Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಗೌರವ , ಅಭಿಮಾನ,ಆದರ್ಶ, ಒಳ್ಳೆಯ ವಿಚಾರ, ಆಚಾರದಿಂದ ವಿದ್ಯಾರ್ಥಿಗಳು ಬೆಳೆಯಬೇಕು   : ಡಾ. ಶ್ಯಾಮಲಾಬಾಯಿ ದಾಸೋಗ 












ನೇಸರಗಿ. ಜೀವನದಲ್ಲಿ ವಿದ್ಯಾರ್ಥಿಗಳು ಮುಂದೆ ಬರಬೇಕಾದರೆ  ಶ್ರದ್ದೆ, ಶಿಸ್ತು, ವಿನಯ, ಗೌರವ, ವಿಶ್ವಾಸ, ಸಹನೆ,ಒಳ್ಳೆಯ ಆಹಾರ,  ಇನ್ನೂ ಅನೇಕ ವಿಷಯಗಳಲ್ಲಿ ವಿಶ್ವಾಸದಿಂದ ವ್ಯಾಸಂಗ ಮತ್ತು ಸಾರ್ವಜನಿಕ ಕ್ಷೇತ್ರದಲ್ಲಿ ಉತ್ತಮವಾಗಿ ನಡೆದು ಸಮಾಜಪರ, ಮನೆ ಕೆಲಸಗಳಲ್ಲಿ ಪಾಲ್ಗೊಂಡು ಮುನ್ನಡೆದರೆ ಮುಂದಿನ ಜೀವನದಲ್ಲಿ ಖಂಡಿತ ವಿದ್ಯಾರ್ಥಿಗಳಾದ ತಾವು ಜೀವನದಲ್ಲಿ  ಯಶಸ್ವೀಯಾಗುತ್ತೀರಿ  ಎಂದು ಬೆಳಗಾವಿಯ    ಎಮ್ ಎಮ್ ಎಸ್ ಕಲಾ, ವಾಣಿಜ್ಯ, ವಿಜ್ಞಾನ ಮಹಾ ವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರಾದ ಶ್ರೀಮತಿ ಡಾ. ಶಾಮಲಾಬಾಯಿ ಭೀಮರಾಯಪ್ಪ ದಾಸೋಗ ಹೇಳಿದರು.

     ಅವರು ಶನಿವಾರದಂದು ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನೇಸರಗಿ  ಇದರ 2025-26 ನೇ ಸಾಲಿನ ಸಾಂಸ್ಕೃತಿಕ, ಕ್ರೀಡಾ, ಮತ್ತು ಎನ್ ಎಸ್ ಎಸ್, ಗೈಡ್ಸ್ ಘಟಕದ ಉದ್ಘಾಟನಾ  ಸಮಾರಂಭ ಮತ್ತು ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ  ಉದ್ಘಾಟನೆ ನೆರವೇರಿಸಿ ಮಾತನಾಡಿ ಹೆಚ್ಚಿನ ಅಂಕ ಪಡೆದರು ಅದರೊಂದಿಗೆ ಸಾಮಾನ್ಯ ಜ್ಞಾನ ಮುಖ್ಯ,ಎಲ್ಲ ವಿಭಾಗಗಳಲ್ಲಿ ಗುರುತಿಸಿಕೊಳ್ಳಿ, ಒಳ್ಳೆಯ ವ್ಯಕ್ತಿತ್ವ, ಹಿತವಾದ, ಮಿತವಾದ ಆಹಾರ, ಮನೆ ಊಟಕ್ಕೆ ಪ್ರಶಸ್ತ್ಯ,ಸಾಂದರ್ಭಿಕ ಹೊಂದಾಣಿಕೆ, ದೇವರ ಮೇಲೆ ನಂಬಿಕೆ ಬಗ್ಗೆ  ರಾಮಕೃಷ್ಣ ಪರಮಹಂಸ ಹೇಳಿದ್ದಾರೆ. ಮಾನವೀಯ ಮೌಲ್ಯ ಅರಿಯಿರಿ, ಹಿರಿಯರ ಪ್ರೇರಣೆ ಪಡೆಯಿರಿ, ಅಹಂ ಭಾವನೆ ಬೇಡ, ದ್ವೇಷ ಹೊರಹಾಕಿ, ಅತಿಯಾದ ಮನೋರಂಜನೆ ಬೇಡ,ಪಾಠದ ಜೊತೆ ಆಟದಲ್ಲಿ ಪಾಲ್ಗೊಳ್ಳಿ, ಯಾವುದೇ ಭಾಷೆಯ ಮೇಲೆ ದ್ವೇಷ ಬೇಡ, ಎಲ್ಲ ಭಾಷೆ ಕಲಿಕೆಯಿಂದ ಉತ್ತಮ ಭವಿಷ್ಯ, ಮನೆಯಲ್ಲಿ ತಾಯಿ ಮಾಡಿದ ಚಪಾತಿ ಬಿಟ್ಟು, ನಗು ಮುಖದಿಂದ ಪಿಜ್ಜಾ, ಬರ್ಗರ ಸೇವಿಸುತ್ತಿರಿ .ತಂದೆ, ತಾಯಿ, ಗುರುಗಳಿಗೆ ಗೌರವ ಕೊಡಿ, ಒಳ್ಳೆಯವರ ಮಾರ್ಗದರ್ಶನ, ಅನೇಕ ಮಹಾತ್ಮರ ಆದರ್ಶ ಪಾಲನೆ ಮಾಡಿ ತಮ್ಮ ವಿದ್ಯಾರ್ಥಿ ಜೀವನ ಯಶಸ್ವಿಯಾಗಿ ಮುಗಿಸಿ ಜೀವನದಲ್ಲಿ ಮುಂದೆ ಬನ್ನಿ ಎಂದರು.

   ಕಾಲೇಜು ಪ್ರಾಂನ್ಸುಪಾಲರಾದ  ಡಾ. ಫಕ್ಕಿರಗೌಡ ದುಂ. ಗದ್ದಿಗೌಡರ ಮಾತನಾಡಿ ಕ್ಷೇತ್ರದ ಶಾಸಕರಾದ ಬಾಬಾಸಾಹೇಬ ಪಾಟೀಲ ಅವರ ಶಿಕ್ಷಣ ಪ್ರೇಮದಿಂದ ನಮ್ಮ ಕಾಲೇಜಿಗೆ ಅನೇಕ ಕೆಲಸ ಕಾರ್ಯಗಳು ಆಗುತ್ತಿದ್ದು,ಕಾಲೇಜಿನ 2 ಹೈಟೆಕ್ ಕ್ಲಾಸ ರೂಮ್ , ಸಮಾರಂಭ ನಡೆಸಲು ಡಿಜಿಟಲ್ ಸಭಾ ಭವನ ನಿರ್ಮಿಸಲು ಶಾಸಕರು 1 ಕೋಟಿ 60 ಲಕ್ಷ ರೂಪಾಯಿಗಳ ಅನುಧಾನ ಒದಗಿಸಿದ್ದು ಇನ್ನೇನು ಕಾಮಗಾರಿ ಪ್ರಾರಂಭವಾಗಲಿದೆ ಎಂದರು. ಕಾಲೇಜು ಸುಧಾರಣಾ ಸಮಿತಿ ಸದಸ್ಯರ ಸಹಕಾರ, ಸಹಾಯ ಬಹಳ ಇದ್ದು ಅದಕ್ಕೆ ಅವರ ಮಾರ್ಗದರ್ಶನದಲ್ಲಿ ಅಭಿವೃದ್ಧಿ ಕೆಲಸ ಮಾಡುತ್ತೇವೆ. ನಮ್ಮ ಕರೆಗೆ ಓಗೊಟ್ಟು ವಿದ್ಯಾರ್ಥಿಗಳಿಗೆ ಉನ್ನತ ಮಟ್ಟದ ನೀತಿ, ತತ್ವ ಪಾಠ ಅರ್ಥಗರ್ಭಿತವಾಗಿ ತಿಳಿಹೇಲಿರುವ  ಹಿರಿಯರಾದ  ಡಾ. ಶಾಮಲಾಭಾಯಿ ದಾಸೋಗ ಅವರು ಹೇಳಿದ್ದು, ಅವರು ಹೇಳಿದ ಆದರ್ಶಗಳನ್ನು ಅಳವಡಿಸಿಕೊಂಡರೆ ನಿಮ್ಮ ಜೀವನ ಸಾರ್ಥಕವಾಗುತ್ತದೆ ಎಂದರು.

    ಕಾರ್ಯಕ್ರಮದಲ್ಲಿ ಕಾಲೇಜು ಸುಧಾರಣಾ ಸಮಿತಿ ಸದಸ್ಯರಾದ ನಜೀರ್ ಅಹಮ್ಮದ ತಹಶೀಲ್ದಾರ, ಚನಗೌಡ ಪಾಟೀಲ,  ಹಾಗೂ ಭೋಧಕ, ಭೋಧಕೇತ್ತರ ಸಿಬ್ಬಂದಿ, ವಿದ್ಯಾರ್ಥ ಮುಖಂಡರು, ವಿದ್ಯಾರ್ಥಿಗಳು, ವಿದ್ಯಾರ್ಥಿನೀಯರು  ಭಾಗವಹಿಸಿದ್ದರು. ಪರಿಚಯ ಭಾಷಣವನ್ನು ಪ್ರೋ. ಶೋಭಾ ಸಿದ್ನಾಳ, ಪ್ರಸ್ತವಿಕ ಭಾಷಣವನ್ನು  ಪ್ರೋ. ಸುರೇಖಾ ಶೆಟ್ಟಿ, ಕಾರ್ಯಕ್ರಮದ ನಿರೂಪಣೆಯನ್ನು ಪ್ರೋ. ಎಸ್ ಬಿ ಚವತ್ರಿಮಠ ನೆರವೇರಿಸಿದರು.ಸ್ವಾಗತವನ್ನು ಪ್ರೋ. ವಿನಾಯಕ ಹೊನ್ನಪ್ಪನವರ, ವಂದನೆಯನ್ನು ಪ್ರೋ. ಹರೀಶ ಎಚ್ ಆರ್ ನೆರವೇರಿಸಿದರು.

















Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ