Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ರಂಗಕರ್ಮಿಗಳು ಮತ್ತು ಕಲಾವಿದರು ಅಧ್ಯಯನಶೀಲರಾಗಬೇಕು: ಸೋಮೇಶ್ ಉಪ್ಪಾರ್

ವಿಜಯನಗರ(ಮರಿಯಮ್ಮನಹಳ್ಳಿ): ಉತ್ತಮ ನಾಟಕ ಮತ್ತು ಉತ್ತಮ ಸಮಾಜ ನಿರ್ಮಿಸಲು ರಂಗಕರ್ಮಿಗಳು ಮತ್ತು ಕಲಾವಿದರು ಹೆಚ್ಚಾಗಿ ಅಧ್ಯಯನಶೀಲರಾಗುವುದರ ಜೊತೆಗೆ ಸಮಾಜವನ್ನು ಸೂಕ್ಷ್ಮವಾಗಿ ಗಮನಿಸುವ ವಿಶಿ? ದೃಷ್ಟಿಕೋನ ಹೊಂದಿರಬೇಕು, ಹಾಗಾದಾಗ ಮಾತ್ರ ಉತ್ತಮ ಸಮಾಜದ ಕನಸು ಸಾಧ್ಯವಾಗಲಿದೆ ಎಂದು ಉಪನ್ಯಾಸಕ ಹಾಗೂ ಪತ್ರಕರ್ತ ಎಂ. ಸೋಮೇಶ್ ಉಪ್ಪಾರ್ ಹೇಳಿದರು.

ಮರಿಯಮ್ಮನಹಳ್ಳಿಯ ದುರ್ಗಾದಾಸ ಕಲಾಮಂದಿರದಲ್ಲಿ ರಂಗಬಿಂಬ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿಜಯನಗರ ಜಿಲ್ಲೆ ಇವರ ಪರಿಶಿ? ಜಾತಿ, ಪರಿಶಿ? ಪಂಗಡ ಪ್ರಾಯೋಜಿತ ಕಾರ್ಯಕ್ರಮದಡಿಯಲ್ಲಿ ರಂಗ ಶ್ರಾವಣ ಸಂಭ್ರಮದಲ್ಲಿ ಜಿ. ಸೋಮಣ್ಣ ಗೊಲ್ಲರಹಳ್ಳಿ ತಂಡದವರಿಂದ ಸುಗಮ ಸಂಗೀತ ಹಾಗೂ ಬಸವರಾಜ ಟಿ. ತಂಡದವರಿಂದ ಸೀತಾ ಮಂಡೋದರಿ ನಾಟಕ ಪ್ರದರ್ಶನದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.

ನಿರ್ದೇಶಕ ಪ್ರೇಕ್ಷಕರಿಗೆ ಸದಾ ಉತ್ತಮ ಮೌಲ್ಯಗಳಿಂದ ಕೂಡಿದ ಉತ್ತಮ ನಾಟಕ ನೀಡಬೇಕೆಂದು ನಿರಂತರ ಪ್ರಯತ್ನ ಶೀಲರಾಗಿತ್ತಾರೆ.ಈ ಹಿನ್ನಲೆಯಲ್ಲಿ ನಿರ್ದೇಶಕರು, ರಂಗಕರ್ಮಿಗಳು ಮತ್ತು ಕಲಾವಿದರು ಹೆಚ್ಚು ಅಧ್ಯಯನ ಶೀಲರಾಗುವ ಮೂಲಕ ಸಮಾಜಮುಖಿಯಾಗಿ ಕೆಲಸ ಮಾಡುತ್ತಿರುವುದರಿಂದ ಉತ್ತಮ ನಾಟಕಗಳ ಪ್ರದರ್ಶನವಾಗುತ್ತಿರುವುದು ಸಂತ?ದ ಸಂಗತಿಯಾಗಿದೆ ಎಂದು ಅವರು ಹೇಳಿದರು.

ಇತ್ತಿಚಿನ ದಿನಗಳಲ್ಲಿ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಮಕ್ಕಳನ್ನು ತೊಡಗಿಸುವ ಬದಲು ಶಾಲೆಯ ಅಂಕಗಳ ಬೆನ್ನಟ್ಟಿರುವ ಪೋಷಕರು ಸಾಂಸ್ಕೃತಿಕ ಚಟುವಟಿಕೆಗಳ ಕಡೆ ಮಕ್ಕಳನ್ನು ಪ್ರೋತ್ಸ್ಸಾಹಿಸುವಲ್ಲಿ ವಿಫಲರಾಗುತ್ತಿರುವುದು ಕಂಡು ಬರುತ್ತಿದೆ. ವಿದ್ಯಾಭ್ಯಾಸದ ಜೊತೆಗೆ ಸಾಂಸ್ಕೃತಿಕ ಚಟುವಟಿಕೆಗಳನ್ನು ಬೆಳಸಿಕೊಂಡು ಹೋಗುವುದು ಬಹಳ ಮುಖ್ಯ. ಶಿಕ್ಷಣದ ಜೊತೆಗೆ ಕಲೆಯನ್ನು ಮುಂದುವರೆಸಿಕೊಂಡು ಹೋದಾಗ ಜೀವನದಲ್ಲಿ ಸಾಧನೆಗೆ ಸಹಕಾರಿಯಾಗಲಿದೆ ಎಂದು ಹೇಳಿದರು.

ಪ್ರತಿಯೊಬ್ಬರೂ ತಮ್ಮ ವೃತ್ತಿಯ ಜೊತೆಗೆ ರಂಗಕಲೆಯನ್ನು ಹವ್ಯಾಸವಾಗಿರಿಸಿಕೊಳ್ಳಬಹುದು. ಇದು ಬೇರೆ ಕ್ಷೇತ್ರಗಳಲ್ಲಿ ಸಾಧ್ಯವಿಲ್ಲ ಹವ್ಯಾಸಿ ವೈದನಾದರೆ ರೋಗಿ ಸಾಯುತ್ತಾನೆ. ಹವ್ಯಾಸಿ ಇಂಜಿನಿಯರ್ವಾದರೆ ಕಟ್ಟಡಗಳು ಬಿದ್ದು ಹೋಗುತ್ತವೆ. ಆದರೆ ಹವ್ಯಾಸಿ ರಂಗಕಲಾವಿದ ಆರೋಗ್ಯಕರವಾದ ಉತ್ತಮ ಸಮಾಜವನ್ನು ಕಟ್ಟುವ ಸಾಧ್ಯತೆ ಇದೆ ಎಂದು ಅವರು ಹೇಳಿದರು.

ರಂಗ ಶಿಕ್ಷಕ ಈಡಿಗರ ವೆಂಕಟೇಶ್ ಮಾತನಾಡಿ, ಮರಿಯಮ್ಮನಹಳ್ಳಿ ರಂಗ ಪರಿಸರದಿಂದಲ್ಲಿ ಹುಟ್ಟಿ ಬೆಳೆದ ನಾನು ಮರಿಯಮ್ಮನಹಳ್ಳಿಯಲ್ಲಿ ನಡೆಯುವ ನಿರಂತರ ರಂಗ ಚಟುವಟಿಕೆಗಳು ನನ್ನನ್ನು ಒಬ್ಬ ರಂಗಶಿಕ್ಷಕನನ್ನಾಗಿ ಬೆಳೆಸಿದೆ ಎಂದು ಅವರು ಹೇಳಿದರು.

ಪ. ಪಂ ಸದಸ್ಯೆ ಪೂಜಾ ಅಶ್ವಿನಿ ನಾಗರಾಜ ಸಭೆಯಲ್ಲಿ ಮಾತನಾಡಿದರು.ಪ. ಪಂ. ಉಪಾಧ್ಯಕ್ಷೆ ಲಕ್ಷ್ಮೀ ರೋಗಾಣಿ ಮಂಜುನಾಥ ಕಾರ್ಯಕ್ರಮ ಉದ್ಘಾಟಿಸಿದರು.ರಂಗಬಿಂಬದ ಅಧ್ಯಕ್ಷೆ ಎಂ. ಗಾಯತ್ರಿದೇವಿ ಸಮಾರಂಭದ ಅಧ್ಯಕ್ಷತೆವಹಿಸಿದ್ದರು.

ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತೆ ಡಾ. ಕೆ. ನಾಗರತ್ನಮ್ಮ, ಪ.ಪಂ. ಸದಸ್ಯ ಕೆ. ಮಂಜುನಾಥ, ಲಲಿತ ಕಲಾರಂಗದ ಅಧ್ಯಕ್ಷ ಎಚ್. ಮಂಜುನಾಥ, ಗಾಯಕ ಸಂತೋ? ಕುಮಾರ್ ಚಂದುಕರ, ರಂಗ ನಿರ್ದೇಶಕ ಸರದಾರ ಬಿ. ಸೋನು ಡ್ಯಾನ್ಸ್ ಅಕಾಡೆಮಿ ಸೋನು ಸಭೆಯಲ್ಲಿ ಮುಖ್ಯಅತಿಥಿಗಳಾಗಿ ಭಾಗವಹಿಸಿದ್ದರು.

ಜಿ. ಸೋಮಣ್ಣ ಗೊಲ್ಲರಹಳ್ಳಿ ತಂಡದವರಿಂದ ಸುಗಮ ಸಂಗೀತ ನಡೆಯಿತು. ಕೆ. ತಿಪ್ಪಣ್ಣ ಹಾರ್ಮೋನಿಯಂ, ಜಿ. ಕೆ. ಮೌನೇಶ್ ತಬಲ ಸಾಧ ನೀಡಿದರು.ನಂತರ ಬಸವರಾಜ ಟಿ. ತಂಡದವರಿಂದ ಕುವೆಂಪು ವಿರಚಿತ ಶ್ರೀ ರಾಮಾಯಣ ದರ್ಶನಂ ಮಾಹಕಾವ್ಯದಿಂದ ಆಯ್ದ ಭಾಗವನ್ನು ಆಧರಿಸಿದ ಸರದಾರ ಬಿ. ನಿರ್ದೇಶನದಲ್ಲಿ ಸೀತಾ ಮಂಡೋದರಿ ನಾಟಕ ಪ್ರದ್ರರ್ಶನಗೊಂಡಿತು. ನಾಟಕಕ್ಕೆ ನಾಗಲಾಪುರದ ಶರಣಬಸವ ಗಾಯನ ನೀಡಿದರು.

ಮರಿಯಮ್ಮನಹಳ್ಳಿಯ ಸೋನು ಡ್ಯಾನ್ಸ್ ಅಕಾಡೆಮಿಯ ವಿದ್ಯಾರ್ಥಿಗಳು ಭರತನಾಟ್ಯ ಪ್ರದರ್ಶನ ನೀಡಿದರು.ಜಿ. ಮಲ್ಲಪ್ಪ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಪ್ರಕೃತಿ ಎನ್. ದೇವನಕೊಂಡ ಸ್ವಾಗತಿಸಿದರು. ಕೆ. ನಾಗೇಶ ನಿರೂಪಿಸಿದರು. ರಂಗಬಿಂಬದ ಕಾರ್ಯದರ್ಶಿ ಸಿ. ಕೆ. ನಾಗರಾಜ ವಂದಿಸಿದರು.

 

 
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ