Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸೊಗಲ, ಯಲ್ಲಮ್ಮನ ಗುಡ್ಡ  ರೈಲು ಸಂಪರ್ಕಕ್ಕೆ ಸಿದ್ದನಗೌಡರ ಅಗ್ರಹ


ಬೆಳಗಾವಿ: ಬೆಳಗಾವಿ- ಬೈಲಹೊಂಗಲ- ಸೊಗಲ-ಸವದತ್ತಿ ಮಾರ್ಗವಾಗಿ ಧಾರವಾಡ ಸಂಪರ್ಕ ಹೊಂದುವ ಹೊಸ ರೈಲ್ವೆ ಮಾರ್ಗ ರಚಿಸುವಂತೆ  ಪ್ರಸ್ತಾವಣೆಯನ್ನು ಸರ್ಕಾರಕ್ಕೆ ಸಲ್ಲಿಸಿ ಮಹಾರಾಷ್ಟ್ರದಿಂದ  ಶ್ರೀಸೋಗಲ ಕ್ಷೇತ್ರ ಮತ್ತು ರೇಣುಕಾ ಯಲ್ಲಮ್ಮ ಕ್ಷೇತ್ರಕ್ಕೆ ಬರುವ ಲಕ್ಷಾಂತರ ಭಕ್ತಾದಿಗಳಿಗೆ ಹಾಗೂ ಈ ಭಾಗದ ಸರಕು ಸಾಗಾಣಿಕೆಗೆ ಆಧ್ಯತೆ ನೀಡಲು,  ಪ್ರವಾಸೋದ್ಯಮದ ಉತ್ತೆಜನಕ್ಕಾಗಿ ಈ ಮಾರ್ಗ ಅತ್ಯವಶ್ಯಕವಾಗಿದೆ ಈಬಗ್ಗೆ ರೈಲ್ವೆ ಅಧಿಕಾರಿಗಳು ಗಮನ ಹರಿಸಬೇಕೆಂದು ನೈಋತ್ಯ ರೈಲ್ವೇ ವಿಭಾಗದ ಡಿಆರ್ ಯು ಸಿ ಸಿ ಸದಸ್ಯ ಎಫ್.ಎಸ್.ಸಿದ್ದನಗೌಡರ ರೈಲ್ವೆ ಸಲಹಾ ಮಂಡಳಿ ಸಭೆಯಲ್ಲಿ ಆಗ್ರಹಿಸಿದರು.


     ಹುಬ್ಬಳ್ಳಿ ರೈಲ್ವೆ ಮಂಡಳಿಯಲ್ಲಿ ಶುಕ್ರವಾರ ನಡೆದ 38 ನೇಯ ಡಿಅರ್ ಯು ಸಿ ಸಿ  ಸಭೆಯಲ್ಲಿ     ನೈಋತ್ಯ ರೈಲ್ವೆ ವಿಭಾಗದ ಮ್ಯಾನೇಜರ್  ಬೇಲಾ ಮೀನಾ ಅವರಿಗೆ ವಿವಿಧ ಬೆಡಿಕೆಗಳ ಮನವಿ ನೀಡಿ ಸಭೆಯಲ್ಲಿ ಮಾತನಾಡಿದ ಅವರು, ಜನಸಾಮನ್ಯರಿಗೆ ಸರಳ ಮತ್ತು ಅಗ್ಗದ ದರದ ಸುರಕ್ಷಿತ  ಪ್ರಯಾಣಕ್ಕೆ ಹೆಸರುವಾಸಿಯಾದ ರೈಲ್ವೆ ಪ್ರಯಾಣ ಇಂದು ಅಮೃತ ಕಾಲ ಅಡಿಯಲ್ಲಿ ನೈಋತ್ಯ ರೈಲ್ವೆ ವಿಭಾಗದ ಅನೇಕ ರೈಲ್ವೆ ನಿಲ್ದಾಣಗಳು ಉನ್ನತಿಕರಣಹೊಂದಿರುವದು ಸಮಸ್ತ ರೈಲ್ವೆ ಬಳಕೆದಾರರಿಗೆ ಖುಷಿ ತಂದಿರುವ ಸದ್ವಿಚಾರವಾಗಿದೆ.


  ಇಂತಹ ಸಮಯದಲ್ಲಿ ನನ್ನನ್ನು ನೈಋತ್ಯ ರೈಲ್ವೆ ವಿಭಾಗದ ಡಿ.ಅರ್.ಯು.ಸಿ.ಸಿ‌.ಸದಸ್ಯನಾಗಿ ಆಯ್ಕೆ ಮಾಡಿ ರೈಲ್ವೇ ಬಳಕೆದಾರರ ಅಲ್ಪ ಸೇವೆಮಾಡಲು ಅನಕೂಲ ಮಾಡಿದ ರಾಜ್ಯಸಭಾ ಸದಸ್ಯ  ಈರಣ್ಣ ಕಡಾಡಿ ಅವರಿಗೆ ಕೃತಜ್ಞತೆ ಸಲ್ಲಿಸಿ ಬೆಳಗಾವಿ ಜಿಲ್ಲೆಗೆ ಸಂಬಂಧಿಸಿದ ಬೆಳಗಾವಿ- ಧಾರವಾಡ ನೇರ ರೈಲ್ವೇ ಕಾಮಗಾರಿಯ ‌ಸಮಸ್ಯೆಗಳನ್ನು ಇತ್ಯಾರ್ಥಗೊಳಿಸಿ, ತ್ವರಿತಗತಿಯಲ್ಲಿ ಕಾಮಗಾರಿ ಪ್ರಾರಂಭಿಸಬೇಕು.  ಲೊಕಾಪೂರ- ರಾಮದುರ್ಗ- ಸವದತ್ತಿ ಹೊಸ ಮಾರ್ಗದ ಸರ್ವೆ ಕಾರ್ಯ ಕೈಗೊಳ್ಳಬೇಕು, ಬೆಳಗಾವಿ-ಮಿರಜ್ (ಸ್ಪೇಶಲ್) ರೈಲ್ವೆ ಬಹಳಷ್ಟು ಜನರಿಗೆ ಅತ್ಯಂತ ಅನಕೂಲಕರವಾಗಿದೆ. ಈ ರೈಲ್ವೆ ದರ ಹೆಚ್ಚಾಗಿದ್ದರಿಂದ ಹಾಗೂ ಕೆಲವು ಕಡೆಗಳಲ್ಲಿ ನಿಲುಗಡೆ ಇಲ್ಲದೆ ಇರುವದರಿಂದ ದಿನನಿತ್ಯ ಸಂಚರಿಸುವ ರೋಗಿಗಳು, ರೈತರು, ಕೂಲಿ ಕಾರ್ಮಿಕರು ಸರಕು ಸಾಗಾಣಿಕೆದಾರರಿಗೆ ಸಮಸ್ಯೆಯಾಗುತಿದ್ದು ಈ ಮಾರ್ಗಕ್ಕೆ "ಮೊಮು" ರೈಲ್ವೇ ನೀಡಬೇಕು. ಗೋವಾಕ್ಕೆ ತೆರಳುವ ರೈಲ್ವೆ ಮಾರ್ಗ ಡಬಲಿಂಗ್ ಕಾಮಗಾರಿ ವಿಳಂಬವಾಗುತಿದ್ದು ರೈಲ್ವೇ ಸಂಚಾರ‌ ಬಂದ ಆಗಿರುವದರಿಂದ  ಬೆಳಗಾವಿ ಜಿಲ್ಲೆಯಿಂದ ಕೃಷಿ ಉತ್ಪನ್ನಗಳು, ಹಾಲಿನ ಉತ್ಪನ್ನಗಳು, ಮೌಂಸ ಸಾಗಾಣಿಕೆ ಹಾಗೂ ಕುಲಿಕಾರ್ಮಿಕರು ಉದ್ಯೋಗ ಆರಿಸಿ ಗೊವಾಕ್ಕೆ ತೆರಳುವದು ಪ್ರವಾಸೋದ್ಯಮಕ್ಕೆ ದಿನ ನಿತ್ಯ ಓಡಾಡುವ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗುತಿದ್ದು ಡಬಲಿಂಗ್‌ ಕಾಮಗಾರಿ ಬೇಗನೆ ಪೂರ್ಣಗೊಳಿಸಿಬೇಕು. ಬೆಳಗಾವಿ ಸಮೀಪದ ಸೂಳೆಭಾವಿ ಹತ್ತಿರ ರೈಲ್ವೆ ಸೇತುವೆ ಸಮೀಪದ ತಡೆಗೊಡಿಯಿಂದ ರೈತರ ಜಮೀನುಗಳ ರಸ್ತೆಗೆ ತೊಂದರೆಯಾಗಿದ್ದು ಈ ಬಗ್ಗೆ ಶೀಘ್ರವಾಗಿ ಕ್ರಮ ಕೈಗೊಳ್ಳಬೇಕು.


 ಖಾನಾಪುರ ರೈಲ್ವೆ ನಿಲ್ದಾಣದ 2ನೇ ಪ್ಲಾಟ್ ಪಾರಂನಲ್ಲಿ ಮೇಲ್ಛಾವಣಿ ಇಲ್ಲದೆ ಪ್ರಯಾಣಿಕರು ಮಳೆಯಲ್ಲಿ ನೆನದುಕೊಂಡೆ ನಿಲ್ಲುವ ಸ್ಥಿತಿ ಇದೆ ಮೆಲ್ಛಾವಣೆ ಹಾಕಿ, ಅಸೋಗಾ ರಸ್ತೆಗೆ ಅಂಡರ್ ಪಾಸ್ ರಸ್ತೆ ಕಾಮಗಾರಿ ಆಮೆಗತಿಯಲ್ಲಿದೆ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಲು  ಕ್ರಮ‌ಕೈಗೊಳ್ಳಬೇಕು. ಪಂಡರಾಪೂರಕ್ಕೆ ಹೋಗುವ ಜಿಲ್ಲೆಯ ಲಕ್ಷಾಂತರ ಭಕ್ತರು ಅನಕೂಲಕ್ಕಾಗಿ  ಹುಬ್ಬಳ್ಳಿ-ಪಂಡರಾಪೂರ ರೈಲು ಪ್ರತಿದಿನ ಪ್ರಾರಂಭಿಸುವದಾಗಬೇಕು.

ಮನಗೂರ-ಬೆಳಗಾವಿ ರೈಲುಗಾಡಿ ನಿತ್ಯ ಸಂಚರಿಸಬೇಕು. ಬೆಳಗಾವಿ-ಬೆಂಗಳೂರ ವಂದೇ ಭಾರತ ರೈಲು ಶೀಘ್ರವಾಗಿ ಪ್ರಾರಂಭಿಸಬೇಕು ಮತ್ತು  ಬೆಳಗಾವಿಯ ಪ್ರಯಾಣಿಕರ ಅನಕೂಲಕ್ಕಾಗಿ  ಬೆಳಿಗ್ಗೆ 7 ಘಂಟೆಗೆ ಪ್ರಾರಂಭಿಸಬೇಕು ಎಂದು ತಿಳಿಸಿ ಇನ್ನು ಅನೇಕ ರೈಲ್ವೆ ಬಳಕೆದಾರರ ಸಮಸ್ಯೆಗಳನ್ನು ತಿಳಿಸಿದರು.  ಕೆಲ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿದ ರೈಲ್ವೆ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳುವದಾಗಿ ಹೇಳಿದ್ದಾರೆ.ಸಭೆಯಲ್ಲಿ  ಆಂದ್ರಪ್ರದೇಶ, ಗೋವಾ, ಹಾಗೂ ಕರ್ನಾಟಕದ ಡಿ.ಆರ್.ಯು.ಸಿ.ಸಿ ಸದಸ್ಯರು ವಿಭಾಗೀಯ ಎಲ್ಲ ರೈಲ್ವೇ ಅಧಿಕಾರಿಗಳು ಭಾಗಿಯಾಗಿದ್ದರು
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ