ಇಂಡಿ : ತಾಲೂಕಿನಲ್ಲಿ ಹರಿಯುವ ಭೀಮಾ ನದಿಗೆ ಹದಿನಾರು ಸಾವಿರ ಕ್ಯೂಸೆಕ್ ನೀರು ಹರಿಯಬಿಡಲಾಗಿದೆ ಎಂದು ಕಂದಾಯ ಉಪವಿಬಾಘಾಧಿಕಾರಿ ಚಿದಾನಂದ ಗುರುಮೂರ್ತಿ ತಿಳಿಸಿದ್ದಾರೆ.
ನೀರು ಇಂದು ಧೂಳಖೇಡ ವರೆಗೆ ಬಂದಿದ್ದು ಸಂಜೆಯ ವರೆಗೆ ಇಂಡಿ ತಾಲೂಕು ಪ್ರವೇಶಿಸುವ ಸಾಧ್ಯತೆ ಇದೆ.
ಈ ನೀರು ಇಂಡಿ ಪಟ್ಟಣಕ್ಕೆ ಕುಡಿಯುವ ನೀರಿನ ಕುರಿತು ಮತ್ತು ನದಿ ದಂಡೆಯ ಪಾತ್ರದ ಹಳ್ಳಿಗಳಿಗೆ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಕುರಿತು ಉಪಯೋಗಿಸಲಾಗುವದು ಎಂದು ಗುರುಮೂರ್ತಿ ತಿಳಿಸಿದ್ದಾರೆ.