Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ನಾಟ್ಯ ಭೂಷಣ ಏಣಗಿ ಬಾಳಪ್ಪ ಸ್ಮರಣೋತ್ಸವ: ಬಾಳಪ್ಪನವರ ಯಶೋಗಾಥೆಯ ಗುಣಗಾನ


ಬೆಳಗಾವಿ :  ಸವದತ್ತಿಯ ರಂಗ ಆರಾಧನಾ ಸಾಂಸ್ಕೃತಿಕ ಸಂಘಟನೆ ವತಿಯಿಂದ ಬೆಳಗಾವಿಯಲ್ಲಿ 3 ದಿನಗಳ ಕಾಲ ನಾಟ್ಯ ಭೂಷಣ ಏಣಗಿ ಬಾಳಪ್ಪ ಸ್ಮರಣೋತ್ಸವ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಯಿತು. 



ಬೆಳಗಾವಿಯ ಕನ್ನಡ ಭವನದಲ್ಲಿ ನವೆಂಬರ್ 7ರಂದು  ರಂಗಸಂಪದ ಬೆಳಗಾವಿ ಇವರಿಂದ ನಕ್ಷತ್ರ ಯಾತ್ರಿಕರು ನಾಟಕ ಪ್ರದರ್ಶನಗೊಂಡಿತು. ಸಂಧ್ಯಾ ಎಸ್. ರಚಿಸಿದ ಈ ನಾಟಕವನ್ನು  ಸವಿತಾ ಭೈರಪ್ಪ ನಿರ್ದೇಶಿಸಿದ್ದರು. ಶ್ರೀಪತಿ ಮಂಜನಬೈಲು ಅವರ ಸಂಗೀತವಿತ್ತು. ಇದೇ ವೇಳೆ ನಾಟಕಕಾರ ರಂಗ ನಿರ್ದೇಶಕ ಝಕೀರ ನದಾಫ ರಚನೆಯ ನೆಲಮುಗಿಲು ಮತ್ತು ಹಾಲು ಬಟ್ಟಲದೊಳಗಿನ ಪಾಲು ನಾಟಕ ಕೃತಿ ಲೋಕಾರ್ಪಣೆಗೊಂಡವು. ನೀಲಗಂಗಾ ಚರಂತಿಮಠಡಾ. ಗುರುದೇವಿ ಹುಲೆಪ್ಪನವರಮಠ,  ಸುಭಾಸ್ ಏಣಗಿ‌, ಸರ್ಜೂ ಕಾಟ್ಕರ್‌, ಶೈಲಜಾ ಭಿಂಗೆಅರವಿಂದ ಕುಲಕರ್ಣಿ, ಸವಿತಾ ಭೈರಪ್ಪಎಂ.ಕೆ.ಹೆಗಡೆ ಇವರುಗಳನ್ನು ಗೌರವಿಸಲಾಯಿತು.


ನವೆಂಬರ್ 8ರಂದು ಬಸವರಾಜ ಜಗಜಂಪಿರಮೇಶ್ ಜಂಗಲ್ಶಿರೀಷ ಜೋಶಿ, ವಿನೋದ ಅಂಬೇಕರಬಾಬಾಸಾಹೇಬ ಕಾಂಬ್ಳೆಪಿ‌.ಜಿ. ಕೆಂಪಣ್ಣವರ, ಡಾ. ರಾಮಕೃಷ್ಣ ಮರಾಠೆ, ಬಸವರಾಜ ನಿಂಬಾಳ, ಡಾ.ರಾಜಶೇಖರ ಮೊದಲಾದವರಿಗೆ ಗೌರವಾರ್ಪಣೆ ನಡೆಯಿತು. ನಂತರದಲ್ಲಿ ರಂಗ ಆರಾಧನಾ ಸಾಂಸ್ಕೃತಿಕ ಸಂಘಟನೆ ಸವದತ್ತಿ (ರಿ) ಇವರಿಂದ ಮಂಜು ನಾಯಕ್ ಚಳ್ಳೂರು ರವರ ಕಥೆಯಾಧಾರಿತ  ಹಾಲು ಬಟ್ಟಲದೊಳಗಿನ ಪಾಲು ನಾಟಕ ಪ್ರದರ್ಶನಗೊಂಡಿತು. ಈ ನಾಟಕವನ್ನು ಝಕೀರ ನದಾಫ ರಚಿಸಿ ನಿರ್ದೇಶಿಸಿದ್ದರು. 


ಭಾನುವಾರ ಸಮಾರೋಪ ಸಂದರ್ಭದಲ್ಲಿ ಎಲ್.ಎಸ್. ಶಾಸ್ತ್ರಿ, ಯ.ರು. ಪಾಟೀಲ, ಬಸವರಾಜ ರೊಟ್ಟಿಮಧುಕರ ಗುಂಡೇನಟ್ಟಿ, ರವಿ ಕೊಟಾರಗಸ್ತಿ, ಆನಂದ ಪುರಾಣಿಕ, ಎಸ್.ಎ. ಅರಕೇರಿ, ಅರವಿಂದ ಹುನಗುಂದ, ರವಿ ಭಜಂತ್ರಿ, ಆನಂದ ಭಿಂಗೆ ಮೊದಲಾದವರಿಗೆ ಗೌರವಾರ್ಪಣೆ ಮಾಡಲಾಯಿತು. ನಂತರದಲ್ಲಿ ರಂಗ ಆರಾಧನಾ ಸಾಂಸ್ಕೃತಿಕ ಸಂಘಟನೆ (ರಿ) ಸವದತ್ತಿ ಇವರಿಂದ ನೆಲಮುಗಿಲು ನಾಟಕ ಪ್ರದರ್ಶನಗೊಂಡಿತು.  ಈ ನಾಟಕವನ್ನು ಝಕೀರ ನದಾಫ ರಚಸಿ, ನಿರ್ದೇಶಿಸಿದ್ದರು.


 ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯ, ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಬೆಳಗಾವಿಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ರಂಗ ಸೃಷ್ಟಿ ಕಲಾತಂಡ ಹಾಗೂ ಬೆಳಗಾವಿಯ ಕನ್ನಡ ಭವನ ದ ಸಹಯೋಗದೊಂದಿಗೆ ನಾಟಕೋತ್ಸವ ನಡೆಯಿತು. 


ದಿವಂಗತ ಏಣಗಿ ಬಾಳಪ್ಪನವರನ್ನು ಸ್ಮರಿಸಿಕೊಳ್ಳುವ ನಿಮಿತ್ಯ ಹಾಗೂ ಬೆಳಗಾವಿ ಜಿಲ್ಲೆಯ ಪ್ರತಿಯೊಂದು ತಾಲೂಕಿನಲ್ಲಿ ಏಣಗಿ ಬಾಳಪ್ಪನವರ ಹೆಸರಿನಲ್ಲಿ ರಂಗಮಂದಿರಗಳು ನಿರ್ಮಾಣಗೊಳ್ಳಬೇಕು ಹಾಗೂ ಏಣಗಿಯಲ್ಲಿ ನಾಟ್ಯ ಭೂಷಣ ಬಾಳಪ್ಪನವರ ಹೆಸರಿನಲ್ಲಿ ಸ್ಮಾರಕ  ನಿರ್ಮಾಣಗೊಳ್ಳಬೇಕೆಂದು ಸರ್ಕಾರದ ಗಮನ ಸೆಳೆಯುವ ಕಾರಣಕ್ಕಾಗಿ ಅವರ ಹೆಸರಿನಲ್ಲಿ *ನಾಟ್ಯ ಭೂಷಣ ಏಣಗಿ ಬಾಳಪ್ಪ ಸ್ಮರಣೋತ್ಸವ* ದ ನಾಟಕೋತ್ಸವವನ್ನು ಏರ್ಪಡಿಸಲಾಗಿತ್ತು. 





ಈ ನಾಟಕೋತ್ಸವವನ್ನು ಸಾಹಿತಿ ದಿವಂಗತ ಎಸ್‌. ಎಲ್. ಭೈರಪ್ಪ, ರಂಗಕರ್ಮಿಗಳಾದ ದಿವಂಗತ ಯಶವಂತ ಸರದೇಶಪಾಂಡೆ, ದಿವಂಗತ ರಾಜು ತಾಳಿಕೋಟಿ, ದಿವಂಗತ ಡಿ. ಹಣುಮಕ್ಕ ಹಾಗೂ ಜಾಗತಿಕ ಲಿಂಗಾಯತ ಮಹಾಸಭೆಯ ದಿವಂಗತ ಅನ್ನಪೂರ್ಣ ಅಶೋಕ ಮಳಗಲಿ ಇವರುಗಳಿಗೆ ಅರ್ಪಿಸಲಾಯಿತು.





Advertisement
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದು ನದಾಫ್-ಪಿಂಜಾರ ಸಂಘ ತಾಲೂಕ ಘಟಕದ ಕಚೇರಿ ಉದ್ಘಾಟನೆ ಟ್ರಕ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ : ಅಕ್ಕ-ತಮ್ಮ ದಾರುಣ ಸಾವುತಾಲೂಕಾ ಅಧಿಕಾರಿಗಳ ಸಾಮಾನ್ಯ ಸಭೆ; ರೈತರಿಗೆ ಬೀಜ, ಗೊಬ್ಬರ ಕೊರತೆಯಾಗದಂತೆ ನೋಡಿಕೊಳ್ಳಿ: ಬಸವರಾಜ್ ಅಡವಿಮಠ್ ಸೂಚನೆಕೊಪ್ಪಳ ಕಾರ್ಯನಿರತ ಪತ್ರಕರ್ತರ ಸಂಘದ ಸಭೆನೂತನ ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ ಅವರಿಗೆ ಅಭಿನಂದಿಸಿದ ಲಕ್ಷ್ಮೀ  ಹೆಬ್ಬಾಳಕರ.ಸಿದ್ದರಾಮಯ್ಯ ಭೇಟಿ ಮಾಡಿ ಧನ್ಯವಾದ ಸಲ್ಲಿಸಿದ ಲಕ್ಷ್ಮೀ ಹೆಬ್ಬಾಳಕರಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ ಅವರಿಗೆ ಸತ್ಕರಿಸಿದ ಯುವ ಮುಖಂಡ  ರಾಹುಲ  ಜಾರಕಿಹೊಳಿ.ಸಚಿವ ಸತೀಶ ಜಾರಕಿಹೊಳಿ, ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ ಬೇಟಿ ಪರಸ್ಪರ ಶುಭ ಕೋರಿಕೆಗ್ಲೋಬಲ್ ಕ್ಯಾಪೆಬಿಲಿಟಿ ಸೆಂಟರ್‌ಗಳ ಬೆಳವಣಿಗೆಗೆ ಉತ್ತೇಜನ*ಶರಣು ಕಾರ್ಯಾಲಯ ಆರಂಭಿಸುವ ಮೂಲಕ ಬಡವರ ಕಣ್ಣಿರು ಒರೆಸುವ ಕಾರ್ಯಕ್ಕೆ ಮುಂದಾಗಿರುವುದು ಶ್ಲಾಘನೀಯ : ಬಳಗಾನೂರು ಶ್ರೀಗಳು,,*