Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮಕ್ಕಳ ಶಿಬಿರ; ಹಳೆ ನಾಣ್ಯ, ನೋಟುಗಳ ಪ್ರದರ್ಶನ



ಧಾರವಾಡ : ರಾಜ್ಯ ಬಾಲ ಭವನ ಸೊಸೈಟಿ ಬೆಂಗಳೂರು,ಜಿಲ್ಲಾ ಪಂಚಾಯತ ಧಾರವಾಡ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಬಾಲ್ ಭವನ್ ಸಮಿತಿ ಧಾರವಾಡ ಇವರ ಸಹಯೋಗದಲ್ಲಿ ಜಿಲ್ಲಾ ಭವನದ ಆವರಣದಲ್ಲಿ ಜರುಗುತ್ತಿರುವ 2025 - 26ನೇ ಸಾಲಿನ  ಮಕ್ಕಳ ಬೇಸಿಗೆ ಶಿಬಿರದಲ್ಲಿ ಹಳೆಯ ನಾಣ್ಯ, ನೋಟುಗಳ ಸಂಗ್ರಹಾಕರಾದ ಕಲಘಟಗಿಯ ಸುನಿಲ್ ಕಮ್ಮಾರ್ ಅವರು ನಾಣ್ಯ ಪ್ರದರ್ಶನ ಏರ್ಪಡಿಸಿದರು.


 ಶಿಬಿರದ ಮಕ್ಕಳಿಗೆ ಹಳೆಯ ನಾಣ್ಯ, ನೋಟುಗಳ ಬಗ್ಗೆ ಮಾಹಿತಿಯನ್ನು ನೀಡಿದ ಅವರು ಮಾತನಾಡಿ,  ಇಂದಿನ ಮಕ್ಕಳಿಗೆ ನಾಣ್ಯಗಳ ಪರಿಚಯ, ಅಧ್ಯಯನದ  ಬಗ್ಗೆ ತಿಳಿದುಕೊಳ್ಳುವುದು ಬಹಳಷ್ಟು ಅವಶ್ಯವಾಗಿದೆ. ರಾಜ, ಮಹಾರಾಜರ ಕಾಲದಿಂದಲೂ ನಾಣ್ಯಗಳು ವಸ್ತು ವಿನಿಮಯ ಗೋಸ್ಕರ ಬಳಕೆಗೆ ಬಂದವವು ಎಂದರು.


 ಇತಿಹಾಸ ಕಾಲದಿಂದಲೂ  ಬಂಗಾರ, ಬೆಳ್ಳಿ, ತಾಮ್ರ, ಹಿತ್ತಾಳೆ ಮುಂತಾದ ಲೋಹದ ಮೌಲ್ಯಯುತವಾದ ನಾಣ್ಯಗಳು ವಿಶಿಷ್ಟ ಬಗೆಗಳಲ್ಲಿ ಮುದ್ರಣ ಗೊಂಡಿದ್ದವು. ಪ್ರಾಚೀನ ಕಾಲದ ನಾಣ್ಯಗಳಿಗೆ  ಅದರದೇ ಮಹತ್ವ ಪಡೆದ  ಇತಿಹಾಸವಿದೆ. ಇತ್ತೀಚಿನ ದಿನಗಳಲ್ಲಿ ನಾಣ್ಯಗಳು ಮರೆ ಆಗುತ್ತಿವೆ ಎಂದು ಅವರು ಹೇಳಿದರು.


 ನಾಣ್ಯ ಮತ್ತು ನೋಟುಗಳ ಪ್ರದರ್ಶನದಲ್ಲಿ ವಿಜಯನಗರ ಮತ್ತು ಮೈಸೂರು ರಾಜರ, ಟಿಪ್ಪು ಸುಲ್ತಾನ್, ನಿಜಾಮ, ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಆಳ್ವಿಕೆ ಸಂದರ್ಭಗಳಲ್ಲಿ ಭಾರತ ಹಾಗೂ ಬೇರೆ ಬೇರೆ ದೇಶಗಳ ಸೆಂಟ್ಸ್, ಪೌಂಡ್, ಡಾಲರ್, ಮುಂತಾದವು ಚಲಾವಣೆಯಲ್ಲಿರುವ ಬಗ್ಗೆ ಹಾಗೂ ಕರೆನ್ಸಿ ನೋಟುಗಳು ಗಮನ ಸೆಳೆದವು.

ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ದೇಶಕಿ ಡಾ.ಹೆಚ್.ಹೆಚ್. ಕುಕನೂರ, ಡಾ.ಕಮಲ ಬೈಲೂರು, ಕಾಂಚನ ಅಮಟೆ, ಸುಭಾಷ್ ಚಂದ್ರಗಿರಿ, ಉಮಾದೇವಿ ಹೂಗಾರ್, ಜಯಶ್ರೀ ಮಣ್ಣಿಕೇರಿ, ಶಶಿಧರ್ ಮುಂದಿನಮನಿ, ಸುನಿತಾ ನಾಡಿಗೇರ, ಕಮಲಾ ಮಸಣ್ಣಿ,  ಅಶೋಕ್ ಬೆಳ್ಳಿಗಟ್ಟಿ, ಮಂಜುನಾಥ್ ಬದ್ನಿಗಟ್ಟಿ, ಮಂಜುಳಾ ಬೆನಕನಹಳ್ಳಿ, ಯಶೋಧ ತಾಯಿ ಭಜಂತ್ರಿ, ರವಿ ಹಿರೇಮಠ, ಶಿಬಿರಾರ್ಥಿ ಮಕ್ಕಳು ಹಾಗೂ ಪೋಷಕರು ಇತರರಿದ್ದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ