ಬಳ್ಳಾರಿ,ಮೇ.09: ಬಳ್ಳಾರಿ ಜಿಲ್ಲೆಯ ಹೊಸ ಯರಗುಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ಕೆಪಿಎಸ್ ಶಾಲೆಗೆ ವಿಲೀನ ಮಾಡುವುದನ್ನು ವಿರೋಧಿಸಿ ಇಂದು ಎಐಡಿಎಸ್ಓ ಮತ್ತು ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ನೇತೃತ್ವದ ಅಡಿಯಲ್ಲಿ ಗ್ರಾಮಸ್ಥರು ಇಡೀ ಊರೆಲ್ಲಾ ಪ್ರತಿಭಟನಾ ಮೆರವಣಿಗೆ ಮಾಡಿ, ಶಾಲೆ ಮುಂದೆ ಬ್ಯಾನರ್ ಕಟ್ಟಿ, ಶಾಲೆಯ ಮುಖ್ಯ ಶಿಕ್ಷಕರ ಮೂಲಕ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು*
ಈ ಶಾಲೆ ಮುಚ್ಚಿದಲ್ಲಿ ನೂರಾರು ತಳ ಸಮುದಾಯದ ಮಕ್ಕಳು ಶಿಕ್ಷಣದಿಂದ ವಂಚಿರಾಗುತ್ತಾರೆ, ಕೆ ಪಿ ಎಸ್ ಯೋಜನೆ ಶಾಲೆ ಮುಚ್ಚುವ ಹುನ್ನಾರ ಹೊಂದಿರುವ ಯೋಜನೆ ಇದರ ವಿರುದ್ಧ ನಮ್ಮ ಹೋರಾಟವಾಗಿದೆ. ಸರ್ಕಾರ ಜನರ ವಿರೋಧದ ನಡುವೆಯೂ ನಮ್ಮ ಶಾಲೆಯನ್ನು ಮುಚ್ಚಲು ಮುಂದಾದಲ್ಲಿ ನಮ್ಮ ತೀರ್ವ ವಿರೋಧವನ್ನು ಎದುರಿಸಬೇಕಗುತ್ತದೆ ಎಂದು ಎಚ್ಚರಿಕೆ ನೀಡಿದರು
ಈ ಸಂದರ್ಭದಲ್ಲಿ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯ ಜಿಲ್ಲಾ ಉಪಾಧ್ಯಕ್ಷರಾದ ಗುರಳ್ಳಿ ರಾಜ, ಊರಿನ ಮುಖಂಡರಾದ ಘನ ಮಲ್ಲಿ, ಸುಂಕಣ್ಣ, ವೀರೇಶ್, ಶಿವಶಂಕರ್, ಎಂ ವೀರೇಶ್ ಸೇರಿದಂತೆ ಹಲವಾರು ಗ್ರಾಮಸ್ಥರು ಉಪಸ್ಥಿತರಿದ್ದರು