Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬ್ಯಾಂಕುಗಳಿಂದ ರೈತರ ಪ್ರಗತಿಗೆ ಬೆಂಬಲ: ಸಿದ್ದನಗೌಡರ 





ಬೈಲಹೊಂಗಲ: ಬ್ಯಾಂಕ್‌ಗಳು ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಮತ್ತು ರೈತರ ಪ್ರಗತಿಗೆ ಬೆಂಬಲ ನೀಡುವ ಪ್ರಮುಖ ಆರ್ಥಿಕ ಮೂಲವಾಗಿದ್ದು ಅದರ ಸದುಪಯೋಗ ಪಡೆಸಿಕೊಂಡು ತಮ್ಮ ಆದಾಯ ದ್ವಿಗುಣಗೊಳಿಸಿ ಆರ್ಥಿಕವಾಗಿ ಸದೃಢರಾಗಬೇಕೆಂದು ನ್ಯಾಯವಾದಿ ಎಫ್.ಎಸ್.ಸಿದ್ದನಗೌಡರ ಹೇಳಿದರು.


   ಪಟ್ಟಣದ ತಾಲೂಕಾ ಪಂಚಾಯತಿ ಸಭಾಭವನದಲ್ಲಿ ಶುಕ್ರವಾರ ಜರುಗಿದ ಕೆನರಾ ಬ್ಯಾಂಕ್ ಗ್ರಾಹಕರಿಗೆ ಕೃಷಿ ಮತ್ತು ಮಹಿಳಾ ಸ್ವಸಾಹಯ ಸಂಘಗಳಿಗೆ ಸಾಲ ವಿತರಣಾ ಮೇಳ ಹಾಗೂ ಆರ್ಥಿಕ ಜಾಗೃತಿ ಸಭೆಯಲ್ಲಿ ಮಾತನಾಡಿ, ರೈತರು ಕೃಷಿ ಚಟುವಟಿಕೆಗಳಿಗೆ ಬೇಕಾದ ಬೆಲೆಸಾಲ, ಜಮೀನು ಅಭಿವೃದ್ಧಿಗಾಗಿ, ಪಂಪಸೆಟ್, ಪೈಪಲೈನ್, ಕೃಷಿಯಂತ್ರೊಪಕರಣಕ್ಕೆ ಸಂಬಂಧಿಸಿದಂತೆ ಅನೇಕ ವಿಧದ ಸಾಲ ಸೌಲಭ್ಯ, ಮಹಿಳಾ ಸ್ವಸಹಾಯ ಗುಂಪುಗಳಿಗೆ ಸ್ವ ಉದ್ಯೋಗ ಕೈಗೊಳ್ಳಲು ನೀಡುವ ಬ್ಯಾಂಕ್ ಸಾಲದ ಸಹಾಯವನ್ನು ಕೆನರಾ ಬ್ಯಾಂಕ್ ಮಾಡುತ್ತಿದೆ.


ರಾಜ್ಯದಲ್ಲಿ ಸ್ಥಾಪನೆಯಾಗಿ ಇಂದು 23 ಲಕ್ಷ ಕೋಟಿ ರೂಪಾಯಿ ವ್ಯವಾಹರ ಅನೇಕ ದೇಶಗಳಲ್ಲಿ ನಡೆಸುತ್ತಾ ದೇಶದಲ್ಲಿ ಕರ್ನಾಟಕದ ಬ್ಯಾಂಕ್ ಒಂದು 3ನೇ ಸ್ಥಾನದಲ್ಲಿರುವದು ಕನ್ನಡಿಗರಿಗೆ ಹೆಮ್ಮೆ. ಬ್ಯಾಂಕ್ ನಿಂದ ನೀಡುವ ಸಾಲಗಳನ್ನು ಪಡೆದುಕೊಂಡು ಆರ್ಥಿಕವಾಗಿ ಸಬಲತೆ ಪಡೆದು ಸಕಾಲಕ್ಕೆ ಮರುಪಾವತಿ ಮಾಡಿ ನಮ್ಮ ಉತ್ತಮ ಬೆಳವಣಿಗೆಯೊಂದಿಗೆ ಬ್ಯಾಂಕ್ ಜೋತೆ ಒಳ್ಳೆಯ ಆರೋಗ್ಯಕರ ಸಂಬಂಧವನ್ನಿಟ್ಟುಕೊಂಡು ದೇಶದ ಪ್ರಗತಿಗೆ ಕೈ ಜೋಡಿಸೊಣ ಎಂದರು.


    ಕೆನರಾ ಲಿಡ್ ಬ್ಯಾಂಕ್ ಅಧಿಕಾರಿ ಪ್ರಶಾಂತ ಗೋಡಕೆ ಮಾತನಾಡಿ, ಕೆನರಾ ಬ್ಯಾಂಕ್ ನಿಂದ ರೈತರ ಮಕ್ಕಳಿಗೆ ಶಿಕ್ಷಣ ಸಾಲ, ಆಧುನಿಕ ಕೃಷಿಯಲ್ಲಿ ಮೌಲ್ಯವರ್ಧಿತ ಕೃಷಿ ಉತ್ಪನ್ನಗಳ ತಯಾರಿಕೆಗೆ, ಬೃಹತ್ ಒಕ್ಕೂಲ ಯಂತ್ರಗಳ ಖರೀದಿ, ವಾಹನ ಸಾಲ, ಮಹಿಳೆಯರಿಗೆ ಉಳಿತಾಯ ಯೋಜನೆಗಳು, ಸ್ವ ಉದ್ಯೋಗ ನಿಧಿ, ಜೀವ ವಿಮೆಗಳು ಇದ್ದು ಅದರ ಸದುಪಯೋಗ ಪಡೆದುಕೊಳ್ಳಬೇಕೆಂದರು.


   ಬೈಲಹೊಂಗಲ ಕೆನರಾ ಬ್ಯಾಂಕ್ ಮುಖ್ಯ ಪ್ರಭಂಧಕ ಅನುರಾಗ‌ ಮೇಹೆರಾ,  ಸಂಪಗಾಂವ ಶಾಖಾಧಿಕಾರಿ ರಾಜಶ್ರೀ, ಮುಳಕೂರ ಪ್ರಭಂಧಕ‌ ದೀಲಿಪಕುಮಾರ್ ಹಾಗೂ ಬ್ಯಾಂಕ್ ಸಿಬ್ಬಂದಿ ಅಲಿನಾ ಡಿಸೊಜಾ, ಸಂದೀಪ ಯರಗಟ್ಟಿ, ಮಾತನಾಡಿ, ಕೆನರಾ ಬ್ಯಾಂಕ್ ನಲ್ಲಿ 0 ಬ್ಯಾಲೆನ್ಸ್ ಉಳಿತಾಯ ಖಾತೆ ತೆರೆದು ವರ್ಷಕ್ಕೆ 40ರೂಪಾಯಿ ತುಂಬಿದರೆ ಅಪಘಾತವಾದಲ್ಲಿ 2ಲಕ್ಷ ಪರಿಹಾರ, 5ಸಾವಿರ ಬ್ಯಾಲೆನ್ಸ್ ಇರುವ ಉಳಿತಾಯ ಖಾತೆಯನ್ನು ಹೆಣ್ಣುಮಕ್ಕಳ ಹೆಸರಿನಿಂದ ತೆರೆದರೆ ಅವರ ಆರೋಗ್ಯದಲ್ಲಿ ಬರುವ ಮಾರಣಾಂತಿಕ ರೋಗಗಳ ವೆಚ್ಚವನ್ನು ಬ್ಯಾಂಕ್ ಬರಿಸುವದರೊಂದಿಗೆ ಅವರ ಜೀವ ವಿಮೆಯನ್ನು ಒದಗಿಸುತ್ತದೆ. ಮೊಬೈಲ್ ಮೂಲಕ ಹಣ ಲಪಟಾಯಿಸುವ ಮೋಸ ವಂಚನೆ ಹೆಚ್ಚಾಗಿದ್ದು ಗ್ರಾಹಕರು ಬ್ಯಾಂಕ್ ಶಾಖೆಗೆ ಬಂದು ಅಧಿಕೃತ ಸಿಬ್ಬಂದಿಯಿಂದ ಮಾಹಿತಿ ಪಡೆದುಕೊಂಡು ತಮ್ಮ ಆನ್ ಲೈನ್ ವ್ಯವಹಾರ ಮಾಡಬೇಕು ಎಂದರು.


ಗೀತಾ ಖಾನಪೆಟ್, ಸಂದ್ಯಾ ಬುಲಾಖೆ ಮಾತನಾಡಿ, ಮೊಬೈಲ್ ಮೂಲಕ ಹಣ ಕಳೆದುಕೊಂಡಾಗ ತಕ್ಷಣ ಸಂಬಂಧಿಸಿದ ಅಧಿಕಾರಿಗಳನ್ನು ಸಂಪರ್ಕ ಮಾಡಿಕೊಂಡು ತಮ್ಮ ಶ್ರಮದ ಹಣ ಲಪಟಾಯಿಸುವವರಿಂದ ಮರಳಿ ಪಡೆಯಬಹುದು. ಅದಕ್ಕಾಗಿ ಜಾಣರಾಗಿ ಜಾಗುರಕಾರಾಗಿರಿ. ಅಟಲ್ ಪೆನ್ಷ್ಯನ್ ಯೋಜನೆ ವಿವಿಧ ಯೋಜನೆಗಳಲ್ಲಿ ಹಣ ಹೂಡಿಕೆ ಬಗ್ಗೆ ರೈತರು ಆಸಕ್ತಿ ಹೊಂದಬೇಕು ಎಂದರು.


ಕಾರ್ಯಕ್ರಮದಲ್ಲಿ ಬೈಲಹೊಂಗಲ, ಸಂಪಾಗಾಂವ ಮತ್ತು ನಯಾನಗರ ಕೆನರಾ ಬ್ಯಾಂಕ್ ದ ನೂರಾರು ಗ್ರಾಹಕ ರೈತರು, ಸ್ವಸಹಾಯ ಗುಂಪು ಮಹಿಳೆಯರು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಉತ್ತಮ ರೈತ ಗ್ರಾಹಕರಿಗೆ ಮತ್ತು ಸ್ವ ಸಹಾಯ ಗುಂಪುಗಳಿಗೆ ಸಾಲ ವಿತರಿಸಿದರು.






Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ