದಿAದ ಅತ್ಯಂತ ಮನೋಜ್ಞವಾಗಿ ಮೂಡಿಬಂದಿತು ಈ ನಾಟಕದ ರಚನೆ ಮತ್ತು ನಿರ್ದೇಶನ ರಾಧಾಕೃಷ್ಣ ಉಪಾಧ್ಯ ಬಳ್ಳಾರಿ ಸಹಕಾರ ತಿರುಮಲ ಬಳ್ಳಾರಿ ಇವರು ಹೊಸ ಕಲಾವಿದರ ಸೇರಿಸಿಕೊಂಡು ಅತ್ಯುತ್ತಮ ಪ್ರಯೋಗವನ್ನು ಮಾಡಿ ಯಶಸ್ವಿಗೊಳಿಸಿದ್ದು ಅತ್ಯಂತ ವಿಶೇಷವಾಗಿತ್ತು. ನಗರದ ಜನತೆ ಜನೋತ್ಸವಕ್ಕೆ ವಿವಿಧ ಬಡಾವಣೆಗಳಿಂದ ಕುಟುಂಬ ಸಮೇತ ಬಂದಿದ್ದು, ಜೊತೆಗೆ ಯುವಜನತೆ ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕೋಲೂರು ಶೈಕ್ಷಣಿಕ ಜಿಲ್ಲಾ ಮಟ್ಟದ ಕ್ರೀಡಾಕೂಟ: 400 ಮೀ ಓಟದಲ್ಲಿ ದೃಷ್ಟಿಗೆ ಪ್ರಥಮ ಸ್ಥಾನಪಟ್ಟಣದಲ್ಲಿ ವಿಜೃಂಭಣೆಯಿಂದ ಜರುಗಿದ ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತಿ ಉತ್ಸವದೇಶದ ಭದ್ರತೆಯಲ್ಲಿ ಇಎಮ್‌ಇ ಸೈನಿಕರ ಪಾತ್ರ ಮಹತ್ವದ್ದು:  ಜಿ.ಪರಿಸ್ವಾಮಿ ರೆಡ್ಡಿ ವೇದಿಕೆ ಮೇಲೆ ಕೂರಿಸದಿದ್ದರೆ ಸಭೆ ಬಹಿಷ್ಕಾರದ ಎಚ್ಚರಿಕೆ: ಡಾ ಪ್ರಭಾಕರ್ ಕೋರೆ.‌ನ. 6 ರಂದು ನೇಸರಗಿ ವಿದ್ಯಾಮಂದಿರ ಪ್ರೌಢಶಾಲೆಯ ಅಮೃತ ಮಹೋತ್ಸವ ಚನ್ನಮ್ಮ ಬದುಕು ಇತಿಹಾಸ ಅಲ್ಲ; ನವಪೀಳಿಗೆಗೆ ಸ್ವಾಭಿಮಾನದ ಪಾಠ: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ 'ಸೇವಾ ಮನೋಭಾವದೊಂದಿಗೆ ವೈದ್ಯಕೀಯ ವೃತ್ತಿ ಆರಂಭಿಸಿ' ಪ್ರಭುನೀಲಕಂಠ ಸ್ವಾಮೀಜಿಅಯೋಡಿನ್‌ಯುಕ್ತ ಉಪ್ಪಿನ ಬಳಕೆ ಆರೋಗ್ಯಕರ ಜೀವನಕ್ಕೆ ಸಹಕಾರಿ: ಡಾ. ರಾಮಕೃಷ್ಣ೧೦ನೇ ಸಾಂಸ್ಕೃತಿಕ ಜನೋತ್ಸವಕ್ಕೆ ಯಶಸ್ವೀ ಚಾಲನೆ, ನೋಡುಗರÀ ಮನಸೂರೆಗೊಂಡ ವಿವಿಧ ಕಲಾಪ್ರಕಾರಗಳುಎಸ್‌ಸಿ-ಎಸ್‌ಟಿ ಮೀಸಲಾತಿ ಹೆಚ್ಚಳವನ್ನು ಸಂವಿಧಾನದ 9ನೇ ಶೆಡ್ಯೂಲ್‌ಗೆ ಸೇರಿಸಿ:  ವಿ.ಎಸ್. ಶಿವಶಂಕರ್ ಆಗ್ರಹ