Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ವಿಜೃಂಭಣೆಯಿಂದ ಜರುಗಿದ ಶ್ರೀ ವೀರಭದ್ರದೇವರ ಜಾತ್ರೋತ್ಸವ

ಇಂಡಿ: ತಾಲೂಕಿನ ಲಚ್ಯಾಣ ಗ್ರಾಮದಲ್ಲಿನ ಆರಾಧ್ಯದೇವ ಶ್ರೀ ವೀರಭದ್ರದೇವರ ಜಾತ್ರೋತ್ಸವವು ಗ್ರಾಮದ ಸಂಪ್ರದಾಯದಂತೆ ಮಂಗಳವಾರದಂದು (ಇಂದು) ವಿಜೃಂಭಣೆಯಿಂದ ನೇರವೇರಿತು. 
ಈ ನಿಮಿತ್ಯ ನಸುಕಿನ ಜಾವ ೫ ಗಂಟೆಗೆ ಶ್ರೀ ವೀರಭದ್ರ ದೇವರ ಶೀಲಾಮೂರ್ತಿಗೆ ಭಕ್ತರಿಂದ ರುದ್ರಾಭಿ?ಕ ನೆರವೇರಿತು. ಬಳಿಕ ದೇವಸ್ಥಾನದಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಶ್ರೀ ವೀರಭದ್ರ ದೇವರ ಉತ್ಸವ ಮೂರ್ತಿಯ ಭವ್ಯ ಮೆರವಣಿಗೆ ಸಂಬಾಳ ವಾದ್ಯ ಮೇಳದೊಂದಿಗೆ  ಜರುಗಿತು. ಬಳಿಕ ಈ ಮೆರವಣಿಗೆಯೂ ಊರ ಹೊರಗಿನ ಪಾದಗಟ್ಟಿ ತಲುಪಿದ ಬಳಿಕ ಪಾದಗಟ್ಟಿ ಪೂಜೆ ಮಹಾ ಮಂಗಳಾರತಿ ನೆರವೇರಿತು. ನಂತರ ಈ ಮೆರವಣಿಗೆಯು ಭಕ್ತರ ಜೈಕಾರದೊಂದಿಗೆ ಮರಳಿ ಮೂಲ ದೇವಸ್ಥಾನ ತಲುಪಿದ ಕೂಡಲೇ ಅಗ್ನಿ ಪ್ರವೇಶ ಕಾರ್ಯಕ್ರಮ ವಿಜೃಂಭಣೆಯಿಂದ ನೆರವೇರಿತು. 
ಬಳಿಕ ಉತ್ಸವದಲ್ಲಿ ಪಾಲ್ಗೊಂಡ ಭಕ್ತರಿಗೆ ಸೀರಾ ಅನ್ನ ಪ್ರಸಾದ ವಿತರಣೆ ನಡೆಯಿತು. 
ಇದಕ್ಕೂ ಮುನ್ನ ಸೋಮವಾರದಂದು ದೇವಸ್ಥಾನದ ಮುಂಭಾಗದಲ್ಲಿ ಅಗ್ನಿ ಪ್ರಜ್ವಲನ ಕಾರ್ಯಕ್ರಮ, ಮದ್ದು ಸುಡುವ ಕಾರ್ಯಕ್ರಮ ಸಂಭ್ರಮದಿಂದ ನಡೆಯಿತು. ಇದಲ್ಲದೆ ಶುಕ್ರವಾರದಂದು ಶ್ರೀ ವೀರಭದ್ರ ದೇವರಿಗೆ ಕಾಸಿ ಕಟ್ಟುವ ಕಾರ್ಯಕ್ರಮ ಪೂಜಾ ಕೈಕರ್ಯದೊಂದಿಗೆ ನೇರವೇರಿತು.
ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ವೀರಭದ್ರ ವಾಗ್ಮೋರೆ ಹಾಗೂ ಭೀಮರಾಯ ನಾಗರಳ್ಳಿ ಅನ್ನ ಪ್ರಸಾದ ಸೇವೆ ಸಲ್ಲಿಸಿದರು. ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಮಾದೇವ ವಾಲಿಕಾರ ಹಾಗೂ ಈರಣ್ಣ ಮುಜಗೊಂಡ ವಸ್ತ್ರ ಸೇವೆ ಸಲ್ಲಿಸಿದರು.
ಈ ಕಾರ್ಯಕ್ರಮದಲ್ಲಿ ದೇವಸ್ಥಾನದ ಅರ್ಚಕರಾದ ಮುರಗಯ್ಯ ಹಿರೇಮಠ, ಸಿದ್ದು ಹಿರೇಮಠ, ಮಾಂತಯ್ಯ ಹಿರೇಮಠ, ಈರಯ್ಯ ಹಿರೇಮಠ, ಸೋಮನಾಥ ಹಿರೇಮಠ, ಭಕ್ತರಾದ ಗೌರಿಶಂಕರ ಬಾಬುಳಗಿ, ರಾಜಶೇಖರ ಕಾರಾಜಣಗಿ, ನಾಗನಾಥ ಬಿರಾದಾರ, ನಾಗನಾಥ ಮುಜಗೊಂಡ, ಬಸವರಾಜ ಲಾಳಸೇರಿ, ಭೀಮರಾಯ ಗೋಡಿಹಾಳ, ಬಿ.ಎಂ. ಲಾಳಸೇರಿ ವಿಠ್ಠಲ ಚೋರಗಿ, ದತ್ತು ಮುಜಗೊಂಡ ಸೇರಿದಂತೆ ಹಲವು ಭಕ್ತರು ಭಾಗವಹಿಸಿದ್ದರು. 

 

Advertisement
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದು ನದಾಫ್-ಪಿಂಜಾರ ಸಂಘ ತಾಲೂಕ ಘಟಕದ ಕಚೇರಿ ಉದ್ಘಾಟನೆ ಟ್ರಕ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ : ಅಕ್ಕ-ತಮ್ಮ ದಾರುಣ ಸಾವುತಾಲೂಕಾ ಅಧಿಕಾರಿಗಳ ಸಾಮಾನ್ಯ ಸಭೆ; ರೈತರಿಗೆ ಬೀಜ, ಗೊಬ್ಬರ ಕೊರತೆಯಾಗದಂತೆ ನೋಡಿಕೊಳ್ಳಿ: ಬಸವರಾಜ್ ಅಡವಿಮಠ್ ಸೂಚನೆಕೊಪ್ಪಳ ಕಾರ್ಯನಿರತ ಪತ್ರಕರ್ತರ ಸಂಘದ ಸಭೆನೂತನ ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ ಅವರಿಗೆ ಅಭಿನಂದಿಸಿದ ಲಕ್ಷ್ಮೀ  ಹೆಬ್ಬಾಳಕರ.ಸಿದ್ದರಾಮಯ್ಯ ಭೇಟಿ ಮಾಡಿ ಧನ್ಯವಾದ ಸಲ್ಲಿಸಿದ ಲಕ್ಷ್ಮೀ ಹೆಬ್ಬಾಳಕರಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ ಅವರಿಗೆ ಸತ್ಕರಿಸಿದ ಯುವ ಮುಖಂಡ  ರಾಹುಲ  ಜಾರಕಿಹೊಳಿ.ಸಚಿವ ಸತೀಶ ಜಾರಕಿಹೊಳಿ, ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ ಬೇಟಿ ಪರಸ್ಪರ ಶುಭ ಕೋರಿಕೆಗ್ಲೋಬಲ್ ಕ್ಯಾಪೆಬಿಲಿಟಿ ಸೆಂಟರ್‌ಗಳ ಬೆಳವಣಿಗೆಗೆ ಉತ್ತೇಜನ*ಶರಣು ಕಾರ್ಯಾಲಯ ಆರಂಭಿಸುವ ಮೂಲಕ ಬಡವರ ಕಣ್ಣಿರು ಒರೆಸುವ ಕಾರ್ಯಕ್ಕೆ ಮುಂದಾಗಿರುವುದು ಶ್ಲಾಘನೀಯ : ಬಳಗಾನೂರು ಶ್ರೀಗಳು,,*