ಘಟಪ್ರಭಾ:- ಗೋಕಾಕ ತಾಲೂಕಿನಲ್ಲಿ ನಡೆಯುವ ೮ನೇ ಸಾಹಿತ್ಯ ಸಮ್ಮೇಳನ ಈ ಬಾರಿ ಡಿ.೧೨ರಂದು ಘಟಪ್ರಭಾದ ಗುಬ್ಬಲಗುಡ್ಡ ಕೆಂಪಯ್ಯಸ್ವಾಮಿ ಮಠದಲ್ಲಿ ನಡೆಸಲು ಪೂರ್ವಬಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ಇಲ್ಲಿನ ಮೃತ್ಯುಂಜಯ ಸಾಂಸ್ಕೃತಿಕ ಭವನದಲ್ಲಿ ಡಾ|| ಮಲ್ಲಿಕಾರ್ಜುನ ಮಹಾಸ್ವಾಮೀಜಿ ಹಾಗೂ ಹೊಸಮಠದ ವಿರೂಪಾಕ್ಷ ಮಹಾಸ್ವಾಮಿಗಳ ಸಾನಿದ್ಯದಲ್ಲಿ ಹಾಗೂ ತಾಲೂಕಿನ ಕಸಾಪ ಸಮಿತಿಯ ಪದಾಧಿಕಾರಿಗಳು ಮತ್ತು ಊರಿನ ಮುಖಂಡರ ಸಮ್ಮುಖದಲ್ಲಿ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಗೋಕಾಕಿನ ನಾಡಿನ ಮಗಳು ಎಂದು ಕರೆಯಿಸಿಕೊಳ್ಳುತ್ತಿರುವ ಹಿರಿಯ ರಂಗಭೂಮಿ ಹಾಗೂ ಕಿರುತೆರೆ ಹಾಗೂ ಚಲನಚಿತ್ರ ನಟಿಯಾಗಿರುವ ಮಾಲತಿಶ್ರೀ ಮೈಸೂರು ಇವರನ್ನು ಸರ್ವನುಮತದಿಂದ ಆಯ್ಕೆ ಮಾಡಲಾಯಿತು. ಸಮ್ಮೇಳನದ ಅಧ್ಯಕ್ಷರಾಗಲೂ ಡಾ|| ಮಲ್ಲಿಕಾರ್ಜುನ ಮಹಾಸ್ವಾಮೀಜಿಯವರಿಗೆ ಎಲ್ಲಾರು ಒಕ್ಕೊರಲಿನಿಂದ ಬೆಂಬಲಿಸಿ ಒತ್ತಾಯಿಸಿದರು ನಾನು ಇನ್ನು ಸಣ್ಣವನಾಗಿದ್ದು ವಯಸ್ಸಿನಲ್ಲಿ ಹಿರಿಯರನ್ನು ಆ ಸ್ಥಾನಕ್ಕೆ ಆಯ್ಕೆ ಮಾಡುವುದು ಸೂಕ್ತ ಎನ್ನುವ ಕಾರಣಕ್ಕೆ ೫೮ ವರ್ಷಗಳಿಂದ ರಂಗಭೂಮಿಯಲ್ಲಿ ಸೇವೆ ಸಲ್ಲಿಸಿರುವ ಹಿರಿಯ ನಟಿ ಮಾಲತಿಶ್ರೀ ಮೈಸೂರ ಇವರನ್ನು ಆಯ್ಕೆ ಮಾಡಲಾಯಿತು.
ಶಾಸಕ ರಮೇಶ ಜಾರಕಿಹೊಳಿಯವರ ಸೂಚನೆ ಮೇರೆಗೆ ನಡೆದ ಪೂರ್ವಬಾವಿ ಸಭೆಯಲ್ಲಿ ಸಮ್ಮೇಳನವನ್ನು ಯಶ್ವಸಿಯಾಗಿ ನಡೆಸುವ ಜವಾಬ್ದಾರಿಯನ್ನು ಊರಿನ ಮುಖಂಡರು ವಹಿಸಿಕೊಂಡರು. ಭವ್ಯ ಮೆರವಣಿಗೆ, ಊಟದ ವ್ಯವಸ್ಥೆ ಸೇರಿ ಕಾರ್ಯಕ್ರಮದ ಎಲ್ಲಾ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡುವ ಬಗ್ಗೆ ಮುಂದಿನ ದಿನಗಳಲ್ಲಿ ಪುನಃ ಸಭೆ ಕರೆದು ಸಮಿತಿ ರಚಿಸಿ ಜವಾಬ್ದಾರಿ ಹಂಚಿಸುವ ನಿರ್ಧಾರ ಮಾಡಲಾಯಿತು.
ಸಭೆಯಲ್ಲಿ ಡಾ|| ಮಲ್ಲಿಕಾರ್ಜುನ ಮಹಾಸ್ವಾಮೀ, ವಿರೂಪಾಕ್ಷ ಮಹಾಸ್ವಾಮೀಜಿ, ಕಸಾಪ ತಾಲೂಕಾಧ್ಯಕ್ಷೆ ಭಾರತಿ ಮದಬಾಂವಿ, ಹಿರಿಯ ಸಾಹಿತಿ ಚಂದ್ರಶೇಖರ ಅಕ್ಕಿ, ಮಹಾಂತೇಶ ತಾವಂಶಿ, ರಾಮಣ್ಣ ಹುಕ್ಕೇರಿ, ಸುರೇಶ ಕಾಡದವರ, ಡಿ.ಎಮ್.ದಳವಾಯಿ, ಪ್ರಕಾಶ ಡಾಂಗೆ, ಗಣೇಶ ಗಾಣಿಗ, ಕೆಂಪಣ್ಣ ಚೌಕಾಶಿ, ಅಪ್ಪಾಸಾಬ ಮುಲ್ಲಾ, ರೆಹಮಾನ್ ಮೋಕಾಶಿ, ಶ್ರೀಕಾಂತ ಮಹಾಜನ, ಶರಣು ಕೊಗನೂರ, ವಿಶ್ವನಾಥ ಯಾದಗೂಡೆ, ಬಸವರಾಜ ಪಟ್ಟಣಶೆಟ್ಟಿ, ಮಹಾಂತೇಶ ಉದಗಟ್ಟಿ, ರಾಜು ಕತ್ತಿ, ರವಿ ನಾವಿ, ತಮ್ಮಣ್ಣ ಅರಬಾಂವಿ, ಸುರೇಶ ಮುದ್ದಾರ, ಈಶ್ವರ ಚಂದ್ರ ಬೇಟಗೇರಿ, ಮಹೇಶ ಪಾಟೀಲ, ಲಗಮಣ್ಣ ನಾಗನ್ನವರ, ಪ್ರದೀಪ ಕುಲಕರ್ಣಿ, ರಾಮಣ್ಣ ದೇಮಣ್ಣನ್ನವರ, ಸಲೀಮ ಕಬ್ಬೂರ, ಮುಸ್ಲಿಂ ಸಮಾಜದ ಮುಖಂಡರು ಸೇರಿ ಹಲವಾರು ಮುಖಂಡರು ಭಾಗವಹಿಸಿದರು. ಶಿಕ್ಷಕ ರವೀಂದ್ರ ಉಪ್ಪಾರ ಕಾರ್ಯಕ್ರಮ ನಿರೂಪಿಸಿದರು.
ಪೋಟೋ ಶೀರ್ಷಿಕೆ ೨೩ಜಿಪಿಬಿ೩ಜೆಪಿಜಿ೩:- ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಮಾಲತಿಶ್ರೀ ಮೈಸೂರು.
೩-೧: ಪೂರ್ವಬಾವಿ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿರುವ ಡಾ|| ಮಲ್ಲಿಕಾರ್ಜುನ ಮಹಾಸ್ವಾಮಿಗಳು.