ಸಂಡೂರು, ಮೇ 05..: - ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ, ಸ್ನಾತಕೋತ್ತರಕೇಂದ್ರ ನಂದಿಹಳ್ಳಿಯ ಸಮಾಜಕಾರ್ಯಅಧ್ಯಯನ ವಿಭಾಗದ ವತಿಯಿಂದ ಹಮ್ಮಿಕೊಂಡಿರುವ ಏಳು ದಿನಗಳ ಗ್ರಾಮೀಣ ಸಮಾಜಕಾರ್ಯ ಶಿಬಿರ-2026ಕ್ಕೆ ಸಂಡೂರುತಾಲೂಕಿನ ಜಿಗೇನಹಳ್ಳಿ ಗ್ರಾಮದಲ್ಲಿಗುರುವಾರ ಚಾಲನೆ ನೀಡಲಾಯಿತು.
ಉದ್ಘಾಟನೆಗೂ ಮುನ್ನಗ್ರಾಮದ ಪ್ರಮುಖ ಬೀದಿಗಳಲ್ಲಿ ವಿದ್ಯಾರ್ಥಿಗಳು ಮತ್ತುಗ್ರಾಮಸ್ಥರುಜಂಟಿಯಾಗಿ ಪಂಜಿನ ಮೆರವಣಿಗೆ ನಡೆಸಿದರು. 'ಶಿಕ್ಷಣ ಎಲ್ಲರ ಹಕ್ಕು', 'ಮೂಢನಂಬಿಕೆ ತೊಲಗಿಸಿ', 'ಸ್ವಚ್ಛಗ್ರಾಮ-ಆರೋಗ್ಯವಂತಗ್ರಾಮ' ಸೇರಿದಂತೆ ವಿವಿಧ ಘೋಷವಾಕ್ಯಗಳೊಂದಿಗೆ ನಡೆದ ಮೆರವಣಿಗೆಗ್ರಾಮಸ್ಥರ ಗಮನ ಸೆಳೆಯಿತು.
ಮೇ 1 ರಿಂದ ಮೇ 7 ರವರೆಗೆ ನಡೆಯಲಿರುವ ಈ ಶಿಬಿರದ ಉದ್ಘಾಟನಾಕಾರ್ಯಕ್ರಮದಲ್ಲಿಗ್ರಾಮದ ಹಿರಿಯರು, ಮುಖಂಡರು, ಎಸ್‍ಡಿಎಂಸಿ ಸದಸ್ಯರು ಹಾಗೂ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಶಿಬಿರ ಸಂಯೋಜಕ ಹಾಗೂ ವಿಭಾಗದಉಪನ್ಯಾಸಕ ಶ್ರೀ ಲಕ್ಷ್ಮಣ ತೋಳಿ, "ಈ ಏಳು ದಿನಗಳಲ್ಲಿ ಗ್ರಾಮದ ಪ್ರತಿಯೊಂದುಕುಟುಂಬದ ಸಾಮಾಜಿಕ-ಆರ್ಥಿಕ ಸಮೀಕ್ಷೆ, ಗ್ರಾಮದ ಪ್ರಮುಖ ಸಮಸ್ಯೆಗಳ ಅಧ್ಯಯನ, ಉಚಿತಆರೋಗ್ಯತಪಾಸಣಾ ಶಿಬಿರ, ಮಹಿಳೆಯರು, ಮಕ್ಕಳು, ಯುವಕರು, ರೈತರು ಮತ್ತು ಹಿರಿಯ ನಾಗರಿಕರೊಂದಿಗೆ ಪ್ರತ್ಯೇಕಕೇಂದ್ರೀಕೃತ ಗುಂಪು ಚರ್ಚೆಗಳನ್ನು ನಡೆಸಿ, ಅಂತಿಮವಾಗಿಗ್ರಾಮದ ಸಮಗ್ರಅಭಿವೃದ್ಧಿಗೆ ಪೂರಕವಾದ ವರದಿಯನ್ನು ಸಿದ್ಧಪಡಿಸಲಾಗುವುದು" ಎಂದು ವಿವರಿಸಿದರು.
ಗ್ರಾಮದ ಎಸ್‍ಡಿಎಂಸಿ ಅಧ್ಯಕ್ಷ ಶ್ರೀ ಪ್ರಶಾಂತ್ ಮಾತನಾಡಿ, "ಜಿಗೇನಹಳ್ಳಿಯಂತಹ ಗ್ರಾಮದಲ್ಲಿಇಂತಹ ವೈಜ್ಞಾನಿಕಅಧ್ಯಯನಆಧಾರಿತ ಶಿಬಿರದ ಅಗತ್ಯವಿತ್ತು. ವಿದ್ಯಾರ್ಥಿಗಳ ಈ ವಿಶಿಷ್ಟ ಚಟುವಟಿಕೆಗಳು ಗ್ರಾಮದಲ್ಲಿ ಸಕಾರಾತ್ಮಕ ಬದಲಾವಣೆಗೆ ನಾಂದಿಯಾಗಲಿದೆ" ಎಂದರು.
ಅಧ್ಯಕ್ಷತೆ ವಹಿಸಿದ್ದ ಸಮಾಜಕಾರ್ಯ ವಿಭಾಗದ ಮುಖ್ಯಸ್ಥೆಡಾ. ಸುಮ ಕೆ.ಜಿ. ಮಾತನಾಡಿ, "ನಮ್ಮಗ್ರಾಮೀಣ ಶಿಬಿರವು ಕೇವಲ ಸ್ವಚ್ಛತಾಕಾರ್ಯಕ್ಕೆ ಸೀಮಿತವಲ್ಲ. ಇದುಗ್ರಾಮದ ಸಮಗ್ರಅಧ್ಯಯನ, ಅಭಿವೃದ್ಧಿಯಲ್ಲಿನ ಅಡೆತಡೆಗಳ ಗುರುತಿಸುವಿಕೆ ಮತ್ತು ಸೂಕ್ಷ್ಮಯೋಜನೆರೂಪಿಸುವ ಪ್ರಕ್ರಿಯೆ. ನಮ್ಮ ವಿಭಾಗವು ಸಂಡೂರುತಾಲೂಕಿನಲ್ಲಿ ಪ್ರತಿ ವರ್ಷ ಬೇರೆ ಬೇರೆ ಗ್ರಾಮಗಳಲ್ಲಿ ಈ ಶಿಬಿರವನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ" ಎಂದರು.
ಶಿಬಿರದ ಸಹ ಸಂಯೋಜಕಡಾ. ಹನುಮಂತ ಜಿ. ಮಾತನಾಡಿ, "ಶಿಬಿರವೆಂದರೆ ವೇದಿಕೆ ಕಾರ್ಯಕ್ರಮ ಮಾತ್ರವಲ್ಲ, ಗ್ರಾಮದ ನಾಡಿಮಿಡಿತಅರಿಯುವ, ಜನರೊಂದಿಗೆ ಬೆರೆಯುವಕಲಿಕೆಯ ಪ್ರಯೋಗಶಾಲೆ" ಎಂದು ಬಣ್ಣಿಸಿದರು.
ಕಾರ್ಯಕ್ರಮದಲ್ಲಿವಿಭಾಗದಉಪನ್ಯಾಸಕರಾದಡಾ. ಹೊನ್ನೂರಪ್ಪಾಎಸ್, ಶ್ರೀ. ಲಿಂಗರಾಜಹಾಗೂಗ್ರಾಮದ ಸರಕಾರಿ ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ. ಚಂದ್ರಪ್ಪಾ, ಗ್ರಾಮದ ಮುಖಂಡರಾದ ಶ್ರೀ ಮಂಜುನಾಥ ಪಾಟೀಲ್, ಮಾಜಿಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ದ್ವಿತೀಯ ವರ್ಷದ ವಿದ್ಯಾರ್ಥಿನಿ ಕುಮಾರಿರೇಣುಕಾಕಾರ್ಯಕ್ರಮ ನಿರೂಪಿಸಿದರು.