Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸಿಂದೋಳ್ ಸಮಾಜದ ಚಿನ್ನ ಯಲ್ಲಪ್ಪ ನಿಧನ : ವೈ ಶಿವಕುಮಾರ್ ಸಂತಾಪ ಆರ್ಥಿಕ ನೆರವು 

ಬಳ್ಳಾರಿ, ಮೇ 11. ಕರ್ನಾಟಕ ರಾಜ್ಯ ಸಿಂಧೋಳ ಹಾಗೂ ಅಲೆಮಾರಿ ಸಮುದಾಯದಲ್ಲಿ  ದೀರ್ಘಕಾಲ ಸೇವೆ ಸಲ್ಲಿಸಿದ್ದ ಚಿನ್ನ ಯಲ್ಲಪ್ಪ ಅವರ ನಿಧನದಿಂದ ಸಮುದಾಯದಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿದೆ ಅವರ ಕುಟುಂಬಕ್ಕೆ ದೇವರು ದುಃಖವನ್ನು ಬರಿಸುವ ಶಕ್ತಿ ಕೊಡಲಿ ಎಂದು ಕೆಪಿಸಿಸಿ ಸಾಮಾಜಿಕ ನ್ಯಾಯ ಸಮಿತಿಯ ಉಪಾಧ್ಯಕ್ಷ ವೈ. ಶಿವಕುಮಾರ್ ಸಂತಾಪವನ್ನು ವ್ಯಕ್ತಪಡಿಸಿದ  ವೈ. ಶಿವಕುಮಾರ್  ಚಿನ್ನ ಯಲ್ಲಪ್ಪ ಅವರ ನಿವಾಸಕ್ಕೆ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. ಇದೇ ವೇಳೆ ಕುಟುಂಬಕ್ಕೆ ಆರ್ಥಿಕ ಸಹಾಯ ಧನವನ್ನು ನೀಡಿ ಮಾನವೀಯತೆ ಮೆರೆದರು.
ಚಿನ್ನ ಯಲ್ಲಪ್ಪ ಅವರಿಗೆ ಮೂವರು ಪುತ್ರರು ಹಾಗೂ ಒಬ್ಬ ಪುತ್ರಿ ಇದ್ದು, ಕುಟುಂಬದ ಪರಿಸ್ಥಿತಿ ಕುರಿತು ಮಾಹಿತಿ ಪಡೆದ ವೈ. ಶಿವಕುಮಾರ್ ಅವರು ಮಕ್ಕಳ ಶಿಕ್ಷಣ ಯಾವುದೇ ಕಾರಣಕ್ಕೂ ನಿಲ್ಲಬಾರದು ಎಂದು ಹೇಳಿದರು. ಶಿಕ್ಷಣಕ್ಕೆ ಸಂಬಂಧಿಸಿದ ಅಗತ್ಯ ಸಹಕಾರ ಹಾಗೂ ನೆರವನ್ನು ಮುಂದಿನ ದಿನಗಳಲ್ಲಿಯೂ ನೀಡುವುದಾಗಿ ಕುಟುಂಬಕ್ಕೆ ಭರವಸೆ ನೀಡಿದರು.
ಸಮುದಾಯದ ಮುಖಂಡರು ಮಾತನಾಡಿ, “ವೈ. ಶಿವಕುಮಾರ್ ಅವರು ಕೇವಲ ರಾಜಕೀಯ ವ್ಯಕ್ತಿಯಲ್ಲ, ಅಲೆಮಾರಿ ಸಮುದಾಯದ ನೋವು-ನಲಿವುಗಳಿಗೆ ಸ್ಪಂದಿಸುವ ಹೃದಯವಂತ ನಾಯಕ. ಸಮುದಾಯದ ಜನರ ಶಿಕ್ಷಣ, ಉದ್ಯೋಗ ಹಾಗೂ ಹಕ್ಕುಗಳಿಗಾಗಿ ಸದಾ ಹೋರಾಟ ನಡೆಸುತ್ತಿದ್ದಾರೆ,” ಎಂದು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ  HP ಶಿಕಾರಿ, ರಾಮು, ಗಾಳಿ ಕುಮಾರ್,ಗಲ್ಲಪ್ಪ, ರಾಹುಲ್ ನಾಗಪ್ಪ,ವೆಂಕಟೇಶ್, ಸಮುದಾಯದ ಮುಖಂಡರು, ಕಾರ್ಯಕರ್ತರು ಹಾಗೂ ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದು, ಚಿನ್ನ ಯಲ್ಲಪ್ಪ ಅವರ ಸಮಾಜಸೇವೆಯನ್ನು ಸ್ಮರಿಸಿದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST