Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಅಗಲಿದ ಕಲಾವಿದರಿಗೆ ಗದಗ ಜಿಲ್ಲೆಯ ಕಲಾವಿದರ ಸಂಘ ಶ್ರದ್ಧಾಂಜಲಿ ಅರ್ಪಣೆ

ಗದಗ, 15 : ಗದಗ ಜಿಲ್ಲಾ ಕಲಾವಿದರ ಹಾಗೂ ಸಾಂಸ್ಕೃತಿಕ ಸಂಘಟನೆಗಳ ಹಿತರಕ್ಷಣಾ ವೇದಿಕೆಯ ವತಿಯಿಂದ ಮಂಗಳವಾರ ನಗರದ ನಟರಂಗ ಸಂಸ್ಥೆಯ ಸಭಾಭವನದಲ್ಲಿ ಸೋಮವಾರ ನಿಧನರಾದ ಉತ್ತರ ಕರ್ನಾಟಕದ ಹಿರಿಯ ರಂಗಕಲಾವಿದರಾದ ಡಾ. ರಾಜು ತಾಳಿಕೋಟಿ ಅವರಿಗೂ ಹಾಗೂ ರಂಗಕಲಾವಿದರಾದ ಡಾ. ಯಶವಂತ ಸರದೇಶಪಾಂಡೆ, ಪ್ರೊ. ಆರ್. ಎನ್. ಕುಲಕರ್ಣಿ , ಪ್ರೊ. ಎಂ. ಎಸ್. ಕುಲಕರ್ಣಿ, ಕರಮುಡಿ ಗ್ರಾಮದ ಖಾಜಾಸಾಬ, ಜಾನಪದ ಕ್ಷೇತ್ರದ ರಾಜ್ಯೋತ್ಸವ ಪ್ರಶಸ್ತಿಯ ಪುರಸ್ಕೃತ ದ್ಯಾಮಲಪ್ಪ ಲಮಾಣಿ ಹಾಗೂ ಡಿ. ಹನಮಕ್ಕ ಅವರಿಗೆ ಎರಡು ನಿಮಿಷ ಮೌನ ಆಚರಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.


ಸಭೆಯ ಅಧ್ಯಕ್ಷತೆಯನ್ನು ಕರ್ನಾಟಕ ಜಾನಪದ ಅಕಾಡೆಮಿಯ ಸದಸ್ಯರಾದ ಶಂಕ್ರಣ್ಣ ಸಂಕಣ್ಣವರ ವಹಿಸಿದ್ದರು. ಹಿರಿಯ ಸಾಂಸ್ಕೃತಿಕ ಚಿಂತಕರಾದ ಡಾ. ಜಿ. ಬಿ. ಪಾಟೀಲ, ಪ್ರೊ. ಅನ್ನದಾನಿ ಹಿರೇಮಠ, ಬಿ. ಬಿ. ಬಣ್ಣದ, ವೀರೇಶ ಕಿತ್ತೂರ, ಎಅಂ. ಕಲ್ಲಿನಾಥಶಾಸ್ತ್ರೀ ಅಡ್ನೂರ, ಅಂದಾನೆಪ್ಪ ವಿಭೂತಿ, ಐ. ಕೆ. ಕಮ್ಮಾರ, ವಿಜಯಕುಮಾರ ಜಿತೂರಿ, ವಿರುಪಾಕ್ಷಪ್ಪ ಕ್ಷತ್ರಿಯ, ಬಸವರಾಜ ನಿ. ಹೂಗಾರ, ಸೋಮಶೇಖರ ಚಿಕ್ಕಮಠ, ಶಿವು ಭಜಂತ್ರಿ, ಬಸವರಾಜ ಈರಣ್ಣವರ, ಜಿ. ವಿ. ಬೊಮ್ಮಪ್ಪನವರ, ಬಸವರಾಜ ಹಡಗಲಿ, ಡಾ. ಗೋವಿಂದಪ್ಪ ವೇಶಧಾರಿ, ಅಶೋಕ ಕಾ. ಬಡಿಗೇರ,  ಸುಭಾಸ ಮಳಗಿ, ಎಂ. ಎಸ್. ಮಾದರ, ಎಂ. ಬಿ. ಹವಾಲ್ದಾರ, ದೇವು ಲಮಾಣಿ, ರಂಗಪ್ಪ ಕ. ಹುಯಿಲಗೋಳ, ಜ್ಯೋತಿಶ್ರೀ ಎಂ. ಎಲ್., ಪ್ರಕಾಶ ರಾ. ಕುರುಬರ, ಪಾರ್ವತಿ ಪ್ರ. ಕುರುಬರ, ಡಾ. ಪ್ರಭು ಅ. ಗಂಜಿಹಾಳ, ನಿಂಗಪ್ಪ ಗುಡ್ಡದ, ಚಿದಾನಂದ ಗು. ಅನವಾಳ ಸೇರಿದಂತೆ ಸಾಹಿತಿ, ಕಲಾವಿದರು ಪಾಲ್ಗೊಂಡಿದ್ದರು. ಹವ್ಯಾಸಿ ರಂಗಕರ್ಮಿ ಮೌನೇಶ ಸಿ. ಬಡಿಗೇರ (ನರೇಗಲ್ಲ) ಕಾರ್ಯಕ್ರಮ ನಿರೂಪಿಸಿ ವಂದಿಸಿದರು

Advertisement
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದು ನದಾಫ್-ಪಿಂಜಾರ ಸಂಘ ತಾಲೂಕ ಘಟಕದ ಕಚೇರಿ ಉದ್ಘಾಟನೆ ಟ್ರಕ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ : ಅಕ್ಕ-ತಮ್ಮ ದಾರುಣ ಸಾವುತಾಲೂಕಾ ಅಧಿಕಾರಿಗಳ ಸಾಮಾನ್ಯ ಸಭೆ; ರೈತರಿಗೆ ಬೀಜ, ಗೊಬ್ಬರ ಕೊರತೆಯಾಗದಂತೆ ನೋಡಿಕೊಳ್ಳಿ: ಬಸವರಾಜ್ ಅಡವಿಮಠ್ ಸೂಚನೆಕೊಪ್ಪಳ ಕಾರ್ಯನಿರತ ಪತ್ರಕರ್ತರ ಸಂಘದ ಸಭೆನೂತನ ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ ಅವರಿಗೆ ಅಭಿನಂದಿಸಿದ ಲಕ್ಷ್ಮೀ  ಹೆಬ್ಬಾಳಕರ.ಸಿದ್ದರಾಮಯ್ಯ ಭೇಟಿ ಮಾಡಿ ಧನ್ಯವಾದ ಸಲ್ಲಿಸಿದ ಲಕ್ಷ್ಮೀ ಹೆಬ್ಬಾಳಕರಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ ಅವರಿಗೆ ಸತ್ಕರಿಸಿದ ಯುವ ಮುಖಂಡ  ರಾಹುಲ  ಜಾರಕಿಹೊಳಿ.ಸಚಿವ ಸತೀಶ ಜಾರಕಿಹೊಳಿ, ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ ಬೇಟಿ ಪರಸ್ಪರ ಶುಭ ಕೋರಿಕೆಗ್ಲೋಬಲ್ ಕ್ಯಾಪೆಬಿಲಿಟಿ ಸೆಂಟರ್‌ಗಳ ಬೆಳವಣಿಗೆಗೆ ಉತ್ತೇಜನ*ಶರಣು ಕಾರ್ಯಾಲಯ ಆರಂಭಿಸುವ ಮೂಲಕ ಬಡವರ ಕಣ್ಣಿರು ಒರೆಸುವ ಕಾರ್ಯಕ್ಕೆ ಮುಂದಾಗಿರುವುದು ಶ್ಲಾಘನೀಯ : ಬಳಗಾನೂರು ಶ್ರೀಗಳು,,*