Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಪ್ರವಾಹ ಪರಿಸ್ಥಿತಿಯನ್ನು ಎದುರಿಸಲು ಮುಂಜಾಗೃತಾ ಕ್ರಮವಾಗಿ ಎಲ್ಲ ಸಿದ್ದತೆ ಕೈಗೊಳ್ಳಿ : ಬಿರದಾರ

ಹುನಗುಂದ; ಸಧ್ಯಕ್ಕೆ ಮಾನ್ಸೂನ್ ಪ್ರಾರಂಭವಾಗಿರುವದರಿಂದ ಹವಾಮಾನ ಇಲಾಖೆ ಮಾಹಿತಿಯಂತೆ ನೇಮಕಗೊಂಡ ಎಲ್ಲ ಇಲಾಖೆ  ಮುಖ್ಯಸ್ಥರು ಪ್ರವಾಹ ಪರಿಸ್ಥಿತಿಯನ್ನು ಎದುರಿಸಲು ಮುಂಜಾಗೃತಾ ಕ್ರಮವಾಗಿ ಎಲ್ಲ ಸಿದ್ದತೆಯಲ್ಲಿರಬೇಕೆಂದು ಜಿಲ್ಲಾ ವಿಪತ್ತು ನಿರ್ವಹಣಾ ಸಮೀತಿ ತಾಲೂಕಾ ನೊಡೆಲ್ ಅಧಿಕಾರಿ ಯು. ಜಿ. ಬಿರದಾರ ಹೇಳಿದರು.

ಇಲ್ಲಿನ ತಾಲೂಕ ಆಡಳಿತದ ಸಭಾಭವನದಲ್ಲಿ ಗುರುವಾರ ನಡೆದ ವಿಪತ್ತು ನಿರ್ವಹಣಾ ಎಲ್ಲ ಇಲಾಖೆಗಳ ತಾಲೂಕಾ ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತ ಕ್ಷಣಕ್ಷಣಕ್ಕೆ ಬದಲಾವಣೆಯಾಗುವ ಹವಾಮಾನ ಇಲಾಖೆಯ ಮಾಹಿತಿಯಂತೆ ತಾಲೂಕಿನಾದ್ಯಂತ ನದಿ ಪಾತ್ರದಲ್ಲಿರುವ ಗ್ರಾಮಗಳಿಗೆ ಪ್ರವಾಹ ಬರುವ ಸಾಧ್ಯತೆ ಕುರಿತು, ಹೊಳೆ ಹಳ್ಳಗಳ ಸಮೀಪ ಜನಜಾನುವಾರು ಅನಾವಶ್ಯಕ ತಿರುಗಾಡದಂತೆ, ಶಿಥಿಲಗೊಂಡ ಮನೆಗಳಲ್ಲಿ ಜನ-ಜಾನುವಾರು ವಾಸವಿರದಂತೆ, ಅಂಗನವಾಡಿ ಮತ್ತು ಶಾಲಾ ಕಟ್ಟಡಗಳು ಸುಗಮ ಸುಸ್ಥಿತಿಯಲ್ಲಿರುವ ಕುರಿತು ಹೀಗೆ ಹಲವಾರು ರೀತಿಯಲ್ಲಿ ತಕ್ಷಣ ಜರುಗುವ ಭೀಖರಕ್ಕೆ ಅಪಘಾತವಾಗದಂತೆ ಎಲ್ಲ ಬಗೆಯ ಮುಂಜಾಗೃತಾ ಕ್ರಮ ವಹಿಸಬೇಕೆಂದು ಅಧಿಕಾರಿಗಳಿಗೆ ಮುನ್ನೆಚರಿಕೆ ನೀಡಿದರು.

 ಈ ಬಗ್ಗೆ ಜಿಲ್ಲಾ ಮಟ್ಟದಲ್ಲಿ ಸಾಕಷ್ಟು ಇಲಾಖೆಗಳಿಗೆ ಮಾಹಿತಿಯಾಗಿದ್ದು ತಮ್ಮ ಗಮನಕ್ಕೆ ಬಂದಿದೆ. ನಿರ್ವಹಣಾ ತಂಡದಲ್ಲಿರುವ ಎಲ್ಲ ಎಲಾಖಾ ಅಧಿಕಾರಿಗಳು ಜಾಗೃತರಾಗಿ ಕಾರ್‍ಯ ನಿರ್ವಹಿಸಬೇಕೆಂದರು. ಈ ಕುರಿತು ಆಯಾ ಪಂಚಾಯತ್ ವ್ಯಾಪ್ತಿಯಲ್ಲಿ ಸರ್ವಜನಿಕರಿಗೆ ತಿಳಿಯುವಂತೆ ಮುಂಚಿನತವಾಗಿ ಡಂಗೂರ ಸಾರಬೇಕು. ವಿಪತ್ತು ಬಂದಾಗ ಪರಿಸ್ಥಿತಿಗನುಗುಣವಾಗಿ ಗ್ರಾಮವಾರು ಗಂಜಿ ಕೇಂದ್ರಗಳನ್ನು ತೆರೆಯಲಾಗುವದು. ಆ ಬಗ್ಗೆ ಜಿಲ್ಲೆ ಎಲ್ಲ ರೀತಿಯ ಸಿದ್ದತೆ ಕೈಗೊಂಡಿದೆ. ಈ ಸಮೀತಿ ನಿರ್ಣಯಗಳನ್ನು ಅಧಿಕಾರಿಳು ಮೂಗು ತುರಿಸುವ ಕಾರ್‍ಯ ಮಾಡದೆ ಸ್ಥಳೀಯವಾಗಿದ್ದುಕೊಂಡು ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸಬೇಕೆಂದು ಬಿರಾದಾರ ತಿಳಿಸಿದರು.

Advertisement

ತಾಪಂ ಇಒ ಮುರಳೀಧರ ದೇಶಪಾಂಡೆ ಮಾತನಾಡಿ ಕುಡಿಯುವ ಜಲಮೂಲಕಗಳ ನದಿ ಬ್ಯಾರೇಜಗಳನ್ನು ಮುಚ್ಚಲಾಗಿತ್ತು. ಹವಾಮಾನ ತುರ್ತು ಸ್ಥಿತಿಯಲ್ಲಿ ಬ್ಯಾರೇಜಗಳ ಎಲ್ಲ ಗೇಟ್ಗಳನ್ನು ತಕ್ಷಣ ಓಪನ್ ಮಾಡಿ ಸುತ್ತಲಿರುವ ಯಾವುದೆ ಸ್ಥಳಕ್ಕೆ ನೀರು ನುಗ್ಗದಂತೆ ಅಯಾ ಭಾಗದ ಪಂಚಾಯತ್ ಮತ್ತು ಸಂಬಂಧಿಸಿದ ಅಧಿಕಾರಿಗಳು ಜವಾಬ್ದಾರಿ ವಹಿಸಬೇಕು. ಪರಿಸ್ಥಿತಿ ಕೈಮೀರಿ ಯಾವುದೆ ಮನುಷ್ಯ ಜೀವನ ಹಾನಿ, ಪ್ರಾಣಿ ಜೀವ ಹಾನಿ, ಮನೆ ಕುಸಿಯುವದು. ಶಾಲಾ ಕಟ್ಟಡ ಛತ್ತ್ ಕುಸಿಯುವದು, ನದಿ ಪಾತ್ರದಲ್ಲಿರುವ ಗ್ರಾಮಗಳಿಗೆ ನೀರು ನುಗ್ಗುವದು ಹೀಗೆಲ್ಲ ಹಾನಿ ಸಂಭವಿಸಿದಲ್ಲಿ ತಕ್ಷಣ ಮೇಲಾಧಿಕಾರಿಗಳ ಗಮನಕ್ಕೆ ಮತ್ತು ಕಾರ್‍ಯ ನಿರ್ವಹಿಸುವ ತಂಡಗಳಿಂದ ತುರ್ತು ಕಾರ್‍ಯಕೈಗೊಳ್ಳಲಾಗುವದೆಂದು ಇಒ ಮುರಳೀದರ ದೇಶಪಾಂಡೆ ಮಾಹಿತಿ ಒದದಗಿಸಿದರು. ಜೊತೆಗೆ ಪ್ರತಿ ಗ್ರಾಮಗಳಲ್ಲಿ ಆಕಸ್ಮಾತ್ ಸಂಭವಿಸಬಹುದಾದ ಘಟನೆ ಮಾಹಿತಿ ಹಂಚಿಕೊಳ್ಳಲು ತಾಲೂಕಾ ಆಡಳಿತದಲ್ಲಿ ಸಹಾಯವಾಣಿ ಸಂಪರ್ಕ ಒದಗಿಸಲಾಗುವದು ಎಂದರು.

ಗ್ರೇಡ್-೨ ತಹಸೀಲ್ದಾರ ಮಹೇಶ ಸಂದಿಗವಾಡ ಮಾತನಾಡಿ ಜರುಗಬಹುದಾದ ಘಟನೆಯಲ್ಲಿ ತುರ್ತು ಸ್ಥಿತಿಯಲ್ಲಿರುವವರಿಗೆ ಆರೋಗ್ಯ ಇಲಾಖೆಯಿಂದ ಚಿಕಿತ್ಸೆ ವ್ಯವಸ್ಥೆ ಮತ್ತು ಜಾನುವಾರುಗಳಿಗೆ ಪಶು ಚಿಕಿತ್ಸಾಲಯ ವ್ಯವಸ್ಥೆ ಕಲ್ಪಿಸಲಾಗುವದು. ಒಟ್ಟಾರೆ ನಿರ್ವಹಣಾ ತಂಡದಲ್ಲಿ ಕಾರ್ಯನಿರ್ವಹಿಸುವ ಎಲ್ಲ ಇಲಾಖೆಯ ಮುಖ್ಯಸ್ಥರು ಮತ್ತು ಸಿಬ್ಬಂದಿ ಸಕಾಲಕ್ಕೆ ಸ್ಪಂದಿಸಬೇಕೆಂದು ಅವರು ತಿಳಿಸಿದರು. ಸಭೆಯಲ್ಲಿ ಪಶು ಸಂಪಗೋನ, ಪೊಲಿಸ್ ಇಲಾಖೆ, ಆರೋಗ್ಯ ಇಲಾಖೆ, ಕಂದಾಯ ಇಲಾಖೆ, ತೋಟಗಾರಿಕಾ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಸೇರಿದಂತೆ ಬಹುತೇಕ ಇಲಾಖೆಗಳ ಮುಖ್ಯಸ್ಥರು ಭಾಗವಹಿಸಿದ್ದರು.

Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತ್ಯಾಗದ ಪ್ರತೀಕವೇ ಬಕ್ರೀದ್ಶಾಸಕರ ಬಗ್ಗೆ ಜಿತೇಂದ್ರ ಕಾಂಬಳೆ ಅವರು ನಾಲಿಗೆ ಹರಿ ಬಿಟ್ಟು ಅವಾಚ್ಯ ಶಬ್ದಗಳನ್ನು ಬಳಕೆ ಮಾಡಿದ್ದು ಸರಿಯಲ್ಲ : ಪ್ರಶಾಂತ ಕಾಳೆಭೂತಾನ್‌ನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಾಹಿತಿ ಡಾ.ಅರ್ಚನಾ ಅಥಣಿ ಭಾಗಿ"ನಿಶ್ಚಿತ ಗುರಿಯೊಂದಿಗೆ ಅಧ್ಯಯನ ಮಾಡಿದಲ್ಲಿ ಯಶಸ್ಸು ದೊರೆಯಲು ಸಾಧ್ಯವಿದೆ" ಗರ್ಭ ಕಂಠದ ಕ್ಯಾನ್ಸರ್ ತಡೆಯುವಲ್ಲಿ ಹೆಚ್.ಪಿ.ವಿ ಲಸಿಕೆ ಪೂರಕವಾಗಿದೆ : ಬೆವನೂರಪ್ರವಾಹ ಪರಿಸ್ಥಿತಿಯನ್ನು ಎದುರಿಸಲು ಮುಂಜಾಗೃತಾ ಕ್ರಮವಾಗಿ ಎಲ್ಲ ಸಿದ್ದತೆ ಕೈಗೊಳ್ಳಿ : ಬಿರದಾರಮೇ ೩೧ರಂದು ತ್ರಿವೇಣಿ ಸಂಗಮದ ಭೃಹತ್ ಆರತಿ ಕಾರ್‍ಯಕ್ರಮ : ದತ್ತಾತ್ರೆಯ ಶಿಂತ್ರೆ ಪೋಷಕರೂ ತಮ್ಮ ಜವಾಬ್ದಾರಿ ಅರಿಯಬೇಕು: ಪ್ರೀತಿ ಕಾಮಕರವಿವಿಧ ಫಲಾನುಭವಿಗಳಿಗೆ ಸಲಕರಣೆಗಳ ವಿತರಣೆ ಶರಣ ಸಂಸ್ಕೃತಿಯಿಂದ ಮಾತ್ರ ಜಗದೋದ್ಧಾರ : ಪ್ರೊ.ಎಸ್.ಎಂ. ಶೇಖ ಅಭಿಮತ