Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಜಾನಪದ ಸಾಹಿತ್ಯ ಸಂಸ್ಕೃತಿಯ ಬೇರು: ಸುಮಾ ಕಿತ್ತೂರ್

ಬೆಳಗಾವಿ:  ಜನಪದ ಸಾಹಿತ್ಯವು ಹಳ್ಳಿಗಳ ಬದುಕಿನ, ನಮ್ಮ ಸಂಸ್ಕೃತಿ ಮತ್ತು ಮೌಲ್ಯಗಳ ಮೂಲವಾಗಿದೆ. ನಮ್ಮ ಹಿರಿಯರು ಕಟ್ಟಿಕೊಟ್ಟಿರುವಂತಹ ಮೂಲ ಜನಪದ ಸಾಹಿತ್ಯ ನಮ್ಮ ಜೀವನಾಡಿ ಎಂದು ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ  ಸುಮಾ ಕಿತ್ತೂರ್ ಹೇಳಿದರು.

ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಜಿಲ್ಲಾ ಲೇಖಕಿಯರ ಸಂಘದ ವತಿಯಿಂದ   ದತ್ತಿನಿಧಿ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು. ಜನಪದ ಸಾಹಿತ್ಯವೂ ಆಕಾಶದಷ್ಟು ವಿಶಾಲ, ಸಾಗರದಷ್ಟು ಆಳ. ಅದರಲ್ಲಿ ಹಲವು ಪ್ರಕಾರಗಳಿವೆ. ಗಾದೆ, ಒಗಟು, ಒಡಪು, ಕಥೆ, ಗೀತೆ, ಕಥನಗೀತೆ ಪ್ರಮುಖವಾಗಿವೆ.  ನಮ್ಮ ಮಕ್ಕಳಿಗೆ ಮೂಲ ಜನಪದದ ಅರಿವೇ ಇಲ್ಲ.  ಜನರಿಗೆ ಇಂತಹ ತರಬೇತಿಗಳ ಅವಶ್ಯಕತೆ ಇದೆ. ಜಾನಪದ ಸಾಹಿತ್ಯ ಸಂಸ್ಕೃತಿಯ ಬೇರು, ಅದು ಅನಾದಿಕಾಲ ದಿಂದಲೂ ಬಂದಿದೆ. ಜಾನಪದ ಸಾಹಿತ್ಯದ ರುಚಿ ಉಂಡವರಿಗೆ ಗೊತ್ತು ಅದರ ಆಳ, ಅಗಲ ಹೀಗಾಗಿ ಇತ್ತಿಚೇಗೆ ಕಡಿಮೆಯಾಗತ್ತಿದೆ. ಅದಕ್ಕಾಗಿ ಮಕ್ಕಳಿಗೆ ಕಲಿಸುವ ಪ್ರಯತ್ನ ನಾವು ಮಾಡಬೇಕು ಎಂದು  ಅಭಿಪ್ರಾಯ ವ್ಯಕ್ತಪಡಿಸಿದರು.

ಪುಷ್ಪಾ ಮುರಗೋಡ ಮಾತನಾಡಿ ,   ಜಾನಪದ ಸಾಹಿತ್ಯದದ ವಿವಿಧ ಪ್ರಕಾರಗಳಿಗೆ, ಜಾನಪದ ದೇಶದ  ಜೀವಾಳ ಆ ಹಾಡುಗಳಲ್ಲಿ ನಾಡಿನ ಸಂಸ್ಕೃತಿಯೂ ಅಡಗಿದೆ ಎಂದರು.

ಡಾ. ಭವ್ಯ  ಅವರ ಯಕ್ಷಗಾನವು  ಎಲ್ಲರನ್ನೂ ಮಂತ್ರ ಮುಗ್ಧರನ್ನಾಗಿಸಿ ತಮ್ಮ ಅಭಿನಯ ಹಾಡು ಮಾತುಗಳಿಂದ ಚಕಿತಗೊಳಿಸಿದರು.

ಈ ವೇಳೆ  ಹಿರಿಯ ಸಾಹಿತಿಗಳಾದ ಸುನಂದ ಎಮ್ಮಿ ( ಜನಪದ ತ್ರಿಪದಿಗಳಲ್ಲಿ  ಸೋದರ ಸಂಬಂಧ) ಉಪನ್ಯಾಸ ನೀಡಿದರು.  ಲೇಖಕಿಯರ ಸಂಘ ಉಪಾಧ್ಯಕ್ಷರು ವಾಸಂತಿ ಮೇಳೇದ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು, ಮಹಾನಂದಾ ಪರುಶೆಟ್ಟಿ ,   ಡಾ. ಪದ್ಮ ಹೊಸಕೋಟೆ , ಸುನಿತಾ ಸೊಲ್ಲಾಪುರೆ, ಪ್ರಭಾ ಪಾಟೀಲ್ ,  ಜ್ಯೋತಿ ಮಾಳಿ, ಅಕ್ಕಮಹಾದೇವಿ ತಗ್ಗಿ , ದಾನಮ್ಮಾ ಅಂಗಡಿ  ,ಸುನಂದಾ ಮುಳೆ, ವಿದ್ಯಾ ರೆಡ್ಡಿ ,ಶೋಭಾ ಬನಶಂಕರಿ , ದ್ರಾಕ್ಷಾಯಿಣಿ ತಾಪಸೆ , ಆಶಾ ಸಂಸುದ್ದಿ, ಗೀತಶ್ರೀ ಬೆಣಚಿನಮರಡಿ,  ರುದ್ರಮ್ಮಾ ಯಾಳಗಿ, ಡಾ.  ಅನ್ನಪೂರ್ಣ ಹಿರೇಮಠ ನಿರೂಪಿಸಿದರು. ಸುನಿತಾ ನಂದೆನ್ನವರ ವಂದಿಸಿದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ