Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಎರಡನೇ ದಿನದ 9 ನೇ ಬಳ್ಳಾರಿ ಸಾಂಸ್ಕೃತಿಕ ಜನೋತ್ಸವ 


ಬಳ್ಳಾರಿ,ಜೂ.10.: ಆವಿಷ್ಕಾರ ಸಂಘಟಿತ ೯ನೇ ಬಳ್ಳಾರಿ ಜನೋತ್ಸವದ ಎರಡನೇ ದಿನದ ಕಾರ್ಯಕ್ರಮಗಳು ಯಶಸ್ವಿಯಾಗಿ ಜರುಗಿದವು. ಆರಂಭದಲ್ಲಿ ಯುವಜನ ಸಾಂಸ್ಕೃತಿಕ ವೇದಿಕೆಯಿಂದ ‘ಗೋಸುಂಬೆ' ಎಂಬ ಕಿರು ನಾಟಕ ಪ್ರಸ್ತುತಗೊಂಡಿತು. ನಂತರ ಬಿ. ಎಂ. ಗಿರಿರಾಜ್  ನಿರ್ದೇಶನದ ಹಾಗೂ ಅಚ್ಯುತ್ ಕುಮಾರ್ ನಟನೆಯ, ಪೌರ ಕಾರ್ಮಿಕರ ಜೀವನವನ್ನು ಆಧರಿಸಿದ ‘ಅಮರಾವತಿ' ಸಿನಿಮಾ ಪ್ರದರ್ಶನ ನಡೆಯಿತು.


 ಸಿನಿಮಾ ಸಂವಾದವನ್ನು ಆವಿಷ್ಕಾರದ ರಾಜ್ಯ ಸಂಘಟನಾಕಾರ ಎಸ್.ಎನ್.ಸ್ವಾಮಿಯವರು ನಡೆಸಿಕೊಟ್ಟರು. ಜನತೆಯಿಂದ ಅತ್ಯಮೂಲ್ಯವಾದ  ಪ್ರಶ್ನೆಗಳು ಮತ್ತು ಅಭಿಪ್ರಾಯ ಮೂಡಿಬಂದವು.  ಎಸ್. ಎನ್. ಸ್ವಾಮಿಯವರು ಈ ಪ್ರಶ್ನೆಗಳಿಗೆ ಉತ್ತರಿಸುತ್ತಾ “ಈ ‘ಅಮರಾವತಿ' ಸಿನಿಮಾ ನಮ್ಮ ಮುಂದೆ ಹಲವಾರು ವಿಷಯಗಳನ್ನು ತೆರೆದಿಡುತ್ತದೆ. ರೋಬೋಟಿಕ್ಸ್ ಹಾಗೂ ಕೃತಕ ಬುದ್ಧಿಮತ್ತೆಯ ತಂತ್ರಜ್ಞಾನದಲ್ಲಿ ದಾಪುಗಾಲು ಇಡುತ್ತಿದ್ದೇವೆ ಎಂದು ನಮ್ಮ ಆಳ್ವಿಕರು ಎದೆಯುಬ್ಬಿಸಿ ಮಾತನಾಡುತ್ತಿರುವ ಇಂದಿನ ದಿನಗಳಲ್ಲೂ ಮನುಷ್ಯನನ್ನು ಮ್ಯಾನ್ ಹೋಲ್ ಗೆ ಇಳಿಸಿ ಸ್ವಚ್ಛತಾ ಕಾರ್ಯವನ್ನು ಮಾಡಿಸಲಾಗುತ್ತಿದೆ. ವಾಸ್ತವದಲ್ಲಿ ತಂತ್ರಜ್ಞಾನವು ಇಲ್ಲಿ ಬಳಕೆಯಾಗಿ  ಮನುಷ್ಯನನ್ನು ಇಂತಹ ಕೆಲಸಗಳಿಂದ ಮುಕ್ತಗೊಳಿಸಬೇಕು. ಆದರೆ ಇಂದಿನ ನಮ್ಮ ಆಳ್ವಿಕರು ತಮ್ಮ ಲಾಭವನ್ನು ಗರಿಷ್ಠ ಗೊಳಿಸುವಲ್ಲಿ ಮಾತ್ರ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತಿದ್ದಾರೆ. ಈ ವಿಷಯವನ್ನು ಸ್ಪಷ್ಟವಾಗಿ ಅರಿತುಕೊಳ್ಳಬೇಕು. ಜೊತೆಗೆ ನಮ್ಮ ಆಳ್ವಿಕರು ಆ ಜನತೆಯನ್ನು ಕೊಳಗೇರಿಗಳಲ್ಲಿಯೇ ಅಜ್ಞಾನ, ಅಂಧಕಾರದಲ್ಲಿ ಮುಳುಗಿಸಿ ಅವರಲ್ಲಿ ಕುಸಂಸ್ಕೃತಿಯನ್ನು ತುಂಬುತ್ತಾರೆ. ಅವರಿಗೆ ಮೌಲ್ಯಯುತ ಶಿಕ್ಷಣ, ಉದ್ಯೋಗ, ಸಮಾನತೆಯ ಬದುಕು ಎಂಬುದು ಈ ವ್ಯವಸ್ಥೆಯಲ್ಲಿ ಕೇವಲ ಪುಸ್ತಕದ ಮೇಲಿನ ಪದವಷ್ಟೇ. ಹಾಗಾಗಿ ಕೇವಲ ಪೌರಕಾರ್ಮಿಕರ ಸಮಸ್ಯೆವಷ್ಟೇ ಅಲ್ಲ ಇಂದಿನ ಎಲ್ಲಾ ಸಮಸ್ಯೆಗಳಿಗೂ ಕೂಡ ಈ ವ್ಯವಸ್ಥೆಯ ಒಳಗಡೆ ಉತ್ತರ ಸಿಗುವುದಿಲ್ಲ. ಏಕೆಂದರೆ ಉಳ್ಳವರ ಈ ವ್ಯವಸ್ಥೆ ಬಡವರ, ನಿರ್ಗತಿಕರ ವಿರುದ್ಧವಿರುವ ವ್ಯವಸ್ಥೆ. ಹಾಗಾಗಿ ಉತ್ತರವನ್ನು ವ್ಯವಸ್ಥೆಯ ಆಚೆ ಹುಡುಕಬೇಕಾಗಿದೆ. ನಮ್ಮ ಚಳುವಳಿಗಳು ಈ ವ್ಯವಸ್ಥೆಯನ್ನು ಬುಡಸಮೇತ ಕಿತ್ತುಹಾಕಿ ಜನ ಪರವಾದ, ಎಲ್ಲರಿಗೂ ಸಮಾನತೆಯ ಬದುಕನ್ನು ಕಲ್ಪಿಸಿಕೊಡುವ ಹೊಸ ಸಮಾಜವನ್ನು ತರುವ ನಿಟ್ಟಿನಲ್ಲಿ ಸಾಗಬೇಕು” ಎಂದು ಹೇಳಿದರು.  ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಐಎಂಎಸ್‌ಎಸ್ ನ ಜಿಲ್ಲಾ ಕಾರ್ಯದರ್ಶಿ ವಿಜಯಲಕ್ಷಿö್ಮ ವಹಿಸಿಕೊಂಡಿದ್ದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ