ಮುಗಳಖೋಡ [೨೨] ದೇವತೆಗಳ ಶಕ್ತಿ ಅರಿತು ಶೃದ್ಧಾ ಭಕ್ತಿಯಿಂದ ನಡೆದಾಗ ದೇವತೆಗಳ ಕೃಪೆ ದೊರಕುವುದು ಎಂದು ಶೋಭಾ ಹೇಳಿದರು. ಅವರು ಪಟ್ಟಣದ ಕಾಯಿಪಲ್ಲೆ ಪೇಟೆಯ ಶ್ರೀ ಚನ್ನಬಸವೇಶ್ವರ ಮಂದಿರದ ಆವರಣದಲ್ಲಿ ರವಿವಾರ 22 ರಂದು ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ಪೂಜಾ ಕಾರ್ಯಕ್ರಮದಲ್ಲಿ ವೀರಭದ್ರೇಶ್ವರರು ಅವತಾರ ಪುರುಷರು ಪುರಾತನ ಕಾಲದಲ್ಲಿ ದೇವ ದೇವತೆಗಳಿಗೆ ರಾಕ್ಷಸರು ತೊಂದರೆ ಕೊಡುತ್ತಿದ್ದಾಗ ಪರಶಿವನ ಅನುಗೃಹದಿಂದ ಅವತಾರ ತಾಳಿ ದುಷ್ಟರನ್ನು ಸಂಹರಿಸಿ ಲೋಕಕ್ಕೆ ಶಾಂತಿ ನಿಡಿದಂತೆ ಇಂದಿಗೂ ನೊಂದ ಭಕ್ತರ ಭಾಗ್ಯದಾತನಾಗಿ ಕಂಗೋಳಿಸುತ್ತಿರುವನು ಆ ದೇವತಾ ಶಕ್ತಿಗೆ ಭಕ್ತಿಯಿಂದ ನಡೆದು ಕೃಪೆಗೆ ಪಾತ್ರರಾಗಿರಿ ಎಂದು ಆರ್ಶೀವಚನ ನೀಡಿದರು.
ಜಾತ್ರಾ ಮಹೋತ್ಸವ ನಿಮಿತ್ಯ ಬೆಳಿಗ್ಗೆ ಅಭಿಷೇಕ, ಕರಡಿ ಮೆಳದವರಿಂದ ಲಯ ತಾಳಕ್ಕೆ ತಕ್ಕಂತೆ ಕುಣಿಯುತ್ತಾ ಮುಗಳಖೋಡ,ಪಾಲಭಾವಿ ,ಸುಲ್ತಾನಪೂರ,ಹಂದಿಗುಂದ,ವಿಜಯಪೂರದ ವೀರಭದ್ರೇಶ್ವರ ಪುರವಂತರಿಂದ ಒಡಪುಗಳ ಘೋಷಣೆಯೊಂದಿಗೆ ಶರೀರಕ್ಕೆ ಶಸ್ತ್ರ ಪ್ರಯೋಗ ನಡೆಯಿತು ನಂತರ 101 ಸುಮಂಗಲೇಯರಿಗೆ ಉಡಿ ತುಂಬಿ ಆಗಮಿಸಿದ ಪೂಜ್ಯರ ಪಾದಪೂಜೆ ಹಾಗೂ ವೀರಭದ್ರೇಶ್ವರರ ಪಾದಪೂಜೆ , ಚೌಡಕಿ ಮೆಳದವರಿಂದ ಚೌಡಕಿ ಪದಗಳ ಗಾಯನ ನಡೆಯಿತು. ತನು ಮನ ಧನ ದೊಂದಿಗೆ ದಾಸೋಹ ಸೇವೆ ಸಲ್ಲಿಸಿದ ಭಕ್ತರನ್ನು ಗೌರವಸಿ ಸತ್ಕರಿಸಿ ಜಾತ್ರಾ ಮಹೋತ್ಸವ ಸಂಪನ್ ಗೊಂಡಿತು. ವ್ಯವಸ್ಥಾಪಕ ಪ್ರಕಾಶ ಕುಂಬಾರ, ,ಮಲ್ಲಪ್ಪ ಯಡವಣ್ಣವರ, ಮಹಾದೇವ ಕುಲಿಗೋಡ, ಭೀಮಪ್ಪ ಯಡವಣ್ಣವರ, ರುದ್ರಪ್ಪಾ ಚೌಗಲಾ ,ಬಸು ಕುಲಿಗೋಡ ,ಮಹೇಶ ಕುಲಿಗೋಡ, ಶಿವಪುತ್ರ ಕೆಸರಗೊಪ್ಪ ,ಚನ್ನಮಲ್ಲಪ್ಪ ಕಂಬಾರ, ವಿಶಾಲ ಹನಸಗಿ, ಸದಾಶಿವ ಬಡಿಗೇರ, ಮಲ್ಲಿಕಾರ್ಜುನ ಹಿರೇಮಠ ,ರೇವಣಸಿದ್ದೇಶ್ವರ ಮಠಪತಿ, ಸಂಗಪ್ಪ ಹೊಸಪೇಟಿ,ಗಿರಮಲ್ಲ ಹೊಸಪೇಟಿ ,ಸಂಗಪ್ಪ ಕಾಪಶಿ, ಶಂಕರ ಅಂಗಡಿ ,ಶಿವಲಿಂಗ ಪರವನಿ ,ಪರಪ್ಪ ಕಡಪಟ್ಟಿ ,ಮೌನೇಶ ಪತ್ತಾರ ಜಯಶ್ರೀ ದೇಸಾಯಿ ಸವಿತಾ ಕೆಂಚನ್ನವರ ಸುಜಾತಾ ಪೂಜೇರಿ ವಿಜಯಾ ಕುಂಬಾರ ಪಲ್ಲವಿ ಕುಂಬಾರ ಕಂಚಾನಾ ಬಡಿಗೇರ ರಾಮವ್ವಾ ಪೂಜೇರಿ ಹಾಗೂ ಭಕ್ತರು ಇದ್ದರು.