Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಪರೋಪಕಾರ ಜೀವನದಲ್ಲಿನ ಸುಖ ತೋರಿಸಿಕೊಟ್ಟ ಮಹಾನ್ ಚೇತನ ಪುಟ್ಟರಾಜ ಗವಾಯಿಗಳು: ಸುಶೀಲಾ ಶಿರೂರು. .



ಬಳ್ಳಾರಿ: 17..ಇಲ್ಲಿನ ವಿರಾಟ್ ನಗರದಲ್ಲಿ ಗುರುಪುಟ್ಟರಾಜ ಸಂಗೀತ ಪಾಠಶಾಲೆ ಟ್ರಸ್ಟ್ ನಿಂದ  ಪದ್ಮಭೂಷಣ ಡಾ.ಪಂಡಿತ ಪಟ್ಟರಾಜ ಕವಿ ಗವಾಯಿಗಳವರ 112 ನೇ ಜಯಂತಿ ಪ್ರಯುಕ್ತ ಗಾನ ತರಂಗ್  ಸಂಗೀತ ಕರ್ಯಕ್ರಮ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿದ ಕೊಟ್ಟೂರು ಸ್ವಾಮಿ ಮಹಾ ವಿದ್ಯಾಲಯದ ನಿವೃತ್ತ ಉಪನ್ಯಾಸಕರಾ  ಸುಶೀಲಾ ಶಿರೂರು ಮಾತಮಾಡಿ,  ಗವಾಯಿಗಳವರು ಅಂಧರಾದರೂ ಸಂಗೀತ ಪ್ರಪಂಚಕ್ಕೆ ಅಂಧ ಅನಾಥರ ಬಾಳಿಗೆ ಗಾನ ಗಂಧರ್ವರಾದರು. ಅವರು ಪ್ರಪಂಚಕ್ಕೆ ನೀಡಿದ ಸಂಗೀತ ದಾಸೋಹ ಅನ್ನದಾಸೋಹ ಸಾಹಿತ್ಯ ದಾಸೋಹ ದೊಂದಿಗೆ ಸಂಸ್ಕೃತ, ಕನ್ನಡ,  ಹಿಂದಿ ಭಾಷೆಗಳಲ್ಲಿ ಪುರಾಣ ರಚಿಸಿ ತ್ರಿಭಾಷಾ ಕವಿಗಳಾಗಿ ಪದ್ಮಭೂಷಣ ಪ್ರಶಸ್ತಿ ಪಡೆದು ಪರೋಪಕಾರ ಜೀವನದಲ್ಲಿ ನಿಜಸುಖವಿದೆ ಎಂದು ತೋರಿಸಿಕೊಟ್ಟ ಮಹಾನ್ ಚೇತನ ಪುಟ್ಟರಾಜ ಗುರುವರ್ಯರು ಎಂದರು.

ಅವರ ಜೀವನ ಚರಿತ್ರೆ ಯುಗಯುಗಾಂತರ ಕಳೆದರೂ ಅಳಿಸಲಾಗದಂತಹ ಕಲಾವಿದರನ್ನು ಶಿಷ್ಯ ಬಳಗವನ್ನು ನಾಡಿಗೆ ನೀಡಿದ್ದಾರೆ ಅವರ ಸಂಸ್ಕೃತಿ ಸಂಸ್ಕಾರ ನಮಗೆ ಆದರ್ಶಪ್ರಾಯ ಎಂದು ಹೇಳಿದರು.


ಅದ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಎನ್.ಡಿ ಯಂಕಮ್ಮ ಮಾತನಾಡಿ, ಸಂಗೀತ ಸಾಹಿತ್ಯದಿಂದ ಮನಸ್ಸು ಜಾಗೃತವಾಗಿ ಚಿಂತೆ ದೂರವಾಗಿ ಚಿಂತನೆ ಹೆಚ್ಚಾಗುತ್ತದೆ ಇದರಿಂದ ಮಾತೃಹದಯ ವ್ಯಕ್ತಿತ್ವ ಅಳವಡಿಸಿಕೊಂಡು ಗುರುಶಿಷ್ಯರ ಸಂಬಂಧ ಪರಂಪರೆ ಬೆಳೆಯುತ್ತಾ ಹೋಗುತ್ತದೆ ಎಂದು ಹೇಳಿದರು.

ಸ್ತ್ರಿಯರು ತಮ್ಮ ಹೆಣ್ಣು ಮಕ್ಕಳನ್ನ ಸಂಗೀತ ಸಾಹಿತ್ಯದಲ್ಲಿ ತೊಡಗಿಸಿಕೊಳ್ಳಲು ಪ್ರೊತ್ಸಾಹಿಸಿ ನಾಡಿನ ಶಿಲ್ಪಿಗಳಾಗಿ ಮಾಡುವ  ತಾಯಂದಿರ ಮುಖ್ಯ ಜವಬ್ದಾರಿ ಎಂದರು.

ಅತಿಥಿಗಳಾಗಿ ಹೆಚ್ ತಿಪ್ಪೇಸ್ವಾಮಿ ಮುದ್ದಟನೂರು ದೊಡ್ಡ ಬಸವ ಗವಾಯಿ ಭಾಗವಹಿಸಿದ್ದರು. ಸಂಗೀತ ಕಾರ್ಯಕ್ರಮವನ್ನ ವೀರೇಶ ದಳವಾಯಿ ಹಾಗೂ ಹುಸೇನಪ್ಪ ಅರಳಿಗೆ ನೂರು ಇವರು ನಡೆಸಿಕೊಟ್ಟರು ಯರೆಗೌಡ ಗಣಿಕೆಹಾಳು ನಬಿಸಾಬ್ ಕಗ್ಗಲ್ಲು, ಶರಸ್ವತಿ ಬಳ್ಳಾರಿ, ಕವಿತಾ ಕಗ್ಗಲ್ಲು ಭಾಗವಹಿಸಿದ್ದರು.

 ಪಾಠಶಾಲೆ ಅನೇಕ ಮಕ್ಕಳಿಂದ ವಚನ ಗಾಯನ ಕಾರ್ಯಕ್ರ ಮನೆರವೇರಿತು ತಬಲಾ ವಾದನ ವೀರೇಶ್ ಕುರುಗೋಡು ನಡೆಸಿಕೊಟ್ಟರು

ಪಂಚಾಕ್ಷರಿ ವಂದಿಸಿದರು. ಚಾಂದ್ ಭಾಷ ಕಾರ್ಯಕ್ರಮ ನಿರೂಪಿಸಿದರು

Advertisement
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದು ನದಾಫ್-ಪಿಂಜಾರ ಸಂಘ ತಾಲೂಕ ಘಟಕದ ಕಚೇರಿ ಉದ್ಘಾಟನೆ ಟ್ರಕ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ : ಅಕ್ಕ-ತಮ್ಮ ದಾರುಣ ಸಾವುತಾಲೂಕಾ ಅಧಿಕಾರಿಗಳ ಸಾಮಾನ್ಯ ಸಭೆ; ರೈತರಿಗೆ ಬೀಜ, ಗೊಬ್ಬರ ಕೊರತೆಯಾಗದಂತೆ ನೋಡಿಕೊಳ್ಳಿ: ಬಸವರಾಜ್ ಅಡವಿಮಠ್ ಸೂಚನೆಕೊಪ್ಪಳ ಕಾರ್ಯನಿರತ ಪತ್ರಕರ್ತರ ಸಂಘದ ಸಭೆನೂತನ ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ ಅವರಿಗೆ ಅಭಿನಂದಿಸಿದ ಲಕ್ಷ್ಮೀ  ಹೆಬ್ಬಾಳಕರ.ಸಿದ್ದರಾಮಯ್ಯ ಭೇಟಿ ಮಾಡಿ ಧನ್ಯವಾದ ಸಲ್ಲಿಸಿದ ಲಕ್ಷ್ಮೀ ಹೆಬ್ಬಾಳಕರಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ ಅವರಿಗೆ ಸತ್ಕರಿಸಿದ ಯುವ ಮುಖಂಡ  ರಾಹುಲ  ಜಾರಕಿಹೊಳಿ.ಸಚಿವ ಸತೀಶ ಜಾರಕಿಹೊಳಿ, ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ ಬೇಟಿ ಪರಸ್ಪರ ಶುಭ ಕೋರಿಕೆಗ್ಲೋಬಲ್ ಕ್ಯಾಪೆಬಿಲಿಟಿ ಸೆಂಟರ್‌ಗಳ ಬೆಳವಣಿಗೆಗೆ ಉತ್ತೇಜನ*ಶರಣು ಕಾರ್ಯಾಲಯ ಆರಂಭಿಸುವ ಮೂಲಕ ಬಡವರ ಕಣ್ಣಿರು ಒರೆಸುವ ಕಾರ್ಯಕ್ಕೆ ಮುಂದಾಗಿರುವುದು ಶ್ಲಾಘನೀಯ : ಬಳಗಾನೂರು ಶ್ರೀಗಳು,,*