ಕಾಗವಾಡ: "ಮಾನವ ಕುಲಕ್ಕೆ ಶಾಂತಿ ಮತ್ತು ಅಹಿಂಸೆಯ ಮಾರ್ಗ ತೋರಿದ ಭಗವಾನ್ ಬುದ್ಧರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಉತ್ತಮ ಜೀವನ ನಡೆಸಲು ಸಾಧ್ಯ," ಎಂದು ಭೀಮಶಕ್ತಿ ಅಭಿವೃದ್ಧಿ ಸಂಘದ ಅಧ್ಯಕ್ಷರಾದ ಪ್ರಕಾಶ ಧೋಡಾರೆ ಹೇಳಿದರು.
ಕಾಗವಾಡ ಪಟ್ಟಣದ ಬಸವ ನಗರದ ಡಾ. ಬಿ.ಆರ್. ಅಂಬೇಡ್ಕರ್ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಬುದ್ಧ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬುದ್ಧರು ಬೋಧಿಸಿದ ಚತುರಾರ್ಯ ಸತ್ಯಗಳು ಹಾಗೂ ಅಷ್ಟಾಂಗ ಮಾರ್ಗಗಳು ಇಂದಿಗೂ ಪ್ರಸ್ತುತವಾಗಿದ್ದು, ದಯೆ, ಕರುಣೆ ಮತ್ತು ಅಹಿಂಸೆಯೇ ಧರ್ಮದ ಮೂಲವಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಪೀರಗೌಡ ಕಾಂಬಳೆ ಅವರು, ಬುದ್ಧರ ಪ್ರತಿಮೆಯನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ಎಷ್ಟು ಮುಖ್ಯವೋ, ಅವರ ತತ್ವಗಳನ್ನು ಮನಸ್ಸಿನಲ್ಲಿ ಸ್ಥಾಪಿಸಿಕೊಳ್ಳುವುದು ಅಷ್ಟೇ ಮುಖ್ಯ ಎಂದರು.
ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ವಿನೋದ ಹುಲಸಾರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ವೇಳೆ. ಪ್ರಕಾಶ ಧೋಡಾರೆ ,ವಿನೋದ,ವಿನೋದ ಹುಲಸಾರ,ದೇವನೆ, ಸುನೀಲ ಮದಭಾವಿ, ದೀಪಕ ಕಾಂಬಳೆ, ವಿದ್ಯಾಧರ್ ದೋಂಡಾರೆ, ಸತೀಶ ಬೀರನಗೆ, ಶೀಲಾಧರ ಕಾಂಬಳೆ,ಅಮರ ಕಾಂಬಳೆ, ಕಿರಣ ಸಂಭಾಳೆ, ಅನಿಕೇತ ಕಾಂಬಳೆ,ಆಕಾಶ ಕಾಂಬಳೆ,ಸೇರಿದಂತೆ ಸಮಾಜದ ಮುಖಂಡರು ಹಾಗೂ ಭೀಮಶಕ್ತಿ ಸಂಘದ ಕಾರ್ಯಕರ್ತರು ಉಪಸ್ಥಿತರಿದ್ದರು.