Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ನಮ್ಮ ಹೊಲದಲ್ಲಿ ಅಕ್ರಮವಾಗಿ ಗರಸು ಅಗೆದವರ ಮೇಲೆ ಕ್ರಮ ಕೈಗೊಳ್ಳಿ :   ಚೆನ್ನಯ್ಯ ಮನವಿ

ಬಳ್ಳಾರಿ. ಜು. 17: ಜಿಲ್ಲೆಯ ಸಂಡೂರು ತಾಲೂಕಿನ ತಿಮ್ಮಲಾಪುರ  ಗ್ರಾಮ ವ್ಯಾಪ್ತಿಯ ಸರ್ವೆ ನಂಬರ್ 51/ಎ /ಎ2 ವಿಸ್ತೀರ್ಣ ಒಂದು ಎಕರೆ ನನಗೆ  ಸಂಬಂಧಿಸಿದ  ಜಮೀನಿನಲ್ಲಿ ಗುರುಮೂರ್ತಿ ಶೇಕ್ಷಾವಲಿ ಕೊಠಾಳ ಮಂಜು ಮತ್ತು ಹನುಮಂತಪ್ಪ ಇವರುಗಳು ಅಕ್ರಮವಾಗಿ ಘರಸನ್ನು ಅಗೆದು ಮಾರಾಟ ಮಾಡಿರುತ್ತಾರೆ ಇವರು ಈ ಕುರಿತು ನನ್ನಿಂದಾಗಲಿ ಅಥವಾ ಡಿಎಂಜಿ ಇಂದಾಗಲಿ ಯಾವುದೇ ಅನುಮತಿಯನ್ನು ಪಡೆಯದೆ ಅಕ್ರಮವಾಗಿ ನಿಯಮ ನಿಬಂಧನೆಗಳನ್ನು ಮೀರಿ ಸುಮಾರು 12 ಅಡಿ ಆಳದಲ್ಲಿ ಒಂದು ಎಕರೆ ಪ್ರದೇಶದಲ್ಲಿ ಅಕ್ರಮ ಗರುಸು ಗಣಿಗಾರಿಕೆ ಮಾಡಿರುತ್ತಾರೆ ಇವರ ವಿರುದ್ಧ ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕಾನೂನು ಕ್ರಮ ಕೈಗೊಂಡು ನಮಗೆ ಮೇಲ್ಕಂಡವರು ಮಾಡಿದ ನಷ್ಟವನ್ನು ತುಂಬಿಕೊಡಬೇಕು ಮತ್ತು ಅವರ ಮೇಲೆ ಕಾನೂನು ಕ್ರಮ ಕೈಗೊಲ್ಲಬೇಕೆಂದು ತಿಮ್ಮಲಾಪುರ ಚೆನ್ನಯ್ಯ ಮನವಿ ಮಾಡಿದರು.
 ಈ ಕುರಿತು ಅವರು ಇಂದು ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಿ ಮಾತನಾಡಿ, ನಾನು ಈ ಜಮೀನಿನಲ್ಲಿ ಹಲೋ ವರ್ಷಗಳಿಂದ ಬೇಸಾಯ ಮಾಡಿಕೊಳ್ಳುತ್ತಾ ಜೀವನ ನಡೆಸುತ್ತಿದ್ದವು, ಕಳೆದ ಮೇ ತಿಂಗಳಿನಲ್ಲಿ ನಾನು ಮತ್ತು ನನ್ನ ಕುಟುಂಬ ಸದಸ್ಯರು ಕೂಡ್ಲಿಗಿಯ ಹತ್ತಿರ ಕೆಂಗಲ್ ಗ್ರಾಮಕ್ಕೆ ಹೋಗಿದ್ದೆವು , ಆ ಸಂದರ್ಭವನ್ನು ಬಳಸಿಕೊಂಡು ಹಲವು ಜೆಸಿಬಿ ಯಂತ್ರಗಳನ್ನು ಮತ್ತು ಹಲವಾರು ಟಿಪ್ಪರ್ಗಳನ್ನು ಬಳಸಿ ಹಗಲು ರಾತ್ರಿ ಎನ್ನದೆ ಮೂರು ದಿನಗಳಲ್ಲಿ 10 ರಿಂದ 15 ಅಡಿ ಆಳಕ್ಕೆ ಗ್ರಾವೆಲನ್ನು ತೆಗೆದು ಲಾರಿಗಳ ಮುಖಾಂತರ ಕಳ್ಳ ಸಾಗಣೆ ಮಾಡಿ ನಮಗೆ ನಷ್ಟವನ್ನು ಉಂಟು ಮಾಡಿರುತ್ತಾರೆ ಈ ಮಾಹಿತಿಯು ನಮಗೆ ಬೇರೆಯವರಿಂದ ತಿಳಿದು ನಾವು ಹೊಲಕ್ಕೆ ಹೋದಾಗ ನಮ್ಮ ಹೊಲದಲ್ಲಿ ಹಲವಾರು ಲಾರಿಗಳಲ್ಲಿ ಗ್ರಾವಲನ್ನು ತುಂಬಿಸುತ್ತಿದ್ದರು ನಾವು ಮತ್ತು ನಮ್ಮ ಕುಟುಂಬಸ್ಥರು ತಡೆಯಲು ಹೋದಾಗ ಆ ನಾಲ್ಕು ಜನ ವ್ಯಕ್ತಿಗಳು ನಮ್ಮನ್ನು ಅಗತ್ಯ ಮತ್ತು ಅಶ್ಲೀಲ ಪದಗಳಿಂದ ನಿಂದಿಸಿ ನೀನು ಏನು ಮಾಡುತ್ತಿಯೋ ಮಾಡಿಕೋ ಯಾರಿಗಾದರೂ ಹೇಳಿಕೊ ಇದು ನಿನ್ನ ಹೊಲವಲ್ಲ ಮತ್ತೊಂದು ಸಾರಿ ನಮಗೆ ಅಡ್ಡಿಪಡಿಸಿದಲ್ಲಿ ನಿನ್ನನ್ನು ಕೊಲೆ ಮಾಡುತ್ತೇವೆ ಎಂದು ಪ್ರಾಣ ಬೆದರಿಕೆ ಹಾಕಿ ಅಲ್ಲೇ ಮಾಡಿರುತ್ತಾರೆ ಈ ಘಟನೆಗೆ ಕಾರಣವಾದ ಗುರುಮೂರ್ತಿ ಶೇಕ್ಷಾವಲಿ , ಕೊಟ್ಟಾಲ ಮಂಜು ಮತ್ತು ಹನುಮಂತಪ್ಪ ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ನಮಗೆ ನ್ಯಾಯ ಒದಗಿಸಬೇಕೆಂದು ಸಂಬಂಧಿಸಿದ ಅಧಿಕಾರಿಗಳಲ್ಲಿ ಮನವಿ ಮಾಡಿದರು.
 ಈ ಕುರಿತು ನಾವು ಈಗಾಗಲೇ ಕೊಡ್ತೀನಿ ಪೊಲೀಸ್ ಠಾಣೆಯಲ್ಲಿ ದೂರನ್ನು ನೀಡಿದ್ದು ಆ ನಾಲ್ಕು ಜನರ ಮೇಲೆ ದಾಖಲಾಗಿರುತ್ತದೆ ಆದರೆ ಇಲ್ಲಿವರೆಗೆ ಯಾವುದೇ ಕ್ರಮವಾಗಿಲ್ಲ ದಯವಿಟ್ಟು ನಮಗೆ ಆದ ನಷ್ಟವನ್ನು ನಾಲ್ಕು ಜನರಿಂದ ವಸೂಲಿ ಮಾಡಿಕೊಡಬೇಕು ಮತ್ತು ಪರಿಹಾರವನ್ನು ಒದಗಿಸಿ ಕೊಡಬೇಕೆಂದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
೨೦ ವರ್ಷಗಳ ಹಿಂದೆ ಆದ ರಸ್ತೆ * ರಸ್ತೆ ತುಂಬೆಲ್ಲಾ ತಗ್ಗುದಿನ್ನಿಗಳದ್ದೇ ದರ್ಬಾರುಅದ್ದೂರಿ ಜನ್ಮದಿನ ಆಚರಣೆ ಬೇಡ; ಸೇವಾ ಕಾರ್ಯಕ್ರಮಗಳಿಗೆ ಆದ್ಯತೆ ನೀಡಿ: ಎ.ಎಸ್. ಪಾಟೀಲ ನಡಹಳ್ಳಿಶೈಕ್ಷಣಿಕ ಉತ್ಕೃಷ್ಟತೆ, ಸಂಶೋಧನೆ ಹಾಗೂ ನಾವೀನ್ಯತೆಗೆ ಒತ್ತು : ಡಾ. ಪ್ರಭಾಕರ ಕೋರೆ ಎಮ್ಮೆ ಹಾಲು ಪೂರೈಕೆಯಲ್ಲಿನ ಕುಸಿತ : ತೀವ್ರ ಕಳವಳ ವ್ಯಕ್ತಪಡಿಸಿದ ಬಾಲಚಂದ್ರ ಜಾರಕಿಹೊಳಿ ದಿ. 22-07-2026 ರಂದು ಶಾಸಕ ಬಾಬಾಸಾಹೇಬ ಪಾಟೀಲರ ಜನ್ಮದಿನದ ಪ್ರಯುಕ್ತ ರಕ್ತಧಾನ ಶಿಬಿರಆರೋಗ್ಯ ಕಾಳಜಿ ಮತ್ತು ಸುತ್ತ-ಮುತ್ತಲಿನ ಪರಿಸರ ಸ್ವಚ್ಛತಾ ಉಪನ್ಯಾಸದಲ್ಲಿ ಡಾ.ಜಗದೀಶ ಜಿಂಗಿ ಅಭಿಪ್ರಾಯಪ್ರತಿಭಾವಂತರಿಗೆ ಪುರಸ್ಕಾರ, ಬಸವ ಭವನ ನಿರ್ಮಾಣಕ್ಕೆ ವೇಗ: ವೀರಶೈವ ಲಿಂಗಾಯತ ಮಹಾಸಭಾ ನಿರ್ಧಾರಜಿಲ್ಲೆಯ ನರಗುಂದ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಬೆಳೆ ವೀಕ್ಷಣೆ ನಡೆಸಿದ ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ಪಿಂಚಣಿ ಸೇರಿದಂತೆ ಯಾವುದೇ ನಿವೃತ್ತಿ ಸೌಲಭ್ಯ ಸಿಗುವ ಮುನ್ನವೇ ಮುಖ್ಯೋಪಾಧ್ಯಾಯರ ನಿಧನ: ಎಸ್.ವಿ. ಸಂಕನೂರರ ತೀವ್ರ ಸಂತಾಪವಿಜಯನಗರ ಜಿಲ್ಲೆಯಲ್ಲಿ ಬೀದಿ ಬದಿ ವ್ಯಾಪಾರಿಗಳ ಹಕ್ಕುಗಳ ರಕ್ಷಣೆಗಾಗಿ ಜಿಲ್ಲಾಧಿಕಾರಿಗಳಿಗೆ ಮನವಿ