ಇಂಡಿ: ಇಂಡಿ ನಗರ ಸೇರಿದಂತೆ ತಾಲೂಕಿನ ಗ್ರಾಮೀಣ ಭಾಗದ ಜನ-ಜಾನುವಾರುಗಳಿಗೆ ಯಾವುದೆ ರೀತಿ ಕುಡಿಯುವ ನೀರಿನ ತೊಂದರೆಯಾಗದಂತೆ ನೋಡಿಕೊಳ್ಳಿ. ಕೃಷ್ಣಾ ಕಾಲುವೇ ಮೂಲಕ ಹರಿ ಬೀಡಲಾದ ನೀರನ್ನು ಭೀಮಾನದಿಗೆ ಹರಿಸಿ ಆ ಭಾಗದ ರೋಡಗಿ, ಖೇಡಗಿ, ಭುಯ್ಯಾರ, ಅಗರಖೇಡ ಗ್ರಾಮಗಳ ಜನರಿಗೂ ಕುಡಿಯುವ ನೀರಿನ ಸಮಸ್ಯ ತಲೆದೊರದಂತೆ ಕ್ರಮ ವಹಿಸಿ ಎಂದು ಅಧಿಕಾರಿಗಳಿಗೆ ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಅವರು ಶುಕ್ರವಾರರಂದು ನಗರದ ಪ್ರವಾಸಿ ಮಂದಿರದಲ್ಲಿ ತಾಲೂಕಾ ಹಾಗೂ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇತ್ತಿಚೇಗೆ ತಾಲೂಕಿನ ರಾಮ ತೀರ್ಥ ತಾಂಡಾದಲ್ಲಿ ಕುಡಿಯುವ ನೀರಿನ ತೊಂದರೆ ಕಂಡು ಬಂದಿದ್ದು ಅದನ್ನು ಬಿಟ್ಟರೆ ಬಹುತೇಕ ಎಲ್ಲಿಯೂ ತೊಂದರೆ ಇಲ್ಲ. ಆದ್ದರಿಂದ ಈ ಕೂಡಲೇ ರಾಮತೀರ್ಥ ಗ್ರಾಮದ ಕುಡಿಯುವ ನೀರಿನ ಸಮಸ್ಯ ತ್ವರಿತವಾಗಿ ಪರಿಹರಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಿ ಎಂದರು.
ಗ್ರಾಮೀಣ ಕಿರು ನೀರು ಸರಬರಾಜು ಅಧಿಕಾರಿ ರಾಮತೀರ್ಥ ಗ್ರಾಮಕ್ಕೆ ಹೊರ್ತಿ ಪ್ರದೇಶದಿಂದ ನೀರಿನ ಪೂರೈಕೆ ಯಾಗುತ್ತಿದೆ. ರಾಮತೀರ್ಥ ತುಂಬ ಎತ್ತರ ಪ್ರದೇಶದಲ್ಲಿರುವುದರಿಂದ ಹೊರ್ತಿ ಸುತ್ತ ಮುತ್ತಲಿನ ಐದು ಗ್ರಾಮಗಳಿಗೆ ಐದು ಗಂಟೆ ನೀರಿನ ಪೂರೈಕೆ ಸ್ಥಗಿತ ಮಾಡಿ ನೀರು ಬಿಡಬೇಕಾಗುತ್ತದೆ. ಹೀಗಾಗಿ ಬರುವ ದಿನಗಳಲ್ಲಿ ಸಮೀಪದಲ್ಲಿರುವ ಕೆರೆಯ ಪೂಲಕ ಪೈಪ್ ಲೈನ ಮಾಡಲು ಕ್ರೀಯಾಯೋಜನೆ ರೂಪಿಸಲಾಗಿದ್ದು ತ್ವರಿತವಾಗಿ ನೀರಿನ ಸಮಸ್ಯ ಪರಿಹರಿಸಲಾಗುತ್ತದೆ ಎಂದು ತಿಳಿಸಿದರು.
ತಾ.ಪಂ ಇಒ ಮಹಾದೇವಪ್ಪ ಏವೂರ ಮಾತನಾಡಿ ತಾಲೂಕಿನಲ್ಲಿ ೬೮ ಶುದ್ದ ಕುಡಿಯುವ ನೀರಿನ ಘಟಕಗಳಿದ್ದು ಅವುಗಳನ್ನು ರಿಪೇರಿ ಮಾಡಿ ಗ್ರಾಮಸ್ಥರಿಗೆ ಶುದ್ಧ ಕುಡಿಯುವ ನೀರಿನ ಪೂರೈಕೆಗೆ ಪ್ರಯತ್ನಿಸಲಾಗುತ್ತಿದೆ ಎಂದರು.
ಕೃಷ್ಣಾ ಕಾಲುವೆ ಅಧಿಕ್ಷಕ ಅಭಿಯಂತರ ಮನೋಜಕುಮಾರ ಗಡಬಳ್ಳಿ ಮಾತನಾಡಿ ಕೃಷ್ಣಾ ಮುಖ್ಯ ಕಾಲುವೆಗೆ ಈಗಾಗಲೇ ನೀರು ಬಿಟ್ಟಿದ್ದು ಅದು ಸಂಗೋಗಿ ಕೆರೆಯ ವರೆಗೆ ಬಂದಿದ್ದು ಕೆರೆ ತುಂಬಿದ ನಂತರ ಎರಡು ಟಿಎಂಸಿ ನೀರಿನಲ್ಲಿ ಎಲ್ಲ ಕೆರೆಗಳನ್ನು ತುಂಬಿ ಗ್ರಾಮಸ್ಥರಿಗೆ ತೊಂದರೆಯಾಗದಂತೆ ಮಾಡುತ್ತೇವೆ ಎಂದು ತಿಳಿಸಿದರು.
ಸಾವಳಸಂಗ ಅರಣ್ಯ ಪ್ರದೇಶದಲ್ಲಿ ಹಾದು ಹೊಗಿರುವ ಖಾಸಗಿ ಒಡೆತನದ ಕಂಪನಿಗೆ ಸೇರಿದ ಗಾಳಿಯಂತ್ರದ ವಿದ್ಯುತ್ ತಂತಿ, ಕಂಬಗಳು ಹಾದು ಹೊಗಿವೆ. ಇದರಿಂದಾಗಿ ವಿದ್ಯುತ ಸ್ಪರ್ಶವಾಗಿ ಸುಮಾರು ಎರಡು ಸಾವಿರ ಗಿಡ ಮರಗಳು ಬೆಂಕಿ ತಗುಲಿ ಹಾನಿ ಗೀಡಾಗಿವೆ. ಆ ಕಂಪನಿಯವರ ಮೇಲೆ ಕೇಸು ದಾಖಲಿಸಿ ನಿರ್ದಾಕ್ಷಿಣ ಕ್ರಮ ಕೈಕೊಳ್ಳಬೇಕು. ಯಶವಂತರಾಯಗೌಡ ಪಾಟೀಲ ಶಾಸಕರು.
ತಾಲೂಕಿನಲ್ಲಿ ಸಾತಲಗಾಂವ ನಾದ ರಸ್ತೆ, ಸಾಲೋಟಗಿ ನಾದ ರಸ್ತೆ ರೂಗಿ ಹಿರೇಮಸಳಿ ರಸ್ತೆಗಳನ್ನು ಮುಂದಿನ ತಿಂಗಳಲ್ಲಿ ಪೂರ್ತಿಗೊಳಿಸುವದಾಗಿ ಲೋಕೋಪಯೋಗಿ ಇಲಾಖೆಯ ದಯಾನಂದ ಮಠ ತಿಳಿಸಿದರು.
ಸಭೆಯಲ್ಲಿ ಕಂದಾಯ ಉಪವಿಬಾಗಾಧಿಕಾರಿ ಚಿದಾನಂದ ಗುರುಮೂರ್ತಿ, ತಹಸೀಲ್ದಾರ ಬಿ.ಎಸ್.ಕಡಕಬಾವಿ, ಡಿ.ವಾಯ್ ಎಸ್ ಪಿ ಸದಾಶಿವ ಕಟ್ಟಿಮನಿ, ತಾ.ಪಂ ಇಒ ಮಹಾದೇವಪ್ಪ ಏವೂರ, ಕೃಷ್ಣಾ ಮೇಲ್ದಂಡೆ ಯೋಜನೆಯ ಗೋವಿಂದ, ಮನೋಜಕುಮಾರ, ನಗರಸಭೆ ಆಯುಕ್ತ ಶಿವಾನಂದ ಪೂಜಾರಿ, ಆರೋಗ್ಯ ಅಧಿಕಾರಿ ಡಾ|| ರಾಜೇಶ ಕೋಳೆಕರ, ಅರಣ್ಯ ಅಧಿಕಾರಿಗಳಾದ ಎಸ್.ಜೆ.ಸಂಗಾಲಕ, ಮುಂಜುನಾಥ ಧುಳೆ, ಹೆಸ್ಕಾಂನ ಇಇ ಎಸ್.ಎ ಬಿರಾದಾರ, ಎಇಇ ಎಸ್. ಆರ್ ಮೆಂಡೆದಾರ ಗ್ರಾಮೀಣ ನೀರು ಸರಬರಾಜು ಎಇಇ ಶಿವಾಜಿ ಬನಸೋಡೆ ಮತ್ತಿತರಿದ್ದರು.
