Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕ್ರೀಡೆಗಳು ಮನಸ್ಸುನನ್ನು ಮಾನಸಿಕ, ದೈಹಿಕವಾಗಿ ಬಲಿಷ್ಠರನ್ನಾಗಿ ಮಾಡುತ್ತದೆ : ಸಿದ್ದು ಸವದಿ 


ಮಹಾಲಿಂಗಪುರ,ಮೇ,೧೫ : ಕ್ರೀಡೆ ಯಾವುದೇ ಇರಲಿ ನಿತ್ಯ ಒಂದು ಗಂಟೆ ಸಮಯ ಮೈದಾನದಲ್ಲಿ ಆಟ ಆಡಿದರೆ ರೋಗಗಳು ದೂರ ಆಗುತ್ತವೆ. ಆಯುಷ್ಯ ಹೆಚ್ಚುತ್ತದೆ. ಮಾನಸಿಕ ಮತ್ತು ದೈಹಿಕವಾಗಿ ಬಲಿಷ್ಠರಾಗುತ್ತಾರೆ ಎಂದು ತೇರದಾಳ ಮತಕ್ಷೇತ್ರದ ಶಾಸಕರಾದ ಸಿದ್ದು ಹೇಳಿದರು.
 ನಗರದ ಗಾಂಧಿ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಬಾಗಲಕೋಟ ಪ್ರಿಮಿಯರ ಲೀಗ್ ಮೊದಲ ಆವೃತ್ತಿ ಕ್ರಿಕೆಟ್ ಪಂದ್ಯಾವಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಕ್ರೀಡಾಳುಗಳು ಕ್ರೀಡಾ ಸ್ಫೂರ್ತಿಯಿಂದ ಆಡಿ ಸೋಲು ಗೆಲವು ಮುಖ್ಯ ಅಲ್ಲ ಕ್ರೀಡಾ ಸ್ಫೂರ್ತಿ ಮುಖ್ಯ ಅದನ್ನು ಮೆರೆದರೆ ಗೆಲವು ಬಂದೇ ಬರುತ್ತದೆ.ಇಂದಿನ ಜಗತ್ತಿನಲ್ಲಿ ಕ್ರಿಕೆಟ್ ಅನ್ನುವುದು ಒಂದು ಧರ್ಮವಾಗಿ ಬೆಳೆಯುತ್ತಿದೆ ಸ್ಟಾರ್ ಆಟಗಾರರನ್ನು ಅಭಿಮಾನಿಗಳು ದೇವರಂತೆ ಕಾಣುತ್ತಾರೆ. ಪ್ರತಿ ವರ್ಷ ಈ ಪಂದ್ಯಾವಳಿ ನಡೆಯಬೇಕು ಹೊಸ ಹೊಸ ಆಟಗಾರರು ಬೆಳಕಿಗೆ ಬರಲು ಇದು ಸಹಾಯಕವಾಗುತ್ತದೆ ಎಂದರು.
  ಕ್ರೀಕೇಟ್ ಪಂದ್ಯಾವಳಿಯನ್ನು ರಿಬ್ಬನ್ ಕಟ ಮಾಡುವ ಮೂಲಕ ಉದ್ಘಾಟನೆ ಮಾಡಿದ ಕೆ ಪಿ ಸಿ ಸಿ ಕಿಸಾನ್ ಕಾಂಗ್ರೆಸ್ ರಾಜ್ಯ ಸಂಚಾಲಕರು, ಕಾಂಗ್ರೆಸ್ ಮುಖಂಡರಾದ ಸಿದ್ದು ಕೊಣ್ಣೂರ್ ಮಾತನಾಡಿ ಆಟವು ಇಂದು ವ್ಯಾಪಾರವಾಗಿ ಮಾರ್ಪಟ್ಟಿದ್ದು ದುರಂತವೇ ಸರಿ ನಮ್ಮನ್ನೇ ನಾವೇ ಮಾರಿಕೊಂಡು ಆಟ ಆಡುವ ಸ್ಥಿತಿ ಬಂದಿದೆ ಮುಂದಿನ ದಿನಮಾನಗಳಲ್ಲಿ ಈ ಆಟವು ನಶಿಸುವ ಅಪಾಯ ಈಗಲೇ ಗೋಚರಿಸುತ್ತಿದೆ. ಇಂದು ವಿಶ್ವದಾದ್ಯಂತ ಐ ಪಿ ಎಲ್ ಸೇರಿ ನೂರಾರು ಲೀಗಗಳು ಆರಂಭವಾಗಿವೆ ಇದರಿಂದ ಆಟಗಾರರ ದೈಹಿಕ ಸಾಮರ್ಥ್ಯಕ್ಕೆ ಅಪಾಯ ಬಂದಿದೆ ಇಂದು ದೇಶ ಪ್ರತಿನಿಧಿಸಲು ಆಟಗಾರರ ಕೊರತೆ ಆಗುತ್ತಿದೆ ಇದು ಅಪಾಯಕಾರಿ ನಡೆ ಆಗಿದೆ ನಾನು ಕ್ರೀಡಾಳುಗಳೊಂದಿದೆ ಸದಾ ಇರುತ್ತೇನೆ ಎಂದರು.
ಈ ಸಂಧರ್ಭದಲ್ಲಿ ಶೇಖರ ಅಂಗಡಿ, ಬಸವರಾಜ್ ರಾಯರ, ಪಾಪಾ ನಾಲಬಂಧ, ಸಚಿನ್ ಮೂರಗುಂಡಿ, ಅಶೋಕ್ ಅಂಗಡಿ, ಸೈಪಲಿ ಭಾಗವಾನ , ಜಬಿಯುಲ್ಲಾ ಮುಲ್ಲಾ, ಶಿವಾನಂದ ಸಣ್ಣಕ್ಕಿ, ತಾಹಿರ ಸೌದಾಗರ, ದುಂಡಪ್ಪ ಪಟ್ಟಣಶೆಟ್ಟಿ , ಇಮಾಮ್ ಅಂಬಿ, ,ಆಯಾಸ ಯಾದವಾಡ ರಾಜೇಂದ್ರ ನಾವಿ ಸೇರಿ ಹಲವರು ವೇದಿಕೆ ಮೇಲೆ ಉಪಸ್ಥಿತರಿದ್ದರು. 

Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
೨೦ ವರ್ಷಗಳ ಹಿಂದೆ ಆದ ರಸ್ತೆ * ರಸ್ತೆ ತುಂಬೆಲ್ಲಾ ತಗ್ಗುದಿನ್ನಿಗಳದ್ದೇ ದರ್ಬಾರುಅದ್ದೂರಿ ಜನ್ಮದಿನ ಆಚರಣೆ ಬೇಡ; ಸೇವಾ ಕಾರ್ಯಕ್ರಮಗಳಿಗೆ ಆದ್ಯತೆ ನೀಡಿ: ಎ.ಎಸ್. ಪಾಟೀಲ ನಡಹಳ್ಳಿಶೈಕ್ಷಣಿಕ ಉತ್ಕೃಷ್ಟತೆ, ಸಂಶೋಧನೆ ಹಾಗೂ ನಾವೀನ್ಯತೆಗೆ ಒತ್ತು : ಡಾ. ಪ್ರಭಾಕರ ಕೋರೆ ಎಮ್ಮೆ ಹಾಲು ಪೂರೈಕೆಯಲ್ಲಿನ ಕುಸಿತ : ತೀವ್ರ ಕಳವಳ ವ್ಯಕ್ತಪಡಿಸಿದ ಬಾಲಚಂದ್ರ ಜಾರಕಿಹೊಳಿ ದಿ. 22-07-2026 ರಂದು ಶಾಸಕ ಬಾಬಾಸಾಹೇಬ ಪಾಟೀಲರ ಜನ್ಮದಿನದ ಪ್ರಯುಕ್ತ ರಕ್ತಧಾನ ಶಿಬಿರಆರೋಗ್ಯ ಕಾಳಜಿ ಮತ್ತು ಸುತ್ತ-ಮುತ್ತಲಿನ ಪರಿಸರ ಸ್ವಚ್ಛತಾ ಉಪನ್ಯಾಸದಲ್ಲಿ ಡಾ.ಜಗದೀಶ ಜಿಂಗಿ ಅಭಿಪ್ರಾಯಪ್ರತಿಭಾವಂತರಿಗೆ ಪುರಸ್ಕಾರ, ಬಸವ ಭವನ ನಿರ್ಮಾಣಕ್ಕೆ ವೇಗ: ವೀರಶೈವ ಲಿಂಗಾಯತ ಮಹಾಸಭಾ ನಿರ್ಧಾರಜಿಲ್ಲೆಯ ನರಗುಂದ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಬೆಳೆ ವೀಕ್ಷಣೆ ನಡೆಸಿದ ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ಪಿಂಚಣಿ ಸೇರಿದಂತೆ ಯಾವುದೇ ನಿವೃತ್ತಿ ಸೌಲಭ್ಯ ಸಿಗುವ ಮುನ್ನವೇ ಮುಖ್ಯೋಪಾಧ್ಯಾಯರ ನಿಧನ: ಎಸ್.ವಿ. ಸಂಕನೂರರ ತೀವ್ರ ಸಂತಾಪವಿಜಯನಗರ ಜಿಲ್ಲೆಯಲ್ಲಿ ಬೀದಿ ಬದಿ ವ್ಯಾಪಾರಿಗಳ ಹಕ್ಕುಗಳ ರಕ್ಷಣೆಗಾಗಿ ಜಿಲ್ಲಾಧಿಕಾರಿಗಳಿಗೆ ಮನವಿ