Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ದಿಂಗಬರ ಮೂರ್ತಿ ಸಂಗಪ್ಪಜ್ಜನ18ನೇ ವರ್ಷದ ಪುಣ್ಯಾರಾಧನೆ

ಕುಕನೂರು : ಸಂಗಪ್ಪಜ್ಜನವರು  ದಿಗಂಬರ ಮೂರ್ತಿಯಾಗಿ ನಾಡಿನ ಉದ್ದಗಲಕ್ಕೂ ಸಂಚರಿಸಿ ಪವಾಡ ನಡೆಸಿದ ಮಹಾನ್ ಪುರುಷರಾಗಿದ್ದರು ಎಂದು ಸಿದ್ದಯ್ಯ ಕಳ್ಳಿಮಠ ಹೇಳಿದರು. ಅವರು ಕುಕನೂರು ಪಟ್ಟಣದ ಕೊಪ್ಪಳ ರಸ್ತೆಯಲ್ಲಿರುವ ಮಹಾನ್ ಯೋಗಿ ಸಂಗಪ್ಪಜ್ಜನವರ 18ನೇ ವರ್ಷದ ಪುಣ್ಯಾರಾಧನೆಯಲ್ಲಿ ಪಾಲ್ಗೋಂಡು ಮಾತನಾಡಿ ಸಂಗಪ್ಪಜ್ಜನವರು ತಮ್ಮ ಬದುಕಿನುದ್ದಕ್ಕೂ ಹಲವಾರು ಪವಾಡಗಳನ್ನು ಮಾಡುತ್ತಾ ಬಡ ಕುಟುಂಬದ ರೈತರೊಬ್ಬರ  ಎತ್ತು ಸತ್ತಾಗ ಮರುಳಿ ಜೀವ ನೀಡಿದ್ದು, ಅವರು ನುಡಿದಂತೆ ಮಳೆ, ಬೆಳೆಗಳು ಆಗಿದ್ದು, ಇನ್ನೂ ಹಲವಾರು ಪವಾಡಗಳನ್ನು ನಾವು ನೋಡಿದ್ದೇವೆ ಅವರೊಬ್ಬ ದೈವಿ ಶಕ್ತಿ ಪುರುಷರಾಗಿದ್ದರು ಎಂದು ಹೇಳಿದರು.


ಇವರಿಗೆ ನಿಡಗುಂದಿ, ರೋಣ, ಜಕ್ಕಲಿ, ಕಂದಕೂರ, ನೆರೆಗಲ್, ತುರ್ವಿಹಾಳ, ಸಂಕನೂರು, ಹಾಲಕೆರೆ, ಕರಬರಕಟ್ಟಿ, ಹಿರೇಗೊಣ್ಣಾಗರ ಸೇರಿದಂತೆ ಇನ್ನೂ ಹಲವಾರು ಕಡೆಗಳಲ್ಲಿ ಭಕ್ತ ಸಮೂಹ ಹೊಂದಿದ್ದಾರೆ.


ಇವರು ಪಟ್ಟಣದ ಕೂಡ್ಲೂರ್ ಮನೆತನದವರಾಗಿದ್ದು ಈ ದೇವಸ್ಥಾನದ ಎಲ್ಲಾ ವ್ಯವಸ್ಥೆಗಳನ್ನು ಮಲ್ಲಿಕಾರ್ಜುನ ಕೂಡ್ಲೂರ ಅವರ ನಡೆಸಿಕೊಂಡು ಹೋಗುತ್ತಿದ್ದಾರೆ ಎಂದರು.


ಇವರು ಕಾಲಾ ನಂತರ ತುರ್ವಿಹಾಳನ ಇವರ ಪರಮ ಭಕ್ತರಾದ ಭಜಪ್ಪ ಕುಂಟೋಜಿಯವರು ಇವರ ದೇವಸ್ಥಾನ ನಿರ್ಮಿಸಿದ್ದಾರೆ. ಪ್ರತಿ ಅಮವಾಸ್ಯೆ ಹಾಗೂ ಪ್ರತಿ ವರ್ಷ ಪುಣ್ಯಾರಾಧನೆಯಂದು ಇವರು ಸಾವಿರಾರು ಭಕ್ತಾಧಿಗಳಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸುತ್ತಾರೆ. ಇವರ ದೇವಸ್ಥಾನ ನಿರ್ಮಾಣಕ್ಕೆ ಬಸವರಾಜ ಕರಿಗಾರ ಭೂಮಿ ದಾನ ಮಾಡಿದ್ದಾರೆ ಎಂದು ಹೇಳಿದರು.


ನಂತರದಲ್ಲಿ ರೋಣ ತಾಲೂಕಿನ ಗುಳಗುಳಿ ದೇವಿಮಠದ ಲಿಂಗಾನಂದ ಸ್ವಾಮಿಗಳು, ಕುಕನೂರು ರಾಘವಾನಂದ ಆಶ್ರಮದ ಆತ್ಮಾನಂದ ಸ್ವಾಮಿಗಳು ಆಶಿರ್ವಚನ ನೀಡಿದರು.


ಸಂಗಪ್ಪಜ್ಜನವರ ಜೀವನ ಚರಿತ್ರೆಯ ಪುಸ್ತಕವನ್ನು ಯಲಬುರ್ಗಾ ತಾಲೂಕಿನ ಸೊಂಪೂರ ಹೊಸೂರು ಗ್ರಾಮದ ಹನುಮಂತಪ್ಪ ಬೊರಗಿ ಅವರು ಬರೆಯುತ್ತಿದ್ದು ಇದರ ಮುದ್ರಣ ಸೇವೆಯನ್ನು ಸಂಗಪ್ಪಜ್ಜನವರ ಸಹೋದರಿ ರತ್ನಮ್ಮನವರು ಮುದ್ರಿಸಿ ಲೋಕಾರ್ಪಣೆ ಮಾಡಲಿದ್ದಾರೆ ಎಂದರು.


ಈ ಸಂದರ್ಭದಲ್ಲಿ ಬಸಲಿಂಗಪ್ಪ  ಕಂದಕೂರ, ಈರಪ್ಪ ಕುಡಗುಂಟಿ, ಮಲ್ಲಿಕಾರ್ಜುನ ಕೂಡ್ಲೂರ, ದ್ಯಾಮಣ್ಣ ಹಿರೇಗೊಣ್ಣಾಗರ, ಶರಣಪ್ಪ ಮುಧೋಳ, ಶರಣಪ್ಪ ಕೂಡ್ಲೂರ, ಗುಡದಪ್ಪ ಕಿನ್ನಾಳ, ಈರಣ್ಣ ಯರಗಲ್, ಓಂಕಾರಯ್ಯ ಕಂದಕೂರ, ಹನುಮಂತಪ್ಪ ಹೂಗಾರ, ಮಹಾದೇವಪ್ಪ ಕುಂಬಾರ, ಸುಕಮುನಿ ಸೇರಿದಂತೆ, ಸಂಗಪ್ಪಜ್ಜನವರ ಮನೆತನದವರು, ವಿವಿಧ ಗ್ರಾಮಗಳ ಭಕ್ತರು ಉಪಸ್ಥಿತರಿದ್ದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ