Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ರಂಗಭೂಮಿ  ನಟರನ್ನು ಸೃಷ್ಟಿಸುವ ಉತ್ತಮ ವೇದಿಕೆ :  ಎನ್ ಬಸವರಾಜ



 ಬಳ್ಳಾರಿ ಮಾ. 28  :   1961ರಲ್ಲಿ ಯುನಸ್ಕೊ ಬೆಂಬಲದೊಂದಿಗೆ ವಿಶ್ವ ರಂಗಭೂಮಿ ದಿನಾಚರಣೆಯನ್ನು ಪೋಷಿಸಲಾಯಿತು 1962 ರಿಂದ ವಿಶ್ವರಂಗ ಭೂಮಿ ದಿನವನ್ನು ಪ್ರತಿವರ್ಷ ಮಾರ್ಚ್ 27ರಂದು ಇಡಿ ವಿಶ್ವವೆ ಆಚರಿಸಲಾಗುತ್ತದೆ. ಬಳ್ಳಾರಿ ರಂಗಭೂಮಿಯಲ್ಲಿ ವಿಶ್ವವಿಖ್ಯಾತ ನಟ ಬಳ್ಳಾರಿ ರಾಘವ, ಗಮಕ ಕಲಾನಿಧಿ ಡಾ. ಜೋಳದರಾಶಿ ದೊಡ್ಡನಗೌಡರು, ಸುಬದ್ರಮ್ಮ ಮನ್ಸೂರುರವರು, ಬೆಳಗಲ್ಲು ವೀರಣ್ಣನವರು, ಇತ್ತೀಚೆಗೆ ನಿಧನರಾದ ರಮೇಶಗೌಡ ಪಾಟೀಲ್ ಇನ್ನೂ ಅನೇಕ ಕಲಾವಿದರು ರಂಗಭೂಮಿಗಾಗಿ ದುಡಿದಂತಹ ಮಹನಿಯರಿವರು. ಈ ದಿನ ರಂಗ ಕಲೆಯ ಮಹತ್ವವನ್ನು ಸಾರಲು ರಂಗಭೂಮಿಯು ಕಲಾತ್ಮಕ ಸೌಂದರ್ಯವನ್ನು ಪ್ರದರ್ಶಿಸಲು ರಂಗಭೂಮಿಯಲ್ಲಿ ನೃತ್ಯ ಸಂಗೀತ ಹಾಗೂ ಇನ್ನಿತರ ಕಲೆಗಳ ಪ್ರಕಾರಗಳು ಉಳಿವಿಗೆ ಪ್ರೋತ್ಸಾಹ ನೀಡಲು ಈ ದಿನಾಚರಣೆ ಬೆಂಬಲ ನೀಡುತ್ತದೆ ಜಗವೇ ನಾಟಕ ರಂಗ ಜನರೆಲ್ಲಾ ಪಾತ್ರಧಾರಿಗಳು ಎಂಬುದು ಭಾರತೀಯ ನಾಟಕ ರಂಗದ ಸಂದೇಶವಾಗಿದೆ ಅತ್ಯಂತ ಮುಖ್ಯವಾಗಿ ರಂಗಭೂಮಿ ಉದಯೋನ್ಮುಖ ನಟರನ್ನು ಸೃಷ್ಟಿಸುವ ವೇದಿಕೆಯಾಗಿದೆ ಎಂದು  ಎನ್ ಬಸವರಾಜ್ ತಿಳಿಸಿದರು.


ಅವರು ಆಲಾಪ್ ಸಂಗೀತ ಕಲಾ ಟ್ರಸ್ಟ್ ಬಳ್ಳಾರಿ ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ರಾಯಲ್ ಶಿಕ್ಷಣ  ಮಹಾವಿದ್ಯಾಲಯದಲ್ಲಿ ವಿಶ್ವ ರಂಗಭೂಮಿ ದಿನಾಚರಣೆಯ ನಿಮಿತ್ತ ಉಪನ್ಯಾಸ ನೀಡಿ ಅವರು ಮಾತನಾಡಿ,

 ರಂಗಪುರಸ್ಕಾರ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಮಾಡುವ ಮೂಲಕ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ  ಆದೋನಿ ವೀಣಾ ಮತ್ತು ವೇದಿಕೆಯ ಮೇಲೆ ಗಣ್ಯರು ಸೇರಿ ದೀಪ ಬೆಳಗುವ ಮೂಲಕ ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

 ಆದೋನಿ ವೀಣಾರವರು ನಾಟಕ ಮಾತುಗಳು ಮತ್ತು ರಂಗ ಗೀತೆಗಳ ಮೂಲಕ ಉದ್ಘಾಟನೆ ನುಡಿಗಳ ನಾಡಿದರು.


ಬಳ್ಳಾರಿ ಜಿಲ್ಲಾ ಕಲಾವಿದರ ಸಂಘದ ಅಧ್ಯಕ್ಷ  ಯಲ್ಲನಗೌಡ ಶಂಕರ ಬಂಡೆ ಇವರು ರಂಗಭೂಮಿಯಲ್ಲಿ ಪ್ರದರ್ಶನ ಮಾಡುವುದರಿಂದ ಮಾನಸಿಕ ನೆಮ್ಮದಿ ಸಿಗುತ್ತದೆ ಎಂದರು.

ವೇದಿಕೆ ಮೇಲೆ ನಿವೃತ್ತ ಉಪನ್ಯಾಸಕರಾದ  ಎಂ ರಾಮಾಂಜನೇಯಲು, ಟ್ರಸ್ಟ್ ಅಧ್ಯಕ್ಷರಾದ ರಮಣಪ್ಪ ಭಜಂತ್ರಿ, ಶಿಕ್ಷಕರಾದ  ಎರ್ರಿಸ್ವಾಮಿ ಉಪಸ್ಥಿತರಿದ್ದರು. ನಂತರ ಜಡೇಶ ಎಮ್ಮಿಗನೂರು ಇವರಿಂದ ರಂಗ ಗೀತೆಗಳು, ಎರ್ರಿಸ್ವಾಮಿ,ಶಿಕ್ಷಕರಿಂದ  ಹಾಸ್ಯ ಕಾರ್ಯಕ್ರಮ ಹಾಗೂ ಕೆ.ಕಾಳಿದಾಸ ಇವರಿಂದ ಆದ್ಭುತವಾದ ಮಿಮಿಕ್ರಿ ಪ್ರದರ್ಶನ ಜರುಗಿತು. ಎಲೆಮಾರಿ ಕಾಯಿಯಂತೆ ಇರುವ ಬಯಲಾಟ ಕಲಾವಿದರಾದ  ಹೆಚ್ ಎಂ ಹನುಮವಧೂತ, ರಂಗಭೂಮಿ ಕಲಾವಿದರಾದ  ಕೆ ರವೀಂದ್ರನಾಥ ಇವರನ್ನು ರಂಗ ಪುರಸ್ಕಾರ ನೀಡಿ ಗೌರವಿಸಲಾಯಿತು.  ರಾಯಲ್ ಶಿಕ್ಷಣ ಮಹಾವಿದ್ಯಾಲಯ ಪ್ರಾಂಶಪಾಲರಾದ  ಫರ್ಜಾನ ಬೇಗಂ ಇವರು ಕಾರ್ಯಕ್ರಮದ ಅಧ್ಯಕ್ಷತೆ ಭಾಷಣ ಮಾಡಿದರು. ಪ್ರಾರಂಭದಲ್ಲಿ ಪ್ರಾಸ್ತಾವಿಕ ನುಡಿ ಮತ್ತು ಸ್ವಾಗತ

ರಮಣಪ್ಪ ಭಜಂತ್ರಿ, ಪ್ರಾರ್ಥನೆ ಮತ್ತು ವಂದನಾರ್ಪಣೆ ಜಡೇಶ ಎಮ್ಮಿಗನೂರು ಸೇರಿವೇರಿಸಿದರು. ಕೊನೆಯಲ್ಲಿ ಮಹಾವಿದ್ಯಾಲಯದ ವರು ಟ್ರಸ್ಟ್ ಅಧ್ಯಕ್ಷರನ್ನು ಸನ್ಮಾಸಿದರು. ಲಾಲ್ ರೆಡ್ಡಿ, ಮಹಾವಿದ್ಯಾಲಯ ಶಿಕ್ಷಕರಾದ  ಮಲ್ಲಿಕಾರ್ಜುನ, ಬಿ ಎಡ್ ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
೨೦ ವರ್ಷಗಳ ಹಿಂದೆ ಆದ ರಸ್ತೆ * ರಸ್ತೆ ತುಂಬೆಲ್ಲಾ ತಗ್ಗುದಿನ್ನಿಗಳದ್ದೇ ದರ್ಬಾರುಅದ್ದೂರಿ ಜನ್ಮದಿನ ಆಚರಣೆ ಬೇಡ; ಸೇವಾ ಕಾರ್ಯಕ್ರಮಗಳಿಗೆ ಆದ್ಯತೆ ನೀಡಿ: ಎ.ಎಸ್. ಪಾಟೀಲ ನಡಹಳ್ಳಿಶೈಕ್ಷಣಿಕ ಉತ್ಕೃಷ್ಟತೆ, ಸಂಶೋಧನೆ ಹಾಗೂ ನಾವೀನ್ಯತೆಗೆ ಒತ್ತು : ಡಾ. ಪ್ರಭಾಕರ ಕೋರೆ ಎಮ್ಮೆ ಹಾಲು ಪೂರೈಕೆಯಲ್ಲಿನ ಕುಸಿತ : ತೀವ್ರ ಕಳವಳ ವ್ಯಕ್ತಪಡಿಸಿದ ಬಾಲಚಂದ್ರ ಜಾರಕಿಹೊಳಿ ದಿ. 22-07-2026 ರಂದು ಶಾಸಕ ಬಾಬಾಸಾಹೇಬ ಪಾಟೀಲರ ಜನ್ಮದಿನದ ಪ್ರಯುಕ್ತ ರಕ್ತಧಾನ ಶಿಬಿರಆರೋಗ್ಯ ಕಾಳಜಿ ಮತ್ತು ಸುತ್ತ-ಮುತ್ತಲಿನ ಪರಿಸರ ಸ್ವಚ್ಛತಾ ಉಪನ್ಯಾಸದಲ್ಲಿ ಡಾ.ಜಗದೀಶ ಜಿಂಗಿ ಅಭಿಪ್ರಾಯಪ್ರತಿಭಾವಂತರಿಗೆ ಪುರಸ್ಕಾರ, ಬಸವ ಭವನ ನಿರ್ಮಾಣಕ್ಕೆ ವೇಗ: ವೀರಶೈವ ಲಿಂಗಾಯತ ಮಹಾಸಭಾ ನಿರ್ಧಾರಜಿಲ್ಲೆಯ ನರಗುಂದ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಬೆಳೆ ವೀಕ್ಷಣೆ ನಡೆಸಿದ ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ಪಿಂಚಣಿ ಸೇರಿದಂತೆ ಯಾವುದೇ ನಿವೃತ್ತಿ ಸೌಲಭ್ಯ ಸಿಗುವ ಮುನ್ನವೇ ಮುಖ್ಯೋಪಾಧ್ಯಾಯರ ನಿಧನ: ಎಸ್.ವಿ. ಸಂಕನೂರರ ತೀವ್ರ ಸಂತಾಪವಿಜಯನಗರ ಜಿಲ್ಲೆಯಲ್ಲಿ ಬೀದಿ ಬದಿ ವ್ಯಾಪಾರಿಗಳ ಹಕ್ಕುಗಳ ರಕ್ಷಣೆಗಾಗಿ ಜಿಲ್ಲಾಧಿಕಾರಿಗಳಿಗೆ ಮನವಿ