Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಜನಪ್ರಿಯ ಕರಾಟೆ ಪಟು"  ದಾಸರ ಸ್ವಾಮಿ" ಇನ್ನಿಲ್ಲ

ವಿಜಯನಗರ (ಮರಿಯಮ್ಮನಹಳ್ಳಿ), ಜುಲೈ,31: ಪಟ್ಟಣದ ಕರಾಟೆ ಪಟು ಪೈಂಟರ್ ದಾಸರ ಸ್ವಾಮಿ 30ವರ್ಷ, ರಸ್ತೆ ಅಪಘಾತದಲ್ಲಿ ಅಪಘಾತಕ್ಕಿಡಾಗಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಸಂಧರ್ಭದಲ್ಲಿ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟುವಂತಿತ್ತು. ಮೃತರು ಕುಟುಂಬದ ಹಿರಿಯ ಮಗನಾಗಿ ಒಬ್ಬನೇ ಗಂಡು ಮಗನಾಗಿದ್ದನ. ಈತನಿಗೆ ಪತ್ನಿ ಮತ್ತು 3ವರ್ಷದ ಒಂದು ಹೆಣ್ಣು ಮಗು ಇದ್ದು. ಪತ್ನಿ 9 ತಿಂಗಳ ಗರ್ಭಿಣಿ,  ಮೃತರು ತಂದೆ, ತಾಯಿ ಇಬ್ಬರು ಸಹೋದರಿಯರನ್ನು ಹೊಂದಿದ್ದು ಅಪಾರ ಬಂಧು-ಬಳಗದವರನ್ನು ಅಗಲಿದ್ದಾರೆ.


ಪಟ್ಟಣದ 1ನೇ ವಾರ್ಡಿನ ಯುವಕ ದಾಸರ ಸ್ವಾಮಿ ಕರಾಟೆ ಪಟುವಾಗಿದ್ದನು, ಈತನು ವೃತ್ತಿಯಲ್ಲಿ ಮನೆ ಪೆಂಟರ್  ಕೆಲಸ ಮಾಡುತ್ತಿದ್ದನು.  ಜನರೊಂದಿಗೆ ಸದಾ ನಗುಮುಖದೊಂದಿಗೆ ವ್ಯವಹರಿಸುತ್ತ ಉತ್ತಮ ಜನ ಸಂಪರ್ಕಹೊಂದಿ ಅಪಾರ ಗೌರವ, ವಿಶ್ವಾಸ ಹೊಂದಿದ್ದನು. ಈತನ ಸಾವಿನ ಸುದ್ದಿ ತಿಳಿದು ವಾರ್ಡಿನ ಜನರಲ್ಲಿ ಆಕ್ರಂದನ ಮುಗಿಲು ಮುಟ್ಟಿತು.

ಮೃತ ದೇಹವನ್ನು ಮರಿಯಮ್ಮನಹಳ್ಳಿಯ ಸ್ವಗೃಹದ ಬಳಿ ತರುತ್ತಿದ್ದಂತೆ ಸಾವಿರಾರು ಸಂಖ್ಯೆಯಲ್ಲಿ ಜಮಾವಣೆಗೊಂಡು ಸ್ನೇಹ ಬಳಗ, ಯುವಕರ, ಸ್ಥಳೀಯರ ಮತ್ತು ಕುಟುಂಬದವರ ಕಣ್ಣೀರ ಧಾರೆ ಏಳತಿರದಂತಿತ್ತು.


ಘಟನೆ : ಮೃತರು ಹೆಂಡತಿಯ ಸಂಬಂದಿಕರ ಊರು ಸಂಡೂರು ತಾಲ್ಲೂಕು ಅಗ್ರಹಾರ ಗ್ರಾಮಕ್ಕೆ ಹೋಗಬೇಕೆಂದು ದಿನಾಂಕ : 29.07.2025 ರಂದು ಸಂಜೆ 7.30 ರ ಸುಮಾರಿಗೆ ಮರಿಯಮ್ಮನಹಳ್ಳಿಯಿಂದ ಕೂಡ್ಲಿಗಿ ಮೂಲಕ ತನ್ನ ಮೋಟಾರ್ ಸೈಕಲ್ ಚಲಾಯಿಸಿಕೊಂಡು ಹೋಗುತ್ತಿರುವಾಗ ನಿಯಂತ್ರಣ ತಪ್ಪಿ ಎ.ಡಿ. ಗುಡ್ಡ ಗ್ರಾಮದ ಆದರ್ಶ ಶಾಲೆಯ ಸಮೀಪ ಇರುವ ರಸ್ತೆ ತಿರುವಿನಲ್ಲಿ ರಸ್ತೆಯ ಪಕ್ಕಕ್ಕೆ ಹೋಗಿ ಬೈಕ್ ನೊಂದಿಗೆ ಬಿದ್ದು. ತಲೆಯ ಹಿಂಬಾಗಕ್ಕೆ ತೀರ್ವವಾದ ಒಳಪೆಟ್ಟು ಮತ್ತು ರಕ್ತಗಾಯವಾಗಿ ಚಿಕಿತ್ಸೆಗಾಗಿ ಕೂಡ್ಲಿಗಿ ಸರ್ಕಾರಿ ಆಸ್ಪತ್ರೆ, ಬಳ್ಳಾರಿಯ ಸರ್ಕಾರಿ ಆಸ್ಪತ್ರೆಯಲ್ಲಿ ಒಮ್ಮೆ ಚಿಕಿತ್ಸೆ ಪಡೆದು ದಿನಾಂಕ : 30.7.2025 ರಂದು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ಹೋಗುತ್ತಿರುವಾಗ  ರಾತ್ರಿ 9:45ರ ಗಂಟೆಗೆ ಮಾರ್ಗದ ಮಧ್ಯ ಮೃತಪಟ್ಟಿದ್ದಾಗಿ ಕುಟುಂಬಸ್ಥರಿಂದ ತಿಳಿದು ಬಂದಿದೆ. ಈ ಕುರಿತು ಕೂಡ್ಲಿಗಿ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ