Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕನ್ನಡದ ವಚನ ಸಾಹಿತ್ಯದಲ್ಲಿ ವೈಜ್ಞಾನಿಕ ಪ್ರಜ್ಞೆ ಇದೆ: ಗೌರಮ್ಮ ಕರ್ಕಿ

ಬೆಳಗಾವಿ: ಕನ್ನಡದ ಶಿವಶರಣರ ವಚನ ಸಾಹಿತ್ಯದಲ್ಲಿ ವೈಚಾರಿಕ ಮತ್ತು ವೈಜ್ಞಾನಿಕ ಪ್ರಜ್ಞೆ ಇತ್ತು. ಹೀಗಾಗಿ ೧೨ನೇ ಶತಮಾನತದ ಬಸವಾದಿ ಶಿವಶರಣರನ್ನು "ಕುರಿತೋದದೆಯಂ ಕಾವ್ಯ ಪ್ರಯೋಗ ಪರಿಣತ ಮತಿಗಳ್" ಎನ್ನಬಹುದು ಎಂದು ನಿವೃತ್ತ ಶಿಕ್ಷಕಿ ಗೌರಮ್ಮ ಕರ್ಕಿ ಅಭಿಪ್ರಾಯಪಟ್ಟರು.


ಜಾಗತಿಕ ಲಿಂಗಾಯತ ಮಹಾಸಭಾ ಬೆಳಗಾವಿ ಜಿಲ್ಲಾ ಘಟಕದ ವತಿಯಿಂದ ಮಹಾಂತೇಶ ನಗರದ ಮಹಾಂತ ಭವನದಲ್ಲಿ ಬುಧವಾರ ಆಯೋಜಿಸಿದ್ದ ಮಾಸಿಕ ಅನಭಾವ ಗೋಷ್ಠಿಯಲ್ಲಿ " ಶರಣರ ವೈಜ್ಞಾನಿಕ ದೃಷ್ಟಿಕೋನ " ವಿಷಯದ ಕುರಿತು ಗೌರಮ್ಮ ಕರ್ಕಿ ಅವರು ಉಪನ್ಯಾಸ ನೀಡಿದರು.

ಇವತ್ತಿನ ವೇಗದ ಜಗತ್ತಿನಲ್ಲಿ ಸ್ತ್ರೀ ಶೋಷಣೆ, ಅತ್ಯಾಚಾರ, ಕೊಲೆ, ಮೂಢನಂಬಿಕೆಗಳಿಗೆ ನಿರಾತಂಕ ಪ್ರಚಾರ ಸಮಾಜದ ಸ್ವಾಸ್ಥ್ಯವನ್ನ ನಾಶಗೊಳಿಸುತ್ತಿದೆ. ಈ ಕಲುಷಿತ ವಾತಾವರಣದಿಂದ ಯುವ ಪೀಳಿಗೆ ಹೊರ ಬರಲು ಪೋಷಕರು ವಚನ ಸಾಹಿತ್ಯ ಅಗತ್ಯದ ಜಾಗೃತಿ ಮೂಡಿಸಬೇಕಿದೆ ಎಂದು ಕರ್ಕಿ ತಿಳಿಸಿದರು.

ಶರಣರು ರಚಿಸಿದ ವಚನ ಸಾಹಿತ್ಯ ಅನುಭಾವದ ನಡೆ, ನುಡಿ, ಸಂಸ್ಕೃತಿ ಸಂಕೇತವಾಗಿದೆ. ಅದರಲ್ಲೂ 12ನೇ ಶತಮಾನದಲ್ಲಿ ಸುಮಾರು ೩೩ ಶರಣೆಯರು ವಚನಗಳನ್ನು ರಚಿಸಿರುವುದು ಕನ್ನಡ ನಾಡಿನ ಹೆಮ್ಮೆ ಎಂದು ಶ್ಲಾಘಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ  ಬಸವರಾಜ ರೊಟ್ಟಿ ಅವರು ಕೆಲವು ಜನರು ಶರಣರ ವಚನಗಳ ಆಶಯಗಳ ವಿರುದ್ಧದ ಹುನ್ನಾರ ನಡೆಸಿದ್ದಾರೆ."ವಚನ ದರ್ಶನ" ಎಂಬ ಕೃತಿಯನ್ನು ರಚಿಸಿ,ಶರಣರ ಸಿದ್ದಾಂತ ಗಳನ್ನು ತಿರುಚಿ ಪ್ರಚಾರ ಮಾಡತ್ತಿದ್ದಾರೆ.ಅಲ್ಲದೇ "ಶರಣ ಶಕ್ತಿ" ಎಂಬ ಚಲನಚಿತ್ರ ದಲ್ಲಿ ಅಸಂಬದ್ಧ ವಿಚಾರಗಳನ್ನು ಹೇಳುವ ಮೂಲಕ ಬಸವಾದಿ ಶರಣರ ಮೂಲ ಆಶಯಗಳನ್ನು ಹಾಳು ಮಾಡುತ್ತಿದ್ದಾರೆ..ಇಂತಹ ಕೃತ್ಯವನ್ನು ಜಾಗತಿಕ ಲಿಂಗಾಯತ ಮಹಾಸಭೆಯು ಉಗ್ರವಾಗಿ ಖಂಡಿಸುತ್ತದೆ.ಅಲ್ಲದೆ ಉಗ್ರ ಹೋರಾಟವನ್ನು ಮಾಡುತ್ತದೆ ಎಂದರು.

ಮಹಾಂತೇಶ ದೀವಟಗಿ  ಮತ್ತು ಮಹಾದೇವಿ ದೀವಟಗಿ ಷಟ್ ಸ್ಥಲ್ ಧ್ವಜಾರೋಹಣ ನೆರವೇರಿಸಿದರು, ಅನ್ನಪೂರ್ಣ ಮಳಗಲಿ ಸ್ವಾಗತಿಸಿದರು, ಮಹಾನಂದಾ ಪರುಶೆಟ್ಟಿ ನಿರೂಪಿಸಿದರು, ಅನಿತಾ ಚಟ್ಟರ ವಂದಿಸಿದರು.

ಕಾರ್ಯಕ್ರಮದಲ್ಲಿ  ಅಶೋಕ ಮಳಗಲಿ,ಎಸ್ ಜಿ.ಸಿದ್ನಾಳ,ಮುರಿಗೆಪ್ಪ ಬಾಳಿ,ಈರಣ್ಣ ಚಿನಗುಡಿ,ಚಂದ್ರಪ್ಪ ಬೂದಿಹಾಳ, ಮೋಹನ ಗುಂಡ್ಲೂರ,ಬಿ ಎಸ್ ಮತ್ತಿಕೊಪ್ಪ,ಮಹಾಂತೇಶ ತೋರಣಗಟ್ಟಿ,ಗುರವನ್ನರ,ವಿರುಪಾಕ್ಷಿ ದೊಡಮನಿ ಬಸವರಾಜ ಚಟ್ಟರ,ಎಸ್ ಎಸ್ ಪೂಜಾರ,ಕೆಂಪಣ್ಣ ರಾಮಾಪುರಿ,ರೇಖಾ ಮುದ್ದಾಪೂರ ,ಸುಜಾತಾ ಮತ್ತಿಕಟ್ಟಿ,ರತ್ನಾ ಬೆಣಚಮರ್ಡಿ,ಸುಧಾ ರೊಟ್ಟಿ, ಜಯಾ ನೇಮಗೌಡರ,ರುದ್ರಗೌಡರ ದಂಪತಿ,ಸುಲೋಚನ ವಸ್ತ್ರದ,ಶೊಭಾ ಶಿವಳ್ಳಿ,ನೇತ್ರಾ ರಾಮಾಪುರಿ, ತ್ರಿವೇಣಿ ಪಾಟೀಲ, ವಿವಿಧ ಬಡಾವಣೆಗಳ ಬಸವ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ