Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸಿದ್ದರಾಮಯ್ಯನವರ ಪಂಚಮಸಾಲಿ ಸಮಾಜದ ಋಣ ತೀರಿಸಬೇಕು: ಬಸವಜಯಮೃತ್ಯುಂಜಯ ಸ್ವಾಮೀಜಿ

ಬೈಲಹೊಂಗಲ, ಡಿಸೆಂಬರ್ 08: ಪಂಚಮಸಾಲಿ ಸಮುದಾಯದ ಜನತೆ ಆರ್ಥಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಪ್ರಗತಿಕಾಣದೆ ಜೀವಸಂಕುಲದ ಹೊಟ್ಟೆ ತುಂಬಿಸಲು ಸದಾ ಕೃಷಿಕಾಯಕದಲ್ಲಿ ತೊಡಗಿಕೊಂಡು ಈ ಸಮಾಜಕ್ಕೆ 2A ಮೀಸಲಾತಿ ನೀಡಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪಂಚಮಸಾಲಿ ಸಮಾಜದ ಋಣತಿರಸಬೇಕು. ಅದನ್ನು ಬಿಟ್ಟು ಹೊರಾಟ ಹತ್ತಿಕಲು ಸರ್ಕಾರ ಮುಂದಾದರೆ ಮುಂದಿನ ಪ್ರತಿಭಟಣೆ ಎದುರಿಸಬೆಕಾದಿತು ಎಂದು ಕೂಡಲ ಸಂಗಮದ ಪಂಚಮಸಾಲಿ ಪೀಠದ ಪ್ರಥಮ ಜಗದ್ಗುರು ಬಸವಜಯಮೃತ್ಯುಂಜಯ ಸ್ವಾಮೀಜಿ ಸರ್ಕಾರದ ವಿರುದ್ದ ತೀವ್ರ ವಾಗ್ದಾಳಿ ನಡೆಸಿದರು.


ಸಮೀಪದ ಹೊಸೂರ ಗ್ರಾಮದಲ್ಲಿ ನಡೆದ ಪಂಚಮಸಾಲಿ ಹೊರಟದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಪಂಚಮಸಾಲಿಗಳಿಗೆ 2ಎ ಮೀಸಲಾತಿ ನೀಡಿದಲ್ಲಿ ಸಮಾಜದ ಜನತೆಗೆ ಹೆಚ್ಚಿನ ಶಿಕ್ಷಣ ಹಾಗೂ ಉದ್ಯೋಗ ಅವಕಾಶಗಳು ದೊರೆಯುತ್ತವೆ. ಪಂಚಮಸಾಲಿ ಸಮುದಾಯವು ಶ್ರೀಮಂತ ಮತ್ತು ಬಡ ಭಾಗಗಳಿಗೆ ವಿಭಜಿತವಾಗಿದ್ದು, ಹೆಚ್ಚಿನ ಬಡ ಭಾಗದ ಜನರಿಗೆ ಸರಿಯಾಗಿ ಸಂಪತ್ತು ಮತ್ತು ಸಂಪನ್ಮೂಲಗಳು ಲಭ್ಯವಿಲ್ಲ. ಮೀಸಲಾತಿ ಪಡೆಯಲು ನ್ಯಾಯುತವಾದ ಮುಖ್ಯ ಕಾರಣವಾಗಿದೆ. ಈ ಹೋರಾಟವನ್ನು ಹಲವಾರು ಧಾರ್ಮಿಕ ನಾಯಕರು, ರಾಜಕೀಯ ಮುಖಂಡರು, ಹಾಗೂ ಸಮಾಜದ ಪ್ರಮುಖರು ಮುನ್ನಡೆಸುತ್ತಿದ್ದಾರೆ. ಆದರೆ ಸರ್ಕಾರ ಹತ್ತಿಕ್ಕುವ ಕಾರ್ಯ ನಡೆದಿರುವದು ಸರಿಯಲ್ಲ. ಆದ್ದರಿಂದ‌ ಹೊಸ ಮುನ್ನುಡಿಗೆ ಹೆಸರಾದ ಹೊಸೂರ ಗ್ರಾಮದಿಂದ ಹೋರಾಟದ ಕಿಚ್ಚು ಹೆಚ್ಚಲಿದೆ ಎಂದರು.

ಸಮಾಜದ ಮುಖಂಡರಾದ ಸೋಮಲಿಂಗ ಮೆಳ್ಳಿಕೇರಿ, ಮಲ್ಲಿಕಾರ್ಜುನ ಹುಂಬಿ, ಮಹಾಂತೇಶ ಮತ್ತಿಕೊಪ್ಪ, ಜಗದೀಶ್ ಬೂದಿಹಾಳ, ವಿಜಯ ಬೊಳಣ್ಣವರ ಮಾತನಾಡಿ, ಸಮಾಜದ ಮಿಸಲಾತಿಗಾಗಿ ಧರಣಿಗಳು, ಸತ್ಯಾಗ್ರಹಗಳು. ಪಾದಯಾತ್ರೆ, ಸಾರ್ವಜನಿಕ ಸಭೆಗಳು ಮತ್ತು ಚರ್ಚೆಗಳು ನಡೆದಿದ್ದು ರಾಜಕೀಯವಾಗಿ ಈ ಹೊರಾಟವನ್ನು ದುರಪಯೋಗ ಪಡೆದುಕೊಳ್ಳುತ್ತಿರುವದು ಹೋರಾಟಕ್ಕೆ ಹಿನ್ನಡೆಯಾಗಿದ್ದು ಹೋರಾಟದ ನೆತೃತ್ವ ವಕೀಲರು ವಹಿಸಿದ್ದು ತಾರ್ಕಿಕ ಅಂತ್ಯಕಾಣಲಿದೆ ಎಂದರು.

ಎಫ್.ಎಸ್.ಸಿದ್ದನಗೌಡರ ಪ್ರಸ್ತಾವಿಕವಾಗಿ ಮಾತನಾಡಿ,
ಸರ್ಕಾರ ಈ ಹೋರಾಟಕ್ಕೆ ಗಂಭೀರವಾಗಿ ಗಮನ ಹರಿಸುತ್ತಿಲ್ಲ, 2A ಮೀಸಲಾತಿ ನೀಡುವ ಕುರಿತಾಗಿ ಕುಲಶಾಸ್ತ್ರ ಅಧ್ಯಯನ ಸಮಿತಿಗಳು ಪುರ್ಣ ಪ್ರಮಾಣದ ವರದಿಯನ್ನು ಸರ್ಕಾರ ಪಡೆದುಕೊಳ್ಳದೆ ಮೀನ ಮೇಷ ಡನಿಸುತ್ತಿದೆ. ಇದರಿಂದ ಮಿಸಲಾತಿ ಹೋರಾಟ ಇನ್ನೂ ಸ್ಪಷ್ಟ ಪರಿಹಾರ ಪಡೆದುಕೊಂಡಿಲ್ಲ ಆದ್ದರಿಂದ ವಿಧಾನಸೌಧ ಮುತ್ತಿಗೆ ಅನಿವಾರ್ಯ ಎಂದರು.

ವೇದಿಕೆಯ ಮೇಲೆ ಸವದತ್ತಿ ಎಪಿಎಂಸಿ ಮಾಜಿ ಅಧ್ಯಕ್ಷ ಎಸ್.ಬಿ.ಸಿದ್ದನಗೌಡರ, ತಾಲ್ಲೂಕಾ ಪಂಚಮಸಾಲಿ ಅಧ್ಯಕ್ಷ ಶ್ರೀಶೈಲ ಬೋಳಣ್ಣವರ, ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ವೀರಣಗೌಡ ಸಂಗಣ್ಣವರ, ತಾಲೂಕಾ ಪ್ರಧಾನ ಕಾರ್ಯದರ್ಶಿ ಮಹೇಶ ಹರಕುಣಿ, ಚನ್ನಮ್ಮ ಸ್ಮರಣೋತ್ಸವ ಸಮಿತಿ ಅಧ್ಯಕ್ಷ ಮುರಗೇಶ ಗುಂಡ್ಲೂರ, ನೀರು ಬಳಕೆದಾರರ ಸಂಘದ ನಿರ್ದೇಶಕ ಚನ್ನಪ್ಪ ಬೂದಿಹಾಳ, ಶ್ರೀಕಾಂತ್ ಮಳಕನ್ನವರ ಇದ್ದರು.

ಕಾರ್ಯಕ್ರಮದಲ್ಲಿ ಆಯ್.ಎಸ್.ಬೆಂಡಿಗೇರಿ, ಮಲ್ಲಿಕಾರ್ಜುನ ಬೋಳೆತ್ತಿನ, ರವಿ ಮಾಕಿ, ನಾಗರಾಜ ಬುಡಶೆಟ್ಟಿ, ಮಲ್ಲಿಕಾರ್ಜುನ ಕರಡಿಗುದ್ದಿ, ಸೋಮಲಿಂಗಪ್ಪ ಕೋಟಗಿ, ಶಿವಪುತ್ರಪ್ಪ ಯರಡಾಲ, ಅಶೋಕ ಬಡಿಗೇರ, ಶಿವಕುಮಾರ ಸೋಗಲ, ಬಸಪ್ಪ ಶಿದ್ನಾಳ, ಮಲ್ಲಿಕಾರ್ಜುನ ವಕ್ಕುಂದ, ಅಶೋಕ ಇಂಗಳಗಿ, ಸಂತೋಷ ಸಿದ್ದನಗೌಡರ, ಗೌಡಪ್ಪ ಹೊಸಮನಿ, ವಿನಾಯಕ ಪೆಂಟೆದ, ಬಾಳೆಶ ಹುರಕಡ್ಲಿ, ಮಹಾಂತೇಶ ಅಂಗಡಿ, ಶಿವಾನಂದ ಶಿದ್ನಾಳ, ವೀರಬಸು ಮುನವಳ್ಳಿ, ಸೇರಿದಂತೆ ನೂರಾರು ಜನ ಇದ್ದರು.
ವೀರೆಶ ಹಲಕಿ ಸ್ವಾಗತಿಸಿ ನಿರೂಪಣೆ ಮಾಡಿದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ