ಗದಗ, ೫ : ಗದಗ ಜಿಲಾ ಬ್ರಾಹ್ಮಣ ಸಂಘದ ವತಿಯಿಂದ ೨೦೨೫-೨೬ ವೇ ಸಾಲಿನ ಎಸ್‌ಎಸ್‌ಎಲ್‌ಸಿ ಯಿಂದ ಡಿಗ್ರಿವರೆಗಿನ ವಿದ್ಯಾರ್ಥಿ ಪ್ರತಿಭಾ ಪುರಸ್ಕಾರ ಹಾಗೂ ಸರಕಾರಿ ಸೇವೆಯಿಂದ ಸೇವಾ ನಿವೃತ್ತರಿಗೆ ಸನ್ಮಾನ ಮತ್ತು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ದಿನಾಂಕ ೭ ರಂದು ರವಿವಾರ ಬೆಳಿಗ್ಗೆ ೧೦-೩೦ ಗಂಟೆಗೆ ಸಂಭಾಪುರ ರೋಡ್‌ನ ಕೇಶವ ಪಾರ್ಕನಲ್ಲಿರುವ ಶ್ರೀಶಂಕರಮಠ ಸಾಂಸ್ಕೃತಿಕ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಗದಗ ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ವೆಂಕಟೇಶ ಕುಲಕರ್ಣಿ ಹೇಳಿದರು.
ಅವರು ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಕಾರ್ಯಕ್ರಮದ ಸಾನಿಧ್ಯವನ್ನು ವೈದಿಕ ವಿದ್ವಾಂಸರಾದ ವೇ.ಮೂ. ರತ್ನಾಕರಭಟ್ ಜೋಶಿ ವಹಿಸುವರು. ಮಾಜಿ ಸಚಿವರು ಹಾಗೂ ಶಾಸಕರಾದ ಡಾ. ಎಚ್. ಕೆ. ಪಾಟೀಲ ಅವರು ಸಮಾರಂಭ ಉದ್ಘಾಟಿಸುವರು. ಗದಗ ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ವೆಂಕಟೇಶ ಕುಲಕರ್ಣಿ ಅಧ್ಯಕ್ಷತೆವಹಿಸುವರು. ಮುಖ್ಯ ಅತಿಥಿಗಳಾಗಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಬೆಂಗಳೂರು ಅಧ್ಯಕ್ಷರಾದ ಎಸ್. ರಘುನಾಥ, ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷರಾದ ಅಸುಗೋಡು ಜಯಸಿಂಹ, ಗಂಗಾವತಿಯ ಅಂತರರಾಷ್ಟಿçÃಯ ನಗೆ ಭಾಷಣಕಾರ ನರಸಿಂಹ ಜೋಶಿ, ಗದಗ ಜಿಲ್ಲಾ ಬ್ರಾಹ್ಮಣರ ಸಂಘದ ಮಹಾಪೋಷಕರಾದ ಗುರುರಾಜ ಬಳಗಾನೂರ, ಗದಗ ಜಿಲ್ಲಾ ಬ್ರಾಹ್ಮಣರ ಸಂಘದ ಗೌರವಾಧ್ಯಕ್ಷರಾದ ಡಾ. ಕುಶಾಲ ಗೋಡಖಿಂಡಿ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಗದಗ ಜಿಲ್ಲಾ ಪ್ರತಿನಿಧಿ ಶ್ರೀನಿವಾಸ ಹುಯಿಲಗೋಳ, ಶ್ರೀಶಂಕರಮಠ ಸೇವಾ ಸಮಿತಿ ಅಧ್ಯಕ್ಷರಾದ ಡಾ. ಜಿ. ಆರ್. ನರ್ಲೇಕರ, ತಾಲೂಕಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ದತ್ತಾತ್ರೇಯ ಜೋಶಿ, ತಾಲೂಕಾ ಬ್ರಾಹ್ಮಣ ಸಂಘ ಶಿರಹಟ್ಟಿ ಅಧ್ಯಕ್ಷರಾದ ಎನ್. ಆರ್. ಕುಲಕರ್ಣಿ, ತಾಲೂಕಾ ಬ್ರಾಹ್ಮಣ ಸಂಘದ ಲಕ್ಷೆö್ಮÃಶ್ವರ ಅಧ್ಯಕ್ಷರಾದ ಕೃಷ್ಣ ಎಸ್. ಕುಲಕರ್ಣಿ, ರೋಣ ತಾಲೂಕಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಗುರುರಾಜ ಕುಲಕರ್ಣಿ, ಗಜೇಂದ್ರಗಡ ತಾಲೂಕಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ರಾಮಚಂದ್ರ ಗಾಡಗೋಳಿ, ನರಗುಂದ ತಾಲೂಕಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಮಹಾದೇವ ಹೊಸೂರ, ಮುಂಡರಗಿ ತಾಲೂಕಾ ಬ್ರಾಹ್ಮಣ ಸಮಾಜ ಮುಖಂಡರಾದ ಹನುಮಂತರಾವ ದಪ್ತರದಾರ, ನರೇಗಲ್ಲ ದತ್ತ ಭಕ್ತ ಮಂಡಳಿ ಅಧ್ಯಕ್ಷರಾದ ಡಾ. ನಾಗರಾಜ ಗ್ರಾಮಪುರೋಹಿತ, ಮುಳಗುಂದ ಬ್ರಾಹ್ಮಣ ಸಮಾಜದ ಅಧ್ಯಕ್ಷರಾದ ಶ್ರೀಪಾದನಾಯಕ ಎಸ್. ತಮ್ಮಣ್ಣವರ, ಗದಗ ಜಿಲ್ಲಾ ಬ್ರಾಹ್ಮಣ ಸಂಘದ ಮಹಿಳಾ ಘಟಕದ ಸಂಚಾಲಕರಾದ ಶ್ರೀಮತಿ ಕಲಾವತಿ ಅಲಬುರ, ಗದಗ ಜಿಲ್ಲಾ ಬ್ರಾಹ್ಮಣ ಸಂಘದ ಜಿಲ್ಲಾ ಸಹಸಂಚಾಲಕರಾದ ಶ್ರೀಮತಿ ಸುಮನ ಪಾಟೀಲ ಆಗಮಿಸುವರು. ಸಂಗೀತ ಕಲಾವಿದರಾದ ಡಾ. ವೆಂಕಟೇಶ ಕುಲಕರ್ಣಿ ಸಂಗೀತ ಕಾರ್ಯಕ್ರಮ ನೀಡುವರು ಎಂದರು.
ಅಧಿಕ ಮಾಸದ ನಿಮಿತ್ಯ ಬೆಳಿಗ್ಗೆ ೯ ಗಂಟೆಗೆ ಗದಗ ಜಿಲ್ಲೆಯ ವಿವಿಧ ಮಹಿಳಾ ಭಜನಾ ಮಂಡಳಿಯವರಿAದ ಕುಂಕುಮಾರ್ಚನೆ ಹಾಗೂ ಭಜನಾ ಕಾರ್ಯಕ್ರಮ ಮತ್ತು ಮಧ್ಯಾಹ್ನ ೩ ಗಂಟೆಗೆ ನಿವ್ಥತ್ತ ಪ್ರಾಚಾರ್ಯ ಹಾಗೂ ವಾಗ್ಮಿಗಳಾದ ಪ್ರೊ. ಅನೀಲ ವೈದ್ಯ ಹಾಗೂ ಸಾಹಿತ ಹಾಗೂ ವಾಗ್ಮಿಗಳಾದ ನರೇಗಲ್ಲ ಅರುಣ ಕುಲಕರ್ಣಿ ಅವರ ಸಹಕಾರದಲ್ಲಿ ಗಂಗಾವತಿಯ ಅಂತರರಾಷ್ಟಿçÃಯ ನಗೆ ಭಾಷಣಕಾರ ನರಸಿಂಹ ಜೋಶಿ ಅವರಿಂದ ನಗೆ ಹಬ್ಬ ಕಾರ್ಯಕ್ರಮ ಜರುಗಲಿದೆ ಎಂದು ವೆಂಕಟೇಶ ಕುಲಕರ್ಣಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ÀÄ್ನ ವೈದಿಕ ವಿದ್ವಾಂಸರಾದ ವೇ.ಮೂ. ರತ್ನಾಕರಭಟ್ ಜೋಶಿ, ಗದಗ ಜಿಲ್ಲಾ ಬ್ರಾಹ್ಮಣರ ಸಂಘದ ಮಹಾಪೋಷಕರಾದ ಗುರುರಾಜ ಬಳಗಾನೂರ, ತಾಲೂಕಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ದತ್ತಾತ್ರೇಯ ಜೋಶಿ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಗದಗ ಜಿಲ್ಲಾ ಪ್ರತಿನಿಧಿ ಶ್ರೀನಿವಾಸ ಹುಯಿಲಗೋಳ, ರಾಮಚಂದ್ರ ಮೋನೆ, ರವಿಂದ್ರ ಜೋಶಿ, ಶ್ರೀಪಾದ ತಮ್ಮಣ್ಣವರ, ಕಿರಣ ಪೂಜಾರ, ಅನೀಲ ತೆಂಬದಮನಿ, ಅನೀಲ ಪುರಾಣಿಕ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಗುರುರಾಜ ಬಳಗಾನೂರ ನೇಮಕ್ಕೆ ಒತ್ತಾಯ
ನೂತನವಾಗಿ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ ಅವರ ನೇತೃತ್ವದಲ್ಲಿ ರಚನೆಯಾದ ಸಂಪುಟದಲ್ಲಿ ಬ್ರಾಹ್ಮಣ ಸಮಾಜಕ್ಕೆ ಪ್ರಾತಿನಿಧ್ಯ ದೊರೆತಿಲ್ಲ. ಮುಂದಿನ ಸಂಪುಟ ವಿಸ್ತರಣೆಯಲ್ಲಾದರೂ ಸಮಾಜಕ್ಕೆ ಸಚಿವ ಸ್ಥಾನ ನೀಡಬೇಕು. ಅಖಲ ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿಗೆ ಅಧ್ಯಕ್ಷರನ್ನಾಗಿ ನಿಕಟಪೂರ್ವ ಸದಸ್ಯರಾಗಿ ಗಣನೀಯ ಸೇವೆ ಸಲ್ಲಿಸಿದ ಗುರುರಾಜ ಬಳಗಾನೂರ ಅವರನ್ನು ನೇಮಕ ಮಾಡಬೇಕು.