Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಹಿರಿಯ ನಾಗರಿಕರಿಗೆ ಸೌಲಭ್ಯ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ:ಸುರೇಶ್ ಯಾದವ

ಬೆಳಗಾವಿ: ಹಿರಿಯ ನಾಗರಿಕರು ಸಮಾಜದ ಮಾರ್ಗದರ್ಶಕರು. ಅವರು ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು  ಪಡೆದುಕೊಂಡು ಉತ್ತಮ ಬದುಕು ನಡೆಸಬೇಕು.  ನಮ್ಮ ಫೌಂಡೇಶನ್ ದಿಂದ ಕೂಡ ನಿಮಗೆ ಬೇಕಾದ ಸಹಾಯ- ಸಹಕಾರ ಮಾಡಲಾಗುವುದು ಎಂದು ಸುರೇಶ ಯಾದವ ಪೌoಡೇಶನ್ ಅಧ್ಯಕ್ಷ  ಸುರೇಶ್ ಯಾದವ ಅವರು  ಭರವಸೆ ನೀಡಿದರು.

ಇಲ್ಲಿನ ರಾಮತೀರ್ಥ ನಗರದ ಸಮುದಾಯ ಭವನದಲ್ಲಿ
ಹಿರಿಯ ನಾಗರಿಕರ ಸಭೆಯಲ್ಲಿ ಅಖಿಲ ಭಾರತ ಹಿರಿಯ ನಾಗರಿಕರ ಮಹಾಸಂಗದ ಉಪಾಧ್ಯಕ್ಷರಾದ  ಎಂವಿ ಹಿರೇಮಠ  ಅವರೊಂದಿಗೆ  ಹಿರಿಯರಿಗೆ ಸರಕಾರದಿಂದ ಸಿಗುವ ಸೌಲಭ್ಯಗಳ ಕುರಿತು ಸುದೀರ್ಘ ಚರ್ಚೆ‌ ನಡೆಸಿ, ಅವರು ಮಾತನಾಡಿದರು.

ಹಿರಿಯರು ಮುಗ್ದ  ಮನಸ್ಸಿನ,  ಮೃದು ಸ್ವಭಾವದವರು , ಹೀಗಾಗಿ ನಮ್ಮ ರಾಮತೀರ್ಥನಗರದ ಹಿರಿಯರ  ಸಮಸ್ಯೆ ಗಳು ಶೀಘ್ರದಲ್ಲೇ ಪರಿಹಾರ ಮಾಡುವ ಪ್ರಾಮಾಣಿಕ  ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು‌‌.

ಹಿರಿಯ ನಾಗರಿಕರನ್ನು ಎಲ್ಲರೂ ಗೌರವದಿಂದ ಕಾಣಬೇಕು. ಅವರಲ್ಲಿರುವ ಸಂಸ್ಕಾರವನ್ನು ನಮ್ಮ ಮಕ್ಕಳಿಗೆ ತಿಳಿಸುವ ಕಾರ್ಯವಾಗಬೇಕು. ಸಮಾಜಕ್ಕಾಗಿ ಒಂದಿಷ್ಟು ಸೇವೆ ಮಾಡಬಹುದು ಆದರೆ, ಹಿರಿಯರ ಸೇವೆ ಎಂದಿಗೂ ಅಪಾರವಾದದ್ದು. ಅವರನ್ನು ಗೌರವಯುತವಾಗಿ ನಡೆಸಿಕೊಂಡು ಅವರಿಗೆ ಬೇಕಾದ ಸೌಲಭ್ಯಗಳನ್ನು ಕಲ್ಪಿಸುವ ಕೆಲಸ ನಾವೆಲ್ಲರೂ ಮಾಡೋಣ ಎಂದು ಹೇಳಿದರು.

ರಾಜ್ಯಾದಕ್ಷರಾದ ಎ ವೈ ಬೆಂಡಿಗೇರಿ ಅವರು ಮಾತನಾಡಿ,  ಸರಕಾರ ದಿಂದ ಸಿಗುವ ಸೌಲತ್ತುಗಳನ್ನು ತಮಗೆ ಸಿಗಲು ಶಾಸಕರು, ಅಧಿಕಾರಿಗಳ ಗಮನಕ್ಕೆ ತಂದು ತಮಗೆ ಅನುಕೂಲ ಮಾಡಿಕೊಡುತ್ತೇನೆ ಎಂದರು.

ಹಿರಿಯ ನಾಗರಿಕರ ಸಮಸ್ಯೆಗಳ ಬಗ್ಗೆ ಚರ್ಚಿಸಿ  ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಸಿಗುವ ಸೌಲಭ್ಯಗಳ ಬಗ್ಗೆ ಚರ್ಚಿಸಿ ಸಂಘಟಿತರಾಗಿ ಎಲ್ಲರ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಸುವ ಕೆಲಸ ನನ್ನದು ಎಂದು ಹೇಳಿದರು.

ಈ ಸಭೆಯಲ್ಲಿ ರಾಮ್ ತೀರ್ಥ ನಗರವಾಸಿ ಸಂಘದ ಅಧ್ಯಕ್ಷರಾದ ನಿರ್ವಾಣಿ , ಕಾರ್ಯದರ್ಶಿಗಳಾದ  ಮುದುಕಬಿ , ಜಿಲ್ಲಾಧ್ಯಕ್ಷರು  ಕೆಂಚರೋತ ,  ಕುಮಾರಸ್ವಾಮಿ ಲೇಔಟ್ ಹಿರಿಯ ನಾಗರೀಕರ ಅಧ್ಯಕ್ಷರಾದ  ವಿರೂಪಾಕ್ಷಯ್ಯ ನಿರಲಗಿಮಠ ಹಾಗೂ ಇತರರು ಇದ್ದರು.

Advertisement
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದು ನದಾಫ್-ಪಿಂಜಾರ ಸಂಘ ತಾಲೂಕ ಘಟಕದ ಕಚೇರಿ ಉದ್ಘಾಟನೆ ಟ್ರಕ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ : ಅಕ್ಕ-ತಮ್ಮ ದಾರುಣ ಸಾವುತಾಲೂಕಾ ಅಧಿಕಾರಿಗಳ ಸಾಮಾನ್ಯ ಸಭೆ; ರೈತರಿಗೆ ಬೀಜ, ಗೊಬ್ಬರ ಕೊರತೆಯಾಗದಂತೆ ನೋಡಿಕೊಳ್ಳಿ: ಬಸವರಾಜ್ ಅಡವಿಮಠ್ ಸೂಚನೆಕೊಪ್ಪಳ ಕಾರ್ಯನಿರತ ಪತ್ರಕರ್ತರ ಸಂಘದ ಸಭೆನೂತನ ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ ಅವರಿಗೆ ಅಭಿನಂದಿಸಿದ ಲಕ್ಷ್ಮೀ  ಹೆಬ್ಬಾಳಕರ.ಸಿದ್ದರಾಮಯ್ಯ ಭೇಟಿ ಮಾಡಿ ಧನ್ಯವಾದ ಸಲ್ಲಿಸಿದ ಲಕ್ಷ್ಮೀ ಹೆಬ್ಬಾಳಕರಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ ಅವರಿಗೆ ಸತ್ಕರಿಸಿದ ಯುವ ಮುಖಂಡ  ರಾಹುಲ  ಜಾರಕಿಹೊಳಿ.ಸಚಿವ ಸತೀಶ ಜಾರಕಿಹೊಳಿ, ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ ಬೇಟಿ ಪರಸ್ಪರ ಶುಭ ಕೋರಿಕೆಗ್ಲೋಬಲ್ ಕ್ಯಾಪೆಬಿಲಿಟಿ ಸೆಂಟರ್‌ಗಳ ಬೆಳವಣಿಗೆಗೆ ಉತ್ತೇಜನ*ಶರಣು ಕಾರ್ಯಾಲಯ ಆರಂಭಿಸುವ ಮೂಲಕ ಬಡವರ ಕಣ್ಣಿರು ಒರೆಸುವ ಕಾರ್ಯಕ್ಕೆ ಮುಂದಾಗಿರುವುದು ಶ್ಲಾಘನೀಯ : ಬಳಗಾನೂರು ಶ್ರೀಗಳು,,*