ತಾಳಿಕೋಟೆ, ತಾಲೂಕಿನ ಬಳಗಾನೂರ ಗ್ರಾಮದ ರಂಗಭೂಮಿ ಕಲಾವಿದ ಮುತ್ತು ಮನಹಳ್ಳಿ ಅವರು ೨೦೨೬ನೇ ಸಾಲಿನ ರಾಜ್ಯಮಟ್ಟದ "ಕನ್ನಡ ಕಲಾರತ್ನ" ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಧಾರವಾಡದ ಭುವನೇಶ್ವರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯ ವತಿಯಿಂದ ಕನ್ನಡ ರಾಜ್ಯೋತ್ಸವದ ಅಂಗವಾಗಿ ಈ ಪ್ರಶಸ್ತಿ ನೀಡಲಾಗುತ್ತಿದೆ. ಇದೇ ತಿಂಗಳ ೨೭-೧೧-೨೦೨೬ ರಂದು ಧಾರವಾಡದ ಸಾಧನಕೇರಿಯಲ್ಲಿರುವ ಬೇಂದ್ರೆ ಭವನದಲ್ಲಿ ನಡೆಯಲಿರುವ ಅದ್ದೂರಿ ಕನ್ನಡಹಬ್ಬ ಕಾರ್ಯಕ್ರಮದಲ್ಲಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುವುದು ಎಂದು ವೇದಿಕೆಯ ಅಧ್ಯಕ್ಷರಾದ ಪ್ರತಿಭಾ ಪಾಟೀಲ ಅವರು ತಿಳಿಸಿದ್ದಾರೆ.