Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸಕಲ ಸರ್ಕಾರಿ ಗೌರವದೊಂದಿಗೆ  ಅಗ್ನಿವೀರ ಯೋಧನ ಅಂತ್ಯಕ್ರಿಯೆ ; ಐಗಳಿ ಗ್ರಾಮದಲ್ಲಿ  ಐತಿಹಾಸಿಕ ಅಂತಿಮ ಯಾತ್ರೆ

ಅಥಣಿ : ಪಂಜಾಬ ರಾಜ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಹೃದಯಾಘಾತದಿಂದ ನಿಧನ ಹೊಂದಿದ  ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಐಗಳಿ ಗ್ರಾಮದ  ಅಗ್ನಿವೀರ ಯೋಧ  ಕಿರಣರಾಜ ಕೇದಾರಿ ತೆಲಸಂಗ (23)  ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ಸ್ವಗ್ರಾಮದಲ್ಲಿ  ಗುರುವಾರ  ಸಾಯಂಕಾಲ  ನೆರವೇರಿತು.

   ಕಳೆದ  ಮಂಗಳವಾರ  ಪಂಜಾಬ ಮಿಲಟರಿ ಯೂನಿಟದಲ್ಲಿ  ಓಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದ  ಅಗ್ನಿವೀರ ಯೋಧ  ಕಿರಣರಾಜ್  ಹೃದಯಾಘಾತದಿಂದ ನಿಧನ ಹೊಂದಿದ್ದರು. ಮೃತರ ಪಾರ್ಥಿವ ಶರೀರವು  ಪಂಜಾಬದಿಂದ ದೆಹಲಿ  ವಿಮಾನದ ಮೂಲಕ ಗುರುವಾರ  ಬೆಳಿಗ್ಗೆ ಬೆಳಗಾವಿಗೆ ತರಲಾಯಿತು.  ಬೆಳಗಾವಿಯಿಂದ  ರಸ್ತೆ ಮೂಲಕ ಸೇನಾ ಆಂಬುಲೆನ್ಸ್‌ ವಾಹನದ ಮೂಲಕ ಅಥಣಿ  ಪಟ್ಟಣಕ್ಕೆ ಬರಮಾಡಿಕೊಳ್ಳಲಾಯಿತು. ತಹಸೀಲ್ದಾರ ಸಿದ್ದರಾಯ ಬೋಸಗಿ, ಸಿಪಿಐ ಸಂತೋಷ ಹಳ್ಳೂರ, ತಾಲೂಕ ಪಂಚಾಯಿತಿ ಅಧಿಕಾರಿ ಶಿವಾನಂದ ಕಲ್ಲಾಪುರ  ಅವರ ನೇತೃತ್ವದಲ್ಲಿ ಅನೇಕ ಅಧಿಕಾರಿಗಳು, ಮಾಜಿ ಸೈನಿಕರು, ವಿವಿಧ ಸಂಘ-ಸಂಸ್ಥೆಯ ಪದಾಧಿಕಾರಿಗಳು ಅಗಲಿದ ಯೋಧನ  ಪಾರ್ಥಿವ ಶರೀರಕ್ಕೆ ಪುಷ್ಪ ನಮನ ಸಲ್ಲಿಸಿ ಗೌರವದಿಂದ ಬರಮಾಡಿಕೊಂಡರು.

 ಅಥಣಿ ಪಟ್ಟಣದ  ಹೊರವಲಯದಲ್ಲಿರುವ  ಶ್ರೀ ಎಲ್ಲಮ್ಮ ದೇವಿ ದೇವಸ್ಥಾನದಿಂದ ಆರಂಭಗೊಂಡ   ಅಂತಿಮ ಯಾತ್ರೆ ಪಟ್ಟಣದ ಶಿವಯೋಗಿ, ಡಾ. ಅಂಬೇಡ್ಕರ್ ವೃತ್ತ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದ  ಮೂಲಕ  ಯೋಧನ ಸ್ವ ಗ್ರಾಮ  ಐಗಳಿಗೆ ಬೀಳ್ಕೊಡಲಾಯಿತು.

 ಐಗಳಿ ಗ್ರಾಮದಲ್ಲಿ  ಅಗ್ನಿ ವೀರನ

ಐತಿಹಾಸಿಕ ಮೆರವಣಿಗೆ :

ಅಗ್ನಿವೀರ ಯೋಧನ ಸಾವಿನ ಸುದ್ದಿಯಿಂದ ಅಥಣಿ ತಾಲೂಕಿನ ಐಗಳಿ ಗ್ರಾಮದಲ್ಲಿ ಮೂರು ದಿನಗಳಿಂದ ಶೋಕ ಉಂಟಾಗಿತ್ತು. ಇಡೀ ಗ್ರಾಮದ  ಎಲ್ಲ ವ್ಯಾಪಾರಸ್ಥರು, ವಿವಿಧ ಸಂಘ ಸಂಸ್ಥೆಗಳು  ತಮ್ಮ ಕಾರ್ಯಕ್ರಮಗಳನ್ನು, ವ್ಯಾಪಾರ ವಹಿವಾಟವನ್ನು  ಬಂದ್ ಮಾಡಿ  ಯೋಧನ ಅಂತಿಮ ದರ್ಶನದಲ್ಲಿ ಪಾಲ್ಗೊಂಡಿದ್ದರು ಐಗಳಿ ಗ್ರಾಮದ  ಮಹತಪಸ್ವಿ ಅಪ್ಪಯ್ಯ ಸ್ವಾಮಿಗಳ ದೇವಸ್ಥಾನದಿಂದ  ಭವ್ಯ ಮೆರವಣಿಗೆಯ ಮೂಲಕ  ಯೋಧನ  ಪಾರ್ಥಿವ  ಶರೀರವನ್ನು  ಗ್ರಾಮದಲ್ಲಿ ಬರಮಾಡಿಕೊಳ್ಳಲಾಯಿತು. ಗ್ರಾಮ ಪಂಚಾಯಿತಿ ಆಡಳಿತ ಹಾಗೂ ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು  ಯೋಧನ ಪಾರ್ಥಿವ ಶರೀರಕ್ಕೆ ಪುಷ್ಪ ನಮನ ಸಲ್ಲಿಸಿ ಗೌರವಿಸಿದರು. ತ್ರಿವರ್ಣ  ಧ್ವಜಗಳನ್ನು, ಅಗ್ನಿವೀರ ಯೋಧ  ಕಿರಣರಾಜ್  ಭಾವಚಿತ್ರ  ಹಿಡಿದುಕೊಂಡು ನೂರಾರು ಯುವಕರು  ಬೋಲೋ ಭಾರತ್ ಮಾತಾ ಕಿ ಜೈ,  ಒಂದೇ ಮಾತರಂ,  ಜೈ ಜವಾನ್ ಜೈ ಕಿಸಾನ್  , ಅಗ್ನಿವೀರ  ಕಿರಣ ರಾಜ್ ಗೆ ಜಯವಾಗಲಿ  ಎಂಬ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ವಿವಿಧ ಖಾಸಗಿ ವಾಹನಗಳು, ಶಾಲಾ ವಾಹನಗಳು, ಗ್ರಾಮದ ಟ್ಯಾಕ್ಟರ್ ಮಾಲೀಕರು  ತಮ್ಮ ವಾಹನಗಳಿಗೆ  ವೀರ ಯೋಧನ  ಭಾವಚಿತ್ರ ಮತ್ತು  ರಾಷ್ಟ್ರಧ್ವಜ ಕಟ್ಟಿಕೊಂಡು  ಸಾಲಾಗಿ ಮೆರವಣಿಗೆಯಲ್ಲಿ ಸಾಗಿದ್ದು, ವಿದ್ಯಾರ್ಥಿಗಳು ಮತ್ತು ಯುವಕರು  ಮೆರಗವಣಿಗೆಯಲ್ಲಿ ಸಾಲಾಗಿ ಸಾಗಿದ್ದು ರಾಷ್ಟ್ರೀಯ ಹಬ್ಬದ ಸಡಗರದಂತೆ  ಸ್ವಾಭಿಮಾನದಿಂದ ಅಗ್ನಿವೀರ ಕಿರಣರಾಜ  ಪಾರ್ಥಿವ ಶರೀರವನ್ನು  ಭವ್ಯ ಮತ್ತು ಐತಿಹಾಸಿಕ ಮೆರವಣಿಗೆ ಮಾಡಿ  ಗೌರವ ನಮನ ಸಲ್ಲಿಸಿದರು.

   ಮುಗಿಲು ಮುಟ್ಟಿದ

ಕುಟುಂಬಸ್ಥರ ಆಕ್ರಂದನ : ಸೈನಿಕನ ತಂದೆ ಕೇದಾರಿ, ತಾಯಿ ರೇಣುಕಾ, ಅಜ್ಜ ಸತ್ಯಪ್ಪ, ಅಜ್ಜಿ ಯಲ್ಲವ್ವ, ಅಣ್ಣ ರವಿ, ಸಹೋದರಿ ನಿವೇದಿತಾ ಹಾಗೂ ಬಂಧು ಬಳದವರ ರೋಧನ ಮುಗಿಲು ಮುಟ್ಟಿತ್ತು. ಕಿರಣರಾಜ್‌ನ ಮೃತದೇಹ ಹೊತ್ತು ವಾಹನ ಗ್ರಾಮದಲ್ಲಿ ಬರುತ್ತಿದ್ದಂತೆ ಅಪಾರ ಸಂಖ್ಯೆಯಲ್ಲಿ ಸೇರಿದ ಜನರ ದುಃಖ, ಆಕ್ರಂದನ ಕರಳು ಚಿರ್ ಎನಿಸುವಂತಿತ್ತು. ತಂದೆ-ತಾಯಿ, ತಮ್ಮ ಮಗನ ಮುಖದರ್ಶನ ಮಾಡುವಾಗ ಬಿಕ್ಕಿ-ಬಿಕ್ಕಿ ಅಳುತ್ತಿದ್ದ ದೃಶ್ಯ ಕರಳು ಕರಗಿ ನೀರಾಗುವಂತಿತ್ತು.

  ಈ ಘಟನೆಯಿಂದ ಮನೆಯ ಕಳಶವೇ ಮುರಿದಂತಾಗಿದೆ ಆದರೆ ದೇಶ ಸೇವೆಯಲ್ಲಿಯೇ ಪ್ರಾಣ ಕಳೆದುಕೊಂಡ ಮಗನನ್ನು ಕಂಡು ಹೆಮ್ಮೆ ಎನಿಸುತ್ತದೆ ಎಂದು ತಂದೆ ಕೇದಾರಿ ತೆಲಸಂಗ ದುಃಖವನ್ನು ನುಂಗಿ ಗಟ್ಟಿಧನಿಯಲ್ಲಿ ತೋಡಿಕೊಂಡರು ಯೋಧನ ಅಗಲಿಕೆಗೆ ಗ್ರಾಮಸ್ಥರು ಕಂಬನಿ ಮಿಡಿದರು.

 ಸಕಲ ಸರ್ಕಾರಿ ಗೌರವ ನಮನ : ಮೃತ ಯೋಧನ ಸ್ವಗ್ರಾಮದ ಐಗಳಿ ಗ್ರಾಮದ ಹೊರವಲಯದ ಆದರ್ಶ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಪಂಜಾಬದ ಪಟಿಯಾಲ್ ರೆಜೀಮೆಂಟ್ ನಾಯಕ ಸುಭೇಧಾರ ಜಾಪರ್, ನಾಯಕ ಪ್ರದೀಪ್, ಹವಾಲ್ದಾರ್ ಚವ್ಹಾಣ, ನಾಯಕ ಸುಭೇದಾರ ಸುರೇಶ  ಅಗಲಿದ ಯೋಧನ ಪಾರ್ಥಿವ ಶರೀರಕ್ಕೆ ರಾಷ್ಟ್ರಧ್ವಜವನ್ನ ಹೊಂದಿಸಿ  ಸೇನಾಧಿಕಾರಿಗಳಿಂದ  ಪುಷ್ಪ ನಮನ  ಸಲ್ಲಿಸಿ  ಶಸ್ತ್ರಾಸ್ತ್ರಗಳಿಂದ  5 ಸುತ್ತು  ಮದ್ದು ಗುಂಡು ಹಾರಿಸಿ ಗೌರವ ನಮನ ಸಲ್ಲಿಸಿದರು. ನಂತರ ರಾಷ್ಟ್ರಧ್ವಜವನ್ನು  ಸೇನಾಧಿಕಾರಿಗಳು  ಕುಟುಂಬಸ್ಥರಿಗೆ ಹಸ್ತಾಂತರಿಸಿದರು. ನಂತರ ಸಾರ್ವಜನಿಕರಿಗೆ ಯೋಧನ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.

 ಗಣ್ಯರ ಕಂಬನಿ : ಅಥಣಿಯ ಶೆಟ್ಟರ ಮಠದ ಮರಳಸಿದ್ಧ ಸ್ವಾಮೀಜಿ, ತೆಲಸಂಗದ ವೀರೇಶ ದೇವರು,  ಗ್ರಾಮ ಪಂಚಾಯಿತಿ ಅಧ್ಯಕ್ಷ  ಶಕುಂತಲಾ  ಅಣ್ಣಾಸಾಬ ಪಾಟೀಲ, ಮಾಜಿ ಶಾಸಕ ಶಹಜಾನ ಡೊಂಗರಗಾಂವ, ಮಹೇಶ ಕುಮಟಳ್ಳಿ, ಕಾಂಗ್ರೆಸ್ ಮುಖಂಡ  ಗಜಾನನ ಮಂಗಸೂಳಿ, ಗಿರೀಶ ಬುಠಾಳಿ, ಬಸವರಾಜ ಬೂಟಾಳಿ, ಸಿ ಎಸ್ ನೇಮಗೌಡ, ಶಿವಾನಂದ ಸಿಂಧೂರ, ಅಪ್ಪಾಸಾಬ ತೆಲಸಂಗ, ಕಲ್ಲಪ್ಪ ಆಸಂಗಿ, ಮಾಜಿ ಸೈನಿಕ ಸಂಘದ ಅಧ್ಯಕ್ಷ  ಅಣ್ಣಗೌಡ ಪಾಟೀಲ, ಗುರಪ್ಪ ಮಗದುಮ್  ಸಿದ್ದರಾಜ ಬೋರಡೆ ಹೊನಗೌಡ ಪಾಟೀಲ, ವಿಜಯಪೂರ ಜಿಲ್ಲೆಯ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಎಲ್. ಕೆ. ರಾಮಪ್ಪ, ಸೇರಿದಂತೆ  ಗ್ರಾಮ ಪಂಚಾಯಿತಿ ಸದಸ್ಯರು, ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು ಸೇರಿದಂತೆ ಐಗಳಿ ಹಾಗೂ ಸುತ್ತಮುತ್ತಲಿನ  ಗ್ರಾಮಸ್ಥರು ಸಾವಿರಾರು ಸಂಖ್ಯೆಯಲ್ಲಿ ಜನಸ್ತೋಮ  ಅಂತಿಮ ದರ್ಶನದಲ್ಲಿ ಪಾಲ್ಗೊಂಡು ಅಗಲಿದ ಯೋಧನಿಗೆ ಗೌರವ ನಮನ ಸಲ್ಲಿಸಿದರು.

Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ