ಮುಧೋಳ: ಜು.೧೬ : ತಾಲೂಕಿನ ಸೋರಗಾಂವ ಗ್ರಾಮದ ಪಿಎಂ ಶ್ರೀ ಕರ್ನಾಟಕ ಪಬ್ಲಿಕ್ ಶಾಲೆಗೆ ಬುಧವಾರದಂದು ಜಿಲ್ಲಾ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಎಲ್. ಕೆ. ತೋರಣಗಟ್ಟಿ ಭೇಟಿ ನೀಡಿ ವಿದ್ಯಾರ್ಥಿಗಳ ಉದ್ದೇಶಿಸಿ ಮಾತನಾಡಿ,ಆರೋಗ್ಯವಂತ ಸಮಾಜದ ಅಡಿಪಾಯವೇ ಕ್ರೀಡೆ.ಮೈದಾನದಲ್ಲಿ ಕಲಿತ ಶಿಸ್ತು, ಜೀವನದ ಪ್ರತಿಯೊಂದು ಹಂತದಲ್ಲೂ ಯಶಸ್ಸಿನ ದಾರಿ ತೋರಿಸುತ್ತದೆ.ಕ್ರೀಡೆ ದೇಹವನ್ನು ಬಲಪಡಿಸಿದರೆ, ಸೋಲು-ಗೆಲುವು ಮನಸ್ಸನ್ನು ಗಟ್ಟಿಗೊಳಿಸುತ್ತದೆ. ಪ್ರತಿದಿನದ ಕ್ರೀಡೆ ಆರೋಗ್ಯಕರ ಬದುಕಿನ ಮೊದಲ ಹೆಜ್ಜೆ.ಆದರಿಂದ ಆಟದ ಸಮಯದಲ್ಲಿ ಆಟಗಳನ್ನು ಆಡುತ್ತಾ ದೈಹಿಕವಾಗಿ ಗಟ್ಟಿಗೊಳ್ಳಿ ಎಂದು ತಿಳಿಸಿದರು.
ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಎಸ್. ಎಂ. ಕುರಣಿ ಅವರು ಪ್ರಾರ್ಥನಾ ಸಭೆಯಲ್ಲಿ ಹಾಜರಾಗಿ ವಿದ್ಯಾರ್ಥಿಗಳ ಶಿಸ್ತು, ಸಮಯಪಾಲನೆ ಹಾಗೂ ಪ್ರಾರ್ಥನಾ ಕಾರ್ಯಕ್ರಮವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ನಂತರ ಇರ್ವ ಅಧಿಕಾರಿಗಳು ಶಾಲೆಯ ದೈಹಿಕ ಶಿಕ್ಷಣ ಚಟುವಟಿಕೆಗಳು, ಕ್ರೀಡಾ ತರಬೇತಿ,ಕ್ರೀಡಾ ಸೌಲಭ್ಯಗಳು ಹಾಗೂ ವಿದ್ಯಾರ್ಥಿಗಳ ಸಾಧನೆಗಳನ್ನು ಪರಿಶೀಲಿಸಿದರು. ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಕ್ರೀಡೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಪ್ರೋತ್ಸಾಹಿಸಿದರು.
ಈ ಸಂದರ್ಭದಲ್ಲಿ ಅಧಿಕಾರಿಗಳನ್ನು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾ ಬಿ ಆರ್ ಶಿರೂರ, ಶಿಕ್ಷಕರಾದ ಎಮ್ ಕೆ ಅಮ್ಮನಗಿ,ಆರ್ ಎಂ ಡೊಂಬರ,ವಿ ಎಚ್ ಗೌಡರ,ಡಿ ಎಸ್ ಪೂಜಾರ, ಎಸ್ ಎಸ್ ಜೀರಗಾಳ,ವಿ ಜಿ ಮಲಕನವರ, ಅಬ್ದುಲ್ ಸಾಬ್ ಹುಣ್ಣೂರ, ಈರಯ್ಯ ನಂದೇಗೋಳ,ಸುರೇಶ ಬೂದಿಹಾಳ,ಪರಶುರಾಮ ಜೋಗಿನವರ, ಪ್ರಶಿಕ್ಷಣಾರ್ಥಿಗಳಾದ ಅಂಜಲಿ ಹಗರಿ,ಸ್ವಾತಿ ಹೂಗಾರ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು .