Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ಉಸಿರು  ಟೀಸರ್ ರಿಲೀಸ್ 


     ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನ ನಿರ್ಮಾಪಕರು,  ತಂತ್ರಜ್ಞರುಗಳು ಸಿನಿಮಾಸಕ್ತಿಯಿಂದ  ಕನ್ನಡ ಚಿತ್ರರಂಗಕ್ಕೆ ಬರುತ್ತಿದ್ದಾರೆ, ಚಿತ್ರ ನಿರ್ಮಾಣದಲ್ಲಿ ತೊಡಗಿಕೊಂಡಿದ್ದಾರೆ, ಅಂಥವರಲ್ಲಿ ಆರ್‌.ಎಸ್‌.ಪಿ. ಪ್ರೊಡಕ್ಷನ್ಸ್ ನ  ಲಕ್ಷ್ಮಿ ಹರೀಶ್ ಕೂಡ ಒಬ್ಬರು.


     ಆರ್‌ಎಸ್‌ಪಿ ಗ್ರೂಪ್ ಆಫ್ ಕಂಪನೀಸ್ ನಡೆಸುತ್ತಿರುವ ಅವರು ತಮ್ಮ ಆರ್‌ಎಸ್‌ಪಿ  ಪ್ರೊಡಕ್ಷನ್ ಮೂಲಕ  ಸಸ್ಪೆನ್ಸ್ , ಥ್ರಿಲ್ಲರ್ ಕಥಾಹಂದರ ಒಳಗೊಂಡ  'ಉಸಿರು' ಎಂಬ  ಚಿತ್ರವನ್ನು ನಿರ್ಮಿಸುತ್ತಿದ್ದಾರೆ‌, ಈಗಾಗಲೇ  ಚಿತ್ರದ ಚಿತ್ರೀಕರಣ ಮುಗಿದು, ಪೋಸ್ಟ್ ಪ್ರೊಡಕ್ಷನ್  ಕೊನೇ ಹಂತದಲ್ಲಿದೆ, ನಟ ತಿಲಕ್, ಪ್ರಿಯಾ ಹೆಗ್ಡೆ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರಕ್ಕೆ ಪ್ರಭಾಕರ್ ಕಥೆ, ಚಿತ್ರಕಥೆ  ಬರೆದು ಆಕ್ಷನ್ ಕಟ್ ಹೇಳಿದ್ದಾರೆ.


      ಇತ್ತೀಚೆಗೆ  ಈ ಚಿತ್ರದ ಟೀಸರ್‌ನ್ನು  ನಟ ಶ್ರೀನಗರ ಕಿಟ್ಟಿ ಹಾಗೂ ರವಿ ಆರ್.ಗರಣಿ  ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ  ಶುಭ ಹಾರೈಸಿದರು, ಪೊಲೀಸ್ ಅಧಿಕಾರಿಯೊಬ್ಬ ಆತಂಕಕಾರಿ ವ್ಯಕ್ತಿಯಿಂದ ತನ್ನ ಹೆಂಡತಿಯನ್ನು  ಹೇಗೆ ಕಾಪಾಡಿಕೊಳ್ಳುತ್ತಾನೆ ಎಂಬುದನ್ನು  'ಉಸಿರು' ಚಿತ್ರದ ಮೂಲಕ ನಿರ್ದೇಶಕರು ಹೇಳಹೊರಟಿದ್ದಾರೆ,  ಬೆಂಗಳೂರು, ಮಡಿಕೇರಿ, ಚಿಕ್ಕಮಗಳೂರು, ಮೂಡಿಗೆರೆ ಸುತ್ತಮುತ್ತ  ಚಿತ್ರದ  ಶೂಟಿಂಗ್ ನಡೆಸಲಾಗಿದೆ‌.


     ಈ ಸಂದರ್ಭದಲ್ಲಿ ನಿರ್ಮಾಪಕಿ ಲಕ್ಷ್ಮಿ ಹರೀಶ್ ಮಾತನಾಡುತ್ತಾ "ಕೇಳಿದ್ದು ಸುಳ್ಳಾಗಬಹುದು, ನೋಡಿದ್ದು ಸುಳ್ಳಾಗಬಹುದು, ನಿಧಾನಿಸಿ ಯೋಚಿಸಿದಾಗ ನಿಜವು ತಿಳಿವುದು ಎಂಬ ಅಂಶವನ್ನಿಟ್ಟುಕೊಂಡು ಈ ಚಿತ್ರ ಮಾಡಿದ್ದೇವೆ.  ಪ್ರಭಾಕರ್ ಅವರು ಈ ಕಥೆಯನ್ನು ನಮಗೆ ಹೇಳಿದಾಗ ಆ ಸ್ಟೋರಿಲೈನ್  ಇಷ್ಟವಾಗಿ ಸಿನಿಮಾ  ಪ್ರಾರಂಭಿಸಿದೆವು, ಚಿತ್ರವೀಗ ಕೊನೇಹಂತದ ಡಿಐ ಕೆಲಸದಲ್ಲಿದೆ"  ಎಂದರು.


     ನಿರ್ದೇಶಕ ಪ್ರಭಾಕರ್ "ನಿರ್ದೇಶನ ನನ್ನ 12 ವರ್ಷಗಳ ಕನಸು, ಒಂದೆರಡು ತಮಿಳು ಸಿನಿಮಾಗಳಿಗೆ ಸಹನಿರ್ದೇಶಕನಾಗಿ ಕೆಲಸ ಮಾಡಿದ್ದು, ಇದು ನನ್ನ ನಿರ್ದೇಶನದ ಪ್ರಥಮ ಚಿತ್ರ, ಸಸ್ಪೆನ್ಸ್,  ಥ್ರಿಲ್ಲರ್ ಕಥಾನಕ ಇರೋ ಚಿತ್ರಕ್ಕೆ  'ಉಸಿರು'  ಎಂಬ ಟೈಟಲ್  ಯಾಕಿಟ್ಟಿದ್ದೇವೆ ಅಂತ ಸಿನಿಮಾ ನೋಡಿದಾಗ ತಿಳಿಯುತ್ತೆ. ಒಂದೊಳ್ಳೇ ಟೀಮ್ ಕಟ್ಟಿಕೊಂಡು  ದೊಡ್ಡ ಮಟ್ಟದಲ್ಲಿ ಈ ಸಿನಿಮಾ ಮಾಡಿದ್ದೇವೆ, ಚಿತ್ರದಲ್ಲಿ ಎಲ್ಲಾ ರೀತಿಯ ಎಮೋಶನ್ಸ್ ಇದ್ದು, ಚಿತ್ರದ ಪ್ರತಿ ಪಾತ್ರಕ್ಕೂ  ಅದರದೇ ಆದ  ಐಡೆಂಟಿಟಿ ಇರುತ್ತದೆ, ಯಾವ ಪಾತ್ರವೂ ಹೀಗೆ ಬಂದು ಹೋಗುವುದಲ್ಲ, ಗಂಡನ ಪ್ರೀತಿ, ಸ್ನೇಹಸಂಬಂಧ ಹೀಗೆ ಎಲ್ಲಾ ರೀತಿಯ ಕಂಟೆಂಟ್  ಚಿತ್ರದಲ್ಲಿದ್ದು  ಚಿತ್ರದ ಟ್ಯಾಗ್ ಲೈನ್ 07.08.09,  ತಿಲಕ್ ಒಬ್ಬ ಪೊಲೀಸ್ ಅಧಿಕಾರಿಯಾಗಿದ್ದು, ಅವರ ಪತ್ನಿಯ ಪಾತ್ರದಲ್ಲಿ  ಪ್ರಿಯಾ ಹೆಗ್ಡೆ ನಟಿಸಿದ್ದಾರೆ" ಎಂದು ಹೇಳಿದರು.


      ಚಿತ್ರದ ನಾಯಕ ತಿಲಕ್ ಶೇಖರ್  "ಚಿತ್ರದಲ್ಲಿ ನಾನೊಬ್ಬ ಇನ್‌ವೆಸ್ಟಿಗೇಶನ್ ಆಫೀಸರ್.  ಈ ಥರದ ಕಾನ್ಸೆಪ್ಟ್ ಎಲ್ಲೂ ಕೇಳಿರಲಿಲ್ಲ, 07.08.09ಎನ್ನುವ ಕೋಡ್ ವರ್ಡ್ ರೀತಿ ಚಿತ್ರದಲ್ಲಿ ತುಂಬಾ ಇಂಟರೆಸ್ಟಿಂಗ್ ಎಲಿಮೆಂಟ್ ಗಳಿವೆ ಎಂದು ಹೇಳಿದರು.


     ನಾಯಕಿ ಪ್ರಿಯಾ ಹೆಗ್ಡೆ "ಚಿತ್ರದಲ್ಲಿ  ನನ್ನ ಪಾತ್ರಕ್ಕೆ ಹಲವಾರು ಶೇಡ್ಸ್ ಇದೆ.  ಅದರಲ್ಲಿ ಪತ್ನಿಯ ಪಾತ್ರವೂ ಒಂದು. ನನ್ನ ಪಾತ್ರದಿಂದ ಚಿತ್ರಕಥೆಗೆ ಮೇಜರ್ ಟ್ವಿಸ್ಟ್ ಸಿಗುತ್ತದೆ.  ಮಹಿಳಾ ನಿರ್ಮಾಪಕಿಯ ಜತೆ ಕೆಲಸ ಮಾಡುತ್ತಿರುವುದು ಖುಷಿಯ ವಿಚಾರ, ಈ ಹಿಂದೆ ನಾನು ಮಾಡಿದ್ದ  ತೆಲುಗು ಸಿನಿಮಾ ನೋಡಿದ ನಿರ್ಮಾಪಕರು ನನಗೆ ಕಾಲ್ ಮಾಡಿದ್ದರು,  ಸುಮಾರು ಅಡೆ ತಡೆಗಳನ್ನು ಎದುರಿಸಿ ಸಿನಿಮಾ ಮುಗಿಸಿದ್ದೇವೆ" ಎಂದು ಹೇಳಿದರು.


     ಸಂಗೀತ ನಿರ್ದೇಶಕ ಆರ್‌ಎಸ್.ಗಣೇಶ್ ನಾರಾಯಣನ್  "ಹಾರ್ಟ್ಬೀಟ್ ಚಿತ್ರದಿಂದ ಆರಂಭವಾದ ನನ್ನ ಸಿನಿ ಜರ್ನಿಯ 25ನೇ ವರ್ಷದಲ್ಲಿ 'ಉಸಿರು' ಚಿತ್ರಕ್ಕೆ ಮ್ಯೂಸಿಕ್  ಮಾಡಿದ್ದೇನೆ, ಚಿತ್ರದಲ್ಲಿ  ಬೇರೆ ಬೇರೆ ಜಾನರ್‌ನಲ್ಲಿ 5 ಹಾಡುಗಳೂ ತುಂಬಾ ಚೆನ್ನಾಗಿ ಮೂಡಿಬಂದಿವೆ. ಅಭಿ ತುಂಬಾ ಚೆನ್ನಾಗಿ ಲಿರಿಕ್ ಬರೆದಿದ್ದಾರೆ, ಎಲ್ಲ ಪಾತ್ರಗಳಿಗೂ ಒಂದೊಂದು ಥೀಮ್ ಮಾಡಿದ್ದೇವೆ, ಫಾಸ್ಟ್  ಸ್ಕ್ರೀನ್ ಪ್ಲೈ  ಚಿತ್ರದಲ್ಲಿದ್ದು, ಎಲ್ಲೂ ಬೋರ್ ಹೊಡೆಸುವುದಿಲ್ಲ" ಎಂದು ಹೇಳಿದರು.  ಮತ್ತೊಬ್ಬ ನಟ ಸಂತೋಷ್, ನಟಿ ಅಪೂರ್ವ, ಖಳನಟ ಅರುಣ್, ಸಾಹಿತಿ, ಡೈಲಾಗ್ ರೈಟರ್ ಬೈರವರಾಮ ಇವರೆಲ್ಲ  ಚಿತ್ರದ ಕುರಿತು  ಮಾತನಾಡಿದರು,
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ