ಸಂಕೇಶ್ವರ : ಯಮಕನಮರಡಿಯಲ್ಲಿ ನಡೆದ 13 ನೇ ಸತೀಶ್ ಪ್ರತಿಭಾ ಪುರಸ್ಕಾರ 2026 ಕಾರ್ಯಕ್ರಮದಲ್ಲಿ ಸಂಕೇಶ್ವರದ ಕನ್ಯಾ ಶಾಲೆಯ ವಿದ್ಯಾರ್ಥಿಗಳನ್ನು ಪ್ರೌಢ ವಿಭಾಗದಲ್ಲಿ ಸಾಮೂಹಿಕ ನೃತ್ಯ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ 50.000₹ ಪಡೆದುಕೊಂಡಿದ್ದಾರೆ.
ಪತ್ರಿಕೆಯೊಂದಿಗೆ ನೃತ್ಯ ಸಂಯೋಜನರಾದ ರಾಹುಲ್ ವಾರಕರಿ ಮಾತನಾಡಿ, ಸತೀಶ್ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಗ್ರಾಮೀಣ ಮತ್ತು ನಗರ ಪ್ರದೇಶದ ವಿದ್ಯಾರ್ಥಿಗಳು ಹಾಗೂ ಕಲಾವಿದರಲ್ಲಿ ಅಡಗಿರುವ ಕ್ರೀಡಾ ಮತ್ತು ಸಾಂಸ್ಕೃತಿಕ ಪ್ರತಿಭೆಗಳನ್ನು ಗುರುತಿಸಿ, ದೇಶದಲ್ಲಿಯೇ ಪರಿಚಯಿಸುವ ಕಾರ್ಯವನ್ನು ಸಚಿವ ಸತೀಶ್ ಜಾರಕಿಹೊಳಿ ಅವರ ಪ್ರಾಯೋಜಕತ್ವದಲ್ಲಿ ನಡೆಯುತ್ತಿರುವ ವೇದಿಕೆ ಕಲ್ಪಿಸಿಕೊಡುತ್ತಿದೆ ಎಂದರು.
ಈ ಸಂದರ್ಭದಲ್ಲಿನ ಯುವ ನಾಯಕ ರಾಹುಲ್ ಜಾರಕಿಹೊಳಿ, ಮುಖಂಡರಾದ ಕಿರಣಸಿಂಗ್ ರಜಪೂತ, ರವೀಂದ್ರ ಜಿನರಾಳೆ,ಸಾದಿಕ್ ಅಂಕಲಗಿ, ಪವನ ಪಾಟೀಲ, ಸೇರಿದಂತೆ ಅನೇಕರು ಇದ್ದರು.