Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

13 ಕ್ಷೇತ್ರಗಳಲ್ಲಿ ಗೆಲುವ ವಿಶ್ವಾಸ, ಹೊಂದಾಣಿಕೆ ಇಲ್ಲವೇ ಇಲ್ಲ :ಬಾಲಚಂದ್ರ ಜಾರಕಿಹೊಳಿ

ಬೆಳಗಾವಿ. ಇಂದು ನಮ್ಮ ಬಣದ 7 ಅಭ್ಯರ್ಥಿಗಳು  ನಾಮಪತ್ರ ಸಲ್ಲಿಸಿದ್ದು ಉಳಿದ 6 ಜನ ಬರುವ ಅ. 11 ರಂದು ನಾಮಪತ್ರ ಸಲಿಕೆ ಮಾಡುತ್ತಾರೆ. ಹುಕ್ಕೇರಿ ತಾಲೂಕಿನಲ್ಲಿ ಗೆಲ್ಲುವ ಪ್ರಯತ್ನ ಮಾಡುತ್ತಿದ್ದೇವೆ. ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘದ ಚುನಾವಣೆ ಗೆಲುವು ಬೆಳಗಾವಿ ಡಿ ಸಿ ಸಿ ಬ್ಯಾಂಕ ಚುನಾವಣೆ ಮೇಲೆ ಪ್ರಭಾವ ಬೀರದು ಮತ್ತು ಅದು ಒಂದು ತಾಲೂಕ ಮಟ್ಟದ ಚುನಾವಣೆ ಇದು ಜಿಲ್ಲಾ ಮಟ್ಟದ ಚುನಾವಣೆ ಆಗಿರುವದರಿಂದ ನಮ್ಮ ಬೆಂಬಲಿತ 13 ಜನರ ಆಯ್ಕೆ ಖಚಿತ ಎಂದರು. ರಮೇಶ ಕತ್ತಿ ನಮ್ಮ ಕುಟುಂಬದ ಬಗ್ಗೆ ಅವಹೇಳನವಾಗಿ ಮಾತನಾಡಿದ್ದಾರೆ ಅದಕ್ಕೆ ಕಾನೂನು ಮುಖಾಂತರ ಕ್ರಮ ತೆಗೆದುಕೊಳ್ಳುತ್ತೇವೆ. ಈ ಒಂದು ಬ್ಯಾಂಕ ಯಾರ ಅಪ್ಪನ ಅಸ್ತಿ ಅಲ್ಲ ಎಂಬ ರಮೇಶ ಕತ್ತಿ ಮಾತಿಗೆ ಹೌದು ಅದು ಯಾರ ಅಪ್ಪನ ಬ್ಯಾಂಕು ಅಲ್ಲ ಇದು ರೈತರ ಬ್ಯಾಂಕಾಗಿದೆ ಎಂದರು. ಎಲ್ಲ ಕ್ಷೇತ್ರಗಳಲ್ಲಿ ಸ್ಪರ್ದಿಸುವ ಸ್ವಾತಂತ್ರ್ಯ ಎಲ್ಲರಿಗೂ ಇದೆ ಬಂದರೆ ಸ್ವಾಗತ ಮತ್ತು ಅವರಿಗೆ ಒಳ್ಳೇದು ಆಗಲಿ ಎಂದು ಶಾಸಕ ಹಾಗೂ ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು.

    ಅವರು ಗುರುವಾರದಂದು ಡಿಸಿಸಿ ಬ್ಯಾಂಕ ಮುಖ್ಯ ಶಾಖೆಯಲ್ಲಿ  ಅವರ ಬಣದ ಸದಸ್ಯರಾದ ಅಣ್ಣಾಸಾಹೇಬ ಜೊಲ್ಲೆ,(ನಿಪ್ಪಾಣಿ ತಾಲೂಕ ) ಮಹಾಂತೇಶ ದೊಡ್ಡಗೌಡರ (ಬೈಲಹೊಂಗಲ ತಾಲೂಕ  ), ಅರವಿಂದ ಪಾಟೀಲ (ಖಾನಾಪುರ ತಾಲೂಕ  ) ವಿಶ್ವಾಸ ವೈದ್ಯ (ಯರಗಟ್ಟಿ ತಾಲೂಕ  )ವಿಕ್ರಂ ಇನಾಮದಾರ (ಚ. ಕಿತ್ತೂರು ತಾಲೂಕ  )ವೀರೂಪಾಕ್ಷ ಮಾಮನಿ ( ಸವದತ್ತಿ ತಾಲೂಕ  )ಅಪ್ಪಸಾಹೇಬ ಕುಲಗುಡೆ (ರಾಯಭಾಗ ತಾಲೂಕ  ) ಇವರುಗಳು ಚುನಾವಣೆ ಅಧಿಕಾರಿಗಳಿಗೆ  ನಾಮಪತ್ರ ಸಲ್ಲಿಸಿದ ಬಳಿಕ ಮಾತನಾಡಿ ಎಲ್ಲ 52 ಸಹಕಾರ ಪ್ರತಿನಿದಿಗಳನ್ನು ಕರೆತಂದು ನಾಮಪತ್ರ ಸಲ್ಲಿಸಿದ್ದಾರೆ. ನಾವು ಪ್ರತಿರೋಧ ಒಡ್ದುಟ್ಟಿದ್ದು ಗೆಲುತ್ತೇವೆ ಎಂದರು.

   ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ ಕೆಟ್ಟ ಜನ ಜೊತೆ ಸಹವಾಸ ಮಾಡಬೇಡಿರಿ ಎಂದಿದ್ದಾರೆ ನಮ್ಮಗೂ ಗೊತ್ತು ಯಾರು ಕೆಟ್ಟವರು, ಯಾರು ಒಳ್ಳೆಯವರು ನಾವು ಸಹಕಾರಿ ರಂಘ ಬೆಳೆಸಿ ಮುಂದೆ ಬಂದಿದ್ದೇವೆ ಇವರಿಂದ ಪಾಠ ಕಲಿಯುವ ಅವಶ್ಯಕತೆ ಇಲ್ಲ. ಮತ್ತು ನಮ್ಮ ವಿರುದ್ಧ ಉತ್ತಮ ಪಾಟೀಲ ಸ್ಪರ್ಧೆ ಮಾಡುತ್ತಿದ್ದು ಅದ್ದರಿಂದ ಎಲ್ಲರಿಗೂ ಸ್ಪರ್ಧೆ ಮಾಡುವ ಅವಕಾಶ ಇದೆ ಎಂದರು.

  ಈ ಸಂದರ್ಭದಲ್ಲಿ ಎಲ್ಲ ನಾಮಪತ್ರ ಸಲ್ಲಿಸಿದ 7 ಜನ ಅಭ್ಯರ್ಥಿಗಳು ಮತ್ತು ಅವರ ಅಭಿಮಾನಿಗಳು ಪಾಲ್ಗೊಂಡಿದ್ದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ