ಬಳ್ಳಾರಿ,ಜೂ.12: ಆರ್‌ಎಸ್‌ಎಸ್-ಬಿಜೆಪಿ ಸರ್ಕಾರಗಳ ಆದೇಶದ ಮೇರೆಗೆ, ಈ ವಿಷಯದ ಕುರಿತು ಯಾವುದೇ ರೀತಿಯ ಸರ್ವಸಮ್ಮತಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ, ವಿವಿಧ ರಾಜ್ಯಗಳ ಶಾಸನಸಭೆಗಳಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಎಂಬ ಮಸೂದೆಯನ್ನು ಅಂಗೀಕರಿಸುವುದನ್ನು ಎಸ್‌ಯುಸಿಐ(ಕಮ್ಯುನಿಸ್ಟ್) ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರವಾಶ್ ಘೋಷ್ ತೀವ್ರವಾಗಿ ವಿರೋಧಿಸಿದ್ದಾರೆ.
ಶಾಸನಸಭೆಗಳಲ್ಲಿ ತಮಗಿರುವ ನಿರಂಕುಶ ಬಹುಮತದ ಬಲದಿಂದ “ಒಂದು ದೇಶ, ಒಂದು ಭಾಷೆ ಮತ್ತು ಒಂದು ಕಾನೂನು” ಎಂಬ ನೆಪವೊಡ್ಡಿ ಯುಸಿಸಿ ಎಂದು ಕರೆಯಲಾಗುವ ಕಾಯ್ದೆಯನ್ನು ಅಳವಡಿಸಿಕೊಳ್ಳಲು ಆರ್‌ಎಸ್‌ಎಸ್-ಬಿಜೆಪಿ ನೇತೃತ್ವದ ಗುಜರಾತ್, ಉತ್ತರಾಖಂಡ ಮತ್ತು ಅಸ್ಸಾಂ ಸರ್ಕಾರಗಳು ಕೈಗೊಂಡಿರುವ ನಿರ್ಧಾರದ ಬಗ್ಗೆ ನಾವು ತೀವ್ರ ಕಳವಳವನ್ನು ವ್ಯಕ್ತಪಡಿಸುತ್ತೇವೆ. ವಸ್ತುನಿಷ್ಠ ಸಾಮಾಜಿಕ-ರಾಜಕೀಯ ವಾಸ್ತವತೆಯನ್ನು ಗಣನೆಗೆ ತೆಗೆದುಕೊಳ್ಳದೆ ಮತ್ತು ಇಂತಹ ನಿರ್ಣಾಯಕ ವಿಷಯದ ಬಗ್ಗೆ ರಾಷ್ಟಿçÃಯ ಒಮ್ಮತವನ್ನು ಮೂಡಿಸುವ ಅನಿವಾರ್ಯತೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ, ವಿವಾದಾತ್ಮಕ ಶಾಸನವನ್ನು ಅಂಗೀಕರಿಸಲು ಕೈಗೊಂಡಿರುವ ಈ ಏಕಪಕ್ಷೀಯ ಕ್ರಮವು ಪ್ರಜಾಸತ್ತಾತ್ಮಕ ಸಂಹಿತೆ, ರೂಢಿ ಮತ್ತು ಆಚರಣೆಗಳಿಗೆ ವಿರುದ್ಧವಾಗಿದೆ.
ನಿರ್ದಿಷ್ಟ ಸಾಮಾಜಿಕ-ರಾಜಕೀಯ ಕಾರಣಗಳಿಂದಾಗಿ, ಬ್ರಿಟಿಷ್ ವಸಾಹತುಶಾಹಿ ಆಡಳಿತದ ವಿರುದ್ಧ ರಾಷ್ಟಿçÃಯ ಕಾಂಗ್ರೆಸ್‌ನ ಸಂಧಾನಪರ ಮನೋಭಾವದ ಬೂರ್ಜ್ವಾ ನಾಯಕತ್ವದ ನೇತೃತ್ವದಲ್ಲಿ ನಡೆದ ಸ್ವಾತಂತ್ರ‍್ಯ ಚಳವಳಿಯ ಹಾದಿಯಲ್ಲಿ ಭಾರತವು ರಾಜಕೀಯವಾಗಿ ಒಂದು ರಾಷ್ಟçವಾಗಿ ವಿಕಸನಗೊಂಡಿದ್ದರೂ, ಭಾರತೀಯ ಸಮಾಜದ ಪ್ರಜಾಪ್ರಭುತ್ವೀಕರಣದ ಕಾರ್ಯವು ಅಪೂರ್ಣವಾಗಿಯೇ ಉಳಿದಿರುವುದರಿಂದ ಅದು ಸಾಮಾಜಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಧರ್ಮ, ಜಾತಿ, ಭಾಷೆ, ಜನಾಂಗ, ಮೂಲ ಇತ್ಯಾದಿಗಳಿಂದ ವಿಭಜಿಸಲ್ಪಟ್ಟಿದೆ ಎಂಬುದನ್ನು ನೆನಪಿಸಿಕೊಳ್ಳುವುದು ಯೋಗ್ಯವಾಗಿದೆ. ಇದರ ಪರಿಣಾಮವಾಗಿ, ಭಾರತೀಯ ಜನರ ವಿವಿಧ ಸಮುದಾಯಗಳ ಸಾಮಾಜಿಕ ಪದ್ಧತಿಗಳು, ವಿವಾಹ ಮತ್ತು ಉತ್ತರಾಧಿಕಾರ ಕಾನೂನುಗಳು, ಧಾರ್ಮಿಕ ಆಚರಣೆಗಳು, ಆಹಾರ ಪದ್ಧತಿಗಳು, ಜೀವನ ವಿಧಾನ ಇತ್ಯಾದಿಗಳು ವೈವಿಧ್ಯಮಯವಾಗಿಯೇ ಮುಂದುವರಿದಿವೆ. ಇದನ್ನು ಮನಗಂಡೇ ಸಂವಿಧಾನ ಶಿಲ್ಪಿಗಳು ಸಹ ಯುಸಿಸಿಯನ್ನು ಅಳವಡಿಸಿಕೊಳ್ಳುವುದರಿಂದ ಜಾಗರೂಕತೆಯಿಂದ ದೂರ ಉಳಿದರು. ಆ ಸಮಯದಲ್ಲಿ, ರಾಷ್ಟಿçÃಯ ಏಕತೆ ಮತ್ತು ಒಗ್ಗಟ್ಟನ್ನು ಗಟ್ಟಿಗೊಳಿಸಲು ಅಗತ್ಯವಾದ ಪೂರಕ ವಾತಾವರಣವನ್ನು ಸಿದ್ಧಪಡಿಸದೆ, ಸಂವಿಧಾನದಲ್ಲಿ ಇಂತಹ ನಿರ್ಣಾಯಕ ನಿಬಂಧನೆಯನ್ನು ಅವಸರದಲ್ಲಿ ಸೇರಿಸುವುದು ತಿರುಗುಬಾಣವಾಗಿ, ಅಂತಹ ಕಾನೂನನ್ನು ಹೊಂದುವ ಉದ್ದೇಶವನ್ನೇ ಹಾಳುಗೆಡವಬಹುದು ಎಂದು ಅಭಿಪ್ರಾಯಪಟ್ಟಿದ್ದರು.
ನಂತರ, ೨೧ನೇ ಕಾನೂನು ಆಯೋಗವು ಸಹ ೨೦೧೮ರಲ್ಲಿ ಪ್ರಕಟಿಸಿದ ವಿವರವಾದ ಸಂವಿಧಾನ ಪತ್ರದಲ್ಲಿ, ಈ ಹಂತದಲ್ಲಿ ಯುಸಿಸಿ "ಅಗತ್ಯವೂ ಇಲ್ಲ ಮತ್ತು ಅಪೇಕ್ಷಣೀಯವೂ ಅಲ್ಲ" ಎಂದು ಬಲವಾಗಿ ಅಭಿಪ್ರಾಯಪಟ್ಟಿದೆ. ಪೂರಕ ವಾತಾವರಣವನ್ನು ಸೃಷ್ಟಿಸದೆ ಮತ್ತು ರಾಷ್ಟಿçÃಯ ಒಮ್ಮತವನ್ನು ಮೂಡಿಸದೆ ಯುಸಿಸಿಯನ್ನು ತಂದರೆ, ಅದು ಪ್ರಸ್ತುತ ಇರುವ ಭಿನ್ನಾಭಿಪ್ರಾಯಗಳನ್ನು, ಪರಸ್ಪರ ದ್ವೇಷ, ಅಪನಂಬಿಕೆ ಮತ್ತು ಪರಸ್ಪರರ ವಿರುದ್ಧ ಕೆಡುಕಿನ ಭಾವನೆಗಳನ್ನು ಉಲ್ಬಣಗೊಳಿಸುವುದರಲ್ಲಿ ಮಾತ್ರ ಕೊನೆಗೊಳ್ಳುತ್ತದೆ. ಇದಲ್ಲದೆ, ಈ ಬಲವಂತದ ಯುಸಿಸಿಯು ಅಲ್ಪಸಂಖ್ಯಾತ ಜನರ, ಅದರಲ್ಲೂ ವಿಶೇಷವಾಗಿ ಈಗಾಗಲೇ ಆಡಳಿತಾರೂಢ ಬಿಜೆಪಿಯ ಆಶ್ರಯದಲ್ಲಿ ಬೀಗುತ್ತಿರುವ ಉನ್ಮಾದದ ಕೋಮುವಾದಿ ಬಹುಸಂಖ್ಯಾತ ಗುಂಪುಗಳಿAದ ವಂಚನೆಗೆ, ಕಿರುಕುಳಕ್ಕೊಳಗಾಗಿರುವ, ಪೀಡಿಸಲ್ಪಟ್ಟಿರುವ ಮತ್ತು ಗುಂಪು ಹಲ್ಲೆ ಎದುರಿಸುತ್ತಿರುವ ಧಾರ್ಮಿಕ ಅಲ್ಪಸಂಖ್ಯಾತರ ಕಾನೂನುಬದ್ಧ ಹಿತಾಸಕ್ತಿ ಮತ್ತು ಆಕಾಂಕ್ಷೆಗಳನ್ನು ಅಪಾಯಕ್ಕೆ ದೂಡುತ್ತದೆ.
ಭಾರತೀಯ ಸಂವಿಧಾನ ಶಿಲ್ಪಿಗಳ ವಾದವನ್ನು ಮತ್ತು ೨೦೧೮ರಲ್ಲಿ ಪ್ರಕಟವಾದ ೨೧ನೇ ಕಾನೂನು ಆಯೋಗದ ಶಿಫಾರಸನ್ನು ನಿರ್ಲಕ್ಷಿಸಿ, ಬಿಜೆಪಿ ಆಳ್ವಿಕರು ಹಳೆಯ ಹಿಂದೂ ಕೋಡ್ ಬಿಲ್‌ನ ಹೊಸ ರೂಪಾಂತರವಾಗಿರುವ ಯುಸಿಸಿಯನ್ನು ಹೇರಲು ನಿರ್ಧರಿಸಿದ್ದಾರೆ.
ಅತ್ಯಂತ ಗಂಭೀರವಾದ ಕಳವಳದ ವಿಷಯವೆಂದರೆ, ಸಮಯ ಕಳೆದಂತೆ ಕೋಟ್ಯಂತರ ಶ್ರಮಜೀವಿ ಜನರ ನಡುವಿನ ಸಾಮಾಜಿಕ-ಸಾಂಸ್ಕೃತಿಕ ಭಿನ್ನಾಭಿಪ್ರಾಯಗಳನ್ನು ಕಡಿಮೆ ಮಾಡುವ ಬದಲು, ಬಂಡವಾಳಶಾಹಿ ಆಡಳಿತಗಾರರ ವಿರುದ್ಧದ ವರ್ಗ ಮತ್ತು ಸಾಮೂಹಿಕ ಹೋರಾಟಗಳನ್ನು ಕದಡಲು ಮತ್ತು 'ಹಿಂದೂ ವೋಟ್ ಬ್ಯಾಂಕ್' ಅನ್ನು ಬಲಪಡಿಸಲು ಆಡಳಿತಾರೂಢ ವ್ಯವಸ್ಥೆಗಳು, ಅದರಲ್ಲೂ ಮುಖ್ಯವಾಗಿ ಬಿಜೆಪಿ ಪಕ್ಷವು ಕೋಮು-ಜಾತಿ-ಜನಾಂಗೀಯ-ಸAಕುಚಿತ-ದುರಭಿಮಾನದ-ಭಾಷಾ-ಪ್ರಾದೇಶಿಕ ಸಂಘರ್ಷಗಳನ್ನು ಹೆಚ್ಚೆಚ್ಚು ಪ್ರಚೋದಿಸುವ ಮೂಲಕ ಮತ್ತಷ್ಟು ಉತ್ತೇಜನ ನೀಡುತ್ತಿವೆ.
ಆದ್ದರಿಂದ, ಜಾತಿ, ಮತ, ಧರ್ಮ, ಜನಾಂಗ ಅಥವಾ ಭಾಷೆಯ ಭೇದವಿಲ್ಲದೆ ಎಲ್ಲಾ ಪ್ರಜಾಪ್ರಭುತ್ವವಾದಿ ಮತ್ತು ಸುಚಿಂತನಾಶೀಲ ವ್ಯಕ್ತಿಗಳು ಒಂದಾಗಿ, ಇಂತಹ ಅತ್ಯಂತ ಹಾನಿಕಾರಕ ಯುಸಿಸಿ ಜಾರಿಯಿಂದ ಹಿಂದೆ ಸರಿಯುವಂತೆ ಎಲ್ಲಾ ಬಿಜೆಪಿ ಸರ್ಕಾರಗಳ ಮೇಲೆ ಒತ್ತಡ ಹೇರಲು, ಸಮಾಜದ ಎಲ್ಲಾ ವರ್ಗದ ಜನರನ್ನು ಒಳಗೊಂಡ ಒಂದು ಸಂಘಟಿತ, ಪ್ರಬಲ ಮತ್ತು ನಿರಂತರ ಜನಾಂದೋಲನವನ್ನು ರೂಪಿಸಬೇಕೆಂದು ನಾವು ಕರೆ ನೀಡುತ್ತೇವೆ ಎಂದು ಎಸ್‌ಯುಸಿಐ(ಸಿ) ಜಿಲ್ಲಾ ಕಾರ್ಯದರ್ಶಿ ರಾಧಕೃಷ್ಣ ಉಪಾಧ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.