Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ರಾಷ್ಟ್ರೀಯ ಸೇವಾ ಯೋಜನೆ ಶಿಬಿರದ ಕಾರ್ಯ ಶ್ಲಾಘನೀಯ: ಬಾಬಾಸಾಹೇಬ ಪಾಟೀಲ 

ನೇಸರಗಿ:  ಗ್ರಾಮೀಣ  ಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ  ಹೆಣ್ಣು ಬ್ರೂಣ ಹತ್ಯೆ ನಿಲ್ಲಿಸಿ, ಸಮಾನತೆ, ಪಶು ಇಲಾಖೆಯ ಜಾಗ್ರತೆ, ಅರೋಗ್ಯ, ಧನಕರುಗಳ ಲಸಿಕೆ, ದೇವಸ್ಥಾನ, ಗ್ರಾಮದ  ಸ್ವಚ್ಛತೆಗೆ    ಶಿಬಿರಗಳು ಉನ್ನತ ಮಟ್ಟದಲ್ಲಿ ಸೇವೆ ಸಲ್ಲಿಸುತ್ತಿದ್ದು ಶಾಲಾ ಕಾಲೇಜು ವತಿಯಿಂದ ನುರಿತ ವಿದ್ಯಾರ್ಥಿಗಳು ಅಧ್ಯಯನ ಮಾಡಿ ಕಾಲೇಜು ವತಿಯಿಂದ ಗ್ರಾಮೀಣ ಮಟ್ಟದ ರೈತರಿಗೆ ಜಾಗ್ರತೆ, ಕೃಷಿ ಅಧ್ಯಯನ, ಸಾಮಾಜಿಕ ಕಳಕಳಿ, ನ್ಯಾಯ, ಮೂಲಭೂತ ಸೌಕರ್ಯಗಳ ಬಗ್ಗೆ ತಿಳುವಳಿಕೆ ಕಾರ್ಯಕ್ರಮಗಳಲ್ಲಿ ರಾಷ್ಟ್ರೀಯ ಸೇವೆ ಯೋಜನೆ ಕಾರ್ಯ ಜನನುರಾಗಿಯಾಗಿದೆ ಎಂದು ಚನ್ನಮ್ಮನ ಕಿತ್ತೂರು ಶಾಸಕರಾದ ಬಾಬಾಸಾಹೇಬ ಪಾಟೀಲ ಹೇಳಿದರು.


    ಅವರು ಸೋಮವಾರದಂದು  ಸಮೀಪದ ಸುತಗಟ್ಟಿ ಗ್ರಾಮದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ, ನೇಸರಗಿ ಸರ್ಕಾರಿ ಸ್ವತಂತ್ರ ಪದವಿ ಪೂರ್ವ  ಕಾಲೇಜು, ರಾಷ್ಟ್ರೀಯ ಸ್ವಯಂ ಯೋಜನೆ ವತಿಯಿಂದ 2024-25 ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರ ಉದ್ಘಾಟನೆ ನೆರವೇರಿಸಿ ಮಾತನಾಡಿ ಈ ಗ್ರಾಮದಲ್ಲಿ 7 ದಿನಗಳ ಕಾಲ ರಾಷ್ಟ್ರೀಯ ಸೇವಾ ಯೋಜನಾ  ಶಿಬಿರ ನಡೆಯುತ್ತಿರುವದು ಹೆಮ್ಮೆಯ ವಿಷಯ ಈ ಶಿಬಿರದಲ್ಲಿ ಕೂಡಿ ಬಾಳಿದರೆ ಸ್ವರ್ಗ ಸುಖ, ಧಯವೇ ಧರ್ಮದ ಮೂಲ, ರೈತ ದೇಶದ ಬೆನ್ನೆಲುಬು, ಮನಸಿದ್ದರೆ ಮಾರ್ಗ, ಕಾಯಕವೇ ಕೈಲಾಸ, ಜನಸೇವೆ ಜನಾರ್ಧನ ಸೇವೆ ಈ ವಿಷಯಗಳ ಬಗ್ಗೆ ಉಪನ್ಯಾಸ ನಡೆಯಲಿದ್ದು  ಇವುಗಳ  ಸದುಪಯೋಗವನ್ನು ಸುತಗಟ್ಟಿ ಗ್ರಾಮಸ್ಥರು ಪಡೆಯಬೇಕು ಎಂದರು.


  ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷ ಶ್ರೀಮತಿ ಶಾಂತವ್ವ ಸೋ. ದೇಯಣ್ಣವರ, ಉಪಾಧ್ಯಕ್ಷ ಶ್ರೀಮತಿ ಪಾರ್ವತಿ ಬಡಿಗೇರ, ಹಿರಿಯರಾದ ಬಸವರಾಜ ಧೂಳಪ್ಪನವರ, ಕರ್ನಾಟಕ ಯುವ ಸೇನೆಯ ಜಿಲ್ಲಾಧ್ಯಕ್ಷ ಬಸವರಾಜ ತುಬಾಕದ,ರುದ್ರಪ್ಪ ರಾಮಕಿ, ಪಿ ಯು ಕಾಲೇಜು ಪ್ರಾಂನ್ಸುಪಾಲರಾದ ಎನ್ ಎಮ್ ಕುದರಿಮೋತಿ, ಕಾಲೇಜು ಸುಧಾರಣಾ ಸಮಿತಿ ಉಪಾಧ್ಯಕ್ಷ ಬಸವರಾಜ ಚಿಕ್ಕನಗೌಡರ, ಎನ್ ಎಸ್ ಎಸ್ ಸಂಯೋಜಕರಾದ ಎಸ್ ವಿ. ದೊಡಮನಿ, ಉಪನ್ಯಾಸಕರಾದ ಎಮ್ ಎಚ್ ಬಡಿಗೇರ, ಶ್ರೀಮತಿ ಸಿ ಬಿ ರೊಟ್ಟಿ,ಎಸ್ ಬಿ ಪಾಟೀಲ, ಡಾ. ನಿಲ್ಲಪ್ಪ ವಾಲೀಕರ,ಎಮ್ ಎಚ್ ಬೆಟಗೇರಿ, ಗೀತಾ ಬಿಸಗುಪ್ಪಿ, ಪ್ರಶಾಂತ ಭೂಳನ್ನವರ, ದೀಪಾ ರಾಯವ್ವಗೋಳ, ಶ್ರೀಮತಿ ಸಂದ್ಯಾ,ಕರುಣಾ ಗಾಣಿಗೇರ, ಎಮ್ ಎನ್ ಬಾಳಿಕಾಯಿ, ಬಸವರಾಜ್ ಬುಳ್ಳಾರ, ವಿದ್ಯಾರ್ಥಿ ಕಾರ್ಯದರ್ಶಿಗಳಾದ ಮಾರುತಿ ಸಾತನವರ, ಶಿವಪುತ್ರ ಪೂಜೇರಿ, ಸುಮಿತ್ರಾ ಅಡವಿಸ್ವಾಮಿಮಠ, ಜ್ಯೋತಿ ಅಮಾತಿ, ಸೇರಿದಂತೆ ಸುತಗಟ್ಟಿ ಗ್ರಾ ಪಂ ಸದಸ್ಯರು, ಗ್ರಾಮದ ಹಿರಿಯರು, ರೈತರು ಉಪಸ್ಥಿತರಿದ್ದರು.


Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ