ಕಾನಿಪ ವಾರ್ಷಿಕ ಪ್ರಶಸ್ತಿಗೆ ಶಿವಾನಂದ ಹಿರೇಮಠ ಅವರು ಆಯ್ಕೆ
ಗದಗ: ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘದ ೨೦೨೪ನೇ ವಾರ್ಷಿಕ ಪ್ರಶಸ್ತಿಗಳು ಮಂಗಳವಾರ ಪ್ರಕಟವಾಗಿದ್ದು ಟಿ.ಕೆ. ಮಲಗೊಂಡು ತನಿಖಾ ವರದಿ ಪ್ರಶಸ್ತಿಗೆ ಗದಗ ಜಿಲ್ಲೆಯ ವಿಜಯವಾಣಿ ದಿನಪತ್ರಿಕೆ ಹಿರಿಯ ವರದಿಗಾರರಾದ ಶಿವಾನಂದ ಹಿರೇಮಠ ಭಾಜನರಾಗಿದ್ದಾರೆ. ಇದೇ ಏಪ್ರಿಲ್ ೧೧ ಮತ್ತು ೧೨ ರಂದು ಬೀದರನಲ್ಲಿ ಜರಗುವ ೪೦ ನೇ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನದಲ್ಲಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಪ್ರಶಸ್ತಿ ಬಾಜನರಾದ ಶಿವಾನಂದ ಹಿರೇಮಠ ಅವರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷರಾದ ರಾಜು ಹೆಬ್ಬಳ್ಳಿ ಅವರು ಸೇರಿದಂತೆ ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿ, ಜಿಲ್ಲಾ ಕಾರ್ಯಕಾರಿ ಮಂಡಳಿ ಹಾಗೂ ಸರ್ವ ಸದಸ್ಯರು ಅಭಿನಂದಿಸಿದ್ದಾರೆ.
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.