Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಅಥಣಿಯಲ್ಲಿ ಶ್ರದ್ಧಾ-ಭಕ್ತಿಯಿಂದ ಜರುಗಿದ ಶ್ರೀ ಕೇರಿ ಲಕ್ಕವ್ವ ದೇವಿಯ ಜಾತ್ರಾ ಮಹೋತ್ಸವ

ಅಥಣಿ:ತಾಲೂಕಿನ ವಿಜಯಪುರ ರಸ್ತೆಯಲ್ಲಿ ನೆಲೆಸಿರುವ ಶ್ರೀ ಕೇರಿ ಲಕ್ಕವ್ವ ದೇವಿಯ ಜಾತ್ರಾ ಮಹೋತ್ಸವವು, ಭಕ್ತರ ಅಪಾರ ಸಮ್ಮುಖದಲ್ಲಿ ಅತ್ಯಂತ ಸಡಗರ ಮತ್ತು ಭಕ್ತಿ ಭಾವದಿಂದ ಸಂಪನ್ನಗೊಂಡಿತು.
ಜಾತ್ರೆಯ ಅಂಗವಾಗಿ ದೇವಾಲಯದ ಆವರಣದಲ್ಲಿ ದೇವರಿಗೆ ವಿಶೇಷ ಪೂಜಾ ಕಾರ್ಯಕರ್ಮಳನ್ನು ನೆರವೇರಿಸಲಾಯಿತು. ಉತ್ಸವದ ಪ್ರಮುಖ ಆಕರ್ಷಣೆಯಾಗಿ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮವು ವೈಭವದಿಂದ ಜರುಗಿತು. ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ಭಕ್ತರು ದೇವಿಯ ದರ್ಶನ ಪಡೆದು ಪುನೀತರಾದರು.
ಈ ವೇಳೆ ಭಕ್ತಾದಿಗಳನ್ನು ಉದ್ದೇಶಿಸಿ ಮಾತನಾಡಿದ ಹಿರಿಯ ಮುಖಂಡರಾದ ಶಿವಾನಂದ ದಿವಾನಮಳ ಅವರು, ಈ ಕಲ್ಯಾಣ ಮಂಟಪವು ಭಕ್ತರ ದೇಣಿಗೆಯಿಂದ ಪೂರ್ಣಗೊಂಡಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯ. ದೇವಸ್ಥಾನದ ಆವರಣದಲ್ಲಿ ಕೈಗೊಳ್ಳಬೇಕಾದ ಮುಂದಿನ ಕಟ್ಟಡ ಕಾಮಗಾರಿಗಳಿಗಾಗಿ ಶಾಸಕ ಲಕ್ಷ್ಮಣ ಸವದಿ ಅವರು ಈಗಾಗಲೇ 30 ಲಕ್ಷ ರೂಪಾಯಿ ಅನುದಾನ ಬಿಡುಗಡೆ ಮಾಡಿದ್ದಾರೆ. ಶೀಘ್ರವೇ ಕೊಠಡಿಗಳ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಗುವುದು," ಎಂದರು.
ಮುಂದುವರೆದು ಮಾತನಾಡುತ್ತಾ, ಕಲ್ಯಾಣ ಮಂಟಪವನ್ನು ಬಡವರಿಗೆ ಅನುಕೂಲವಾಗುವ ದೃಷ್ಟಿಯಿಂದ ನಿರ್ಮಿಸಲಾಗಿದ್ದು, ಕಾರ್ಯಕ್ರಮಗಳಿಗೆ ಈ ಕೆಳಗಿನಂತೆ ದರ ನಿಗದಿಪಡಿಸಲಾಗಿದೆ ಎಂದು ತಿಳಿಸಿದರು. ಮದುವೆ ಸಮಾರಂಭ | 21,000 | 2,500 | 23,500 |
| ಕುಬುಸ ಕಾರ್ಯ | 15,000 | 2,500 | 17,500 |
| ಹುಟ್ಟುಹಬ್ಬ/ಉಪನಯನ | 11,000 | 2,500 | 13,500 |
ತಾಲೂಕಿನ ಜನತೆ ಕಲ್ಯಾಣ ಮಂಟಪದ ಈ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಅವರು ಕೋರಿದರು. 
ಈ ಜಾತ್ರಾ ಮಹೋತ್ಸವದಲ್ಲಿ ಪ. ಪೂ.ಶ್ರೀ ಮರುಳಸಿದ್ಧ ಮಹಾಸ್ವಾಮೀಜಿ,ಗಿರೀಶ ದಿವಾನಮಳ, ಶಿವು ಬಳ್ಳೊಳಿ, ಬಸಪ್ಪಾ ಬಕಾರಿ, ಬಾಬು ಜೋಗಾಣಿ, ಶಿವಪ್ಪಾ ರೊಕಡಿ,ಚಿದಾನಂದ ಹಳದಮಳ ,ಮಹಾದೇವ ಹಳದಮಳ, ಶ್ರೀಶೈಲ ಹಳದಮಳ, ಕೇದಾರಿ ಹಳದಮಳ,ನಿತ್ಯಾನಂದ ಚರಂತಿಮಠ, ಸುಭಾಸ ಕಾಗಲೆ, ಭೀಮು ದಿವಾನಮಳ, ಬಸಪ್ಪ ಮೈಗೂರ ,ಯೂಥ್ ಆಫ್ ಶಿವಯೋಗಿ ನಗರ ಸೇವಾ ಸಂಘ ಸರ್ವ ಸದಸ್ಯರು ಸೇರಿದಂತೆ ತಾಲೂಕಿನ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾದರು.

Advertisement
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪ್ರತಿಭಟನಾ ಸ್ಥಳಕ್ಕೆ ಪಟ್ಟಣ ಭೇಟಿ : ಕಾಮಗಾರಿ ಶೀಘ್ರ ಪೂರ್ಣಗೊಳಿಸುವ ಭರವಸೆ"ಮಕ್ಕಳಲ್ಲಿ ಸಂಸ್ಕಾರ ಬೆಳೆಸುವ ಕೆಲಸ ಮಾಡಿದಲ್ಲಿ ಮಾತ್ರ ಸಾಮರಸ್ಯದ ಬದುಕು ನಡೆಸಲು ಸಾಧ್ಯವಿದೆ""ಅಥಣಿ - ಪುಣೆ  ಮತ್ತು ಕೊಲ್ಲಾಪುರ  ಸಾರಿಗೆ ಬಸ್ ಗಳಿಗೆ ಚಾಲನೆ"  ಅಥಣಿಯಲ್ಲಿ ಶ್ರದ್ಧಾ-ಭಕ್ತಿಯಿಂದ ಜರುಗಿದ ಶ್ರೀ ಕೇರಿ ಲಕ್ಕವ್ವ ದೇವಿಯ ಜಾತ್ರಾ ಮಹೋತ್ಸವಬಕ್ರಿ ಈದ್ ಹಬ್ಬವನ್ನು ಶಾಂತಿಯುತವಾಗಿ ಆಚರಿಸಿ: ಗಣಪತಿ ಕೊಗನೋಳಿ"ಕಳೆದುಕೊಂಡ ಮೊಬೈಲ್ ಪತ್ತೆಮಾಡಲು ಸಿಇಐಆರ್ ಪೋರ್ಟಲ್ ಸಹಕಾರಿ"ರೈತರು ಸಬ್ಸಿಡಿ  ಬೀಜ, ಗೊಬ್ಬರದ ಸದುಪಯೋಗ ಪಡೆದುಕೊಳ್ಳಿ : ಬಾಬಾಸಾಹೇಬ ಪಾಟೀಲಕೊಪ್ಪಳದಲ್ಲಿ ಮುಂದುವರಿದ ಅಕ್ರಮ ಕಲ್ಲು ಗಣಿಗಾರಿಕೆ: ಶಾಸಕ, ಸಂಸದರ ವಿರುದ್ಧ ಗಣೇಶ ಹೊರತಟ್ನಾಳ್ ಆಕ್ರೋಶಬಿಡಿಸಿಸಿಐನ ಸೇವೆ ಶ್ಲಾಘನೀಯ: ಗಾದೆಪ್ಪತ್ಯಾಜ್ಯ ಮುಕ್ತ ನಗರವನ್ನಾಗಿಸಲು ಸಾರ್ವಜನಿಕರು ಪುರಸಭೆಗೆ ಸಹಕರಿಸಿ: ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ ಮನವಿ