ಜಮಖಂಡಿ,07 :ನಿರಿಕ್ಷಿತ ಪ್ರಮಾಣದ ಮಳೆ ಯಾಗಿಲ್ಲ 149 ಎಂ.ಎಂ.ಗಿಂತಲು ಕಡಿಮೆ ಮಳೆ ದಾಖಲಾಗಿರುವದರಿಂದ ಮುಂಗಾರು ಬೆಳೆಗಳು ಬಾರದೇ ರೈತಾಪಿವರ್ಗ ಸಂಕಷ್ಟದಲ್ಲಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ಬೆಳೆಸಾಲ ಮನ್ನಾ ಮಾಡಬೇಕು ಎಂದು ತಾಲುಕು ಕಬ್ಬುಬೆಳೆಗಾರರ ಸಂಘದ ಅಧ್ಯಕ್ಷ ಹಣಮಂತ ಮಗದುಮ ಆಗ್ರಹಿಸಿದರು.ಸೋಮವಾರ ಕಾನಿಪ ಪತ್ರಿಕಾಭವನದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಉತ್ತರ ಕರ್ನಾಟಕ ಭಾಗದಲ್ಲಿ ಮುಂಗಾರು ಮಳೆ ಬಾರದ ಕಾರಣ ರೈತರು ಸಂಕಷ್ಟದಲ್ಲಿದ್ದಾರೆ. ಬಿತ್ತನೆ ಮಾಡಿದ ಬೆಳೆಗಳು ಮಳೆ ಇಲ್ಲದೆ ಒಣಗಿ ಹೋಗಿದೆ. ರಾಜ್ಯ ಸರ್ಕಾರ ಸೋಸೈಟಿಯಲ್ಲಿರು ಬೆಳೆ ಸಾಲ ಹಾಗೂ ಕೇಂದ್ರ ಸರ್ಕಾರ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿರುವ ರೈತರ ಬೆಳೆ ಸಾಲವನ್ನು ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.
ಬೆಂಬಲ ಬೆಲೆ ಘೋಷಿಸಿ ;
ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಂಬಲ ಬೆಲೆ ನಿಗದಿ ಪಡಿಸಬೇಕು, ಈರುಳ್ಳಿ, ಗೊವಿನ ಜೋಳ ಮುಂತಾದ ಬೆಳೆಗಳ ಬೆಲೆ ಕುಸಿತವಾಗಿದೆ. ಇದರಿಂದ ರೈತರು ಆರ್ಥಿಕ ನಷ್ಟ ಅನುಭವಿಸುವಂತಾಗಿದ್ದು ಸರ್ಕಾರ ಬೆಂಬಲ ಬೆಲೆ ನಿಗದಿ ಪಡಿಸಬೇಕು. ಕಳೆದ ವರ್ಷ್ ಸರ್ಕಾರ ಘೋಷಿಸಿದ್ದ ಕಬ್ಬಿಗೆ ಪ್ರತಿ ಟನ್‌ಗೆ 3300 ರೂಪಾಯಿಗಳನ್ನು ಜಮಾ ಮಾಡುವಲ್ಲಿ ವಿಫಲ ವಾಗಿದೆ ಕೆಲ ಸಕ್ಕರೆ ಕಾರ್ಖಾನೆಗಳು 3250 ರೂ ಗಳನ್ನು ಬಿಡುಗಡೆ ಮಾಡಿವೆ. ಇನ್ನು ಕೆಲವೆಡ 3200 ರೂಗಳನ್ನು ಬಿಡುಗಡೆ ಮಾಡಲಾಗಿದ್ದು ಸರ್ಕಾರ ಹಾಗೂ ಸಕ್ಕರೆ ಕಾರ್ಖಾನೆಗಳು ಸೇರಿ 3300 ರೂ ಬಿಲ್‌ನ್ನು ಕೂಡಲೇ ಬಿಡುಗಡೆ ಗೊಳಿಸಬೇಕು ಎಂದು ಓತ್ತಾಯಿಸಿದರು.
ಬಿಡದಿ ಟೌನ್‌ಸಿಪ್ ಹೆಸರಿನಲ್ಲಿ ರೈತರ ಫಲವತ್ತಾದ ಭೂಮಿಯನ್ನು ಕಬಳಿಸಲು ಹೊರಟಿರುವ ರಾಜ್ಯಸರ್ಕಾರ ಉತ್ತರ ಕರ್ನಾಟಕ ಭಾಗದಲ್ಲಿ ಸಾಕಷ್ಟು ಬರಡು ಜಮೀನು ಇದೆ ಅಲ್ಲಿ ತಮ್ಮ ಅಭಿವೃದ್ಧಿ ಕೆಲಸ ಮಾಡಲಿ ಬೆಂಗಳೂರು ಸುತ್ತ ಮುತ್ತಲು ಮಾತ್ರ ಅಭಿವೃದ್ಧಿಗೆ ಮುಂದಾಗಿರು ಸರ್ಕಾರಗಳು ಉತ್ತರ ಕರ್ನಾಟಕವನ್ನು ನಿರ್ಲಕ್ಷಿಸಿವೆ. ಕೃಷ್ಣಾ ಮೇಲ್ದಂಡೆ ಯೋಜನೆ, ಕುಡಚಿ ಬಾಗಲಕೋಟೆ ರೈಲು ಕಾಮಗಾರಿಗೆ ರೈತರಿಗೆ ಸೂಕ್ತವಾದ ಪರಿಹಾರ ನೀಡುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು. ರೈಲು ಮಾರ್ಗದ ಜಮಿನಿಗೆ ಕೇಲವ 5ಲಕ್ಷ ಪ್ರತಿ ಎಕರೆಗೆ ನೀಡಲಾಗಿದೆ. ಆದರೇ ಬಿಡದಿಯಲ್ಲಿ 2.5ಕೊಟಿ ರೂ ನಿಗದಿ ಪಡಿಸಿರುವದು ಉತ್ತರ ಕರ್ನಾಟಕದ ರೈತರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಹೇಳಿದರು. ಜಿಲ್ಲಾ ಉಪಾಧ್ಯಕ್ಷ ಕಲ್ಲಪ್ಪ ಬಿರಾದಾರ, ರಮೇಶ ಸವದಿ, ಮಲ್ಲಿಕಾರ್ಜುನ ಬೆಕ್ಕೇರಿ ಸುನೀಲ ಅಡಾಳಟ್ಟಿ, ಪೈಗಂಬರ ಮೊಮಿನ, ಮರೆಪ್ಪ ಬೆಳಗಲಿ, ಗುರಯ್ಯ ಕಂಕಣವಾಡಿ ಮುಂತಾದವರಿದ್ದರು.