ಬಳ್ಳಾರಿ ಏಪ್ರಿಲ್ 23. : ತಾಲೂಕಿನ ಕೆ ವಿರಾಪುರ ಗ್ರಾಮದ ರೈಲ್ವೆ ಸ್ಟೇಷನ್ ರಸ್ತೆಯ ಕಡೆ ಹೋಗುವ ಮೇಲೆ ಚರಂಡಿ ನೀರು ಹರಿದು ರಸ್ತೆಯ ಚರಂಡಿಯಾಗಿ ಮಾರ್ಪಟ್ಟಿದೆ, ಈ ಚರಂಡಿ ನೀರಿನಲ್ಲಿ ಮಲಮೂತ್ರದ ಗಲೀಜು ನೀರು ಹರಿದು ಆ ಪ್ರದೇಶವೆಲ್ಲ ಗಬ್ಬುನಾರುತ್ತಿದೆ ಇದರಿಂದ ಅಕ್ಕಪಕ್ಕದ ಮನೆಗಳ ಸಾರ್ವಜನಿಕರು ಮನೆಯಲ್ಲಿ ವಾಸ ಮಾಡಲು ಮತ್ತು ಊಟ ನೀರು ಮಾಡಲು ಸಹ ದುರ್ವಾಸನೆಯಿಂದ ತೊಂದರೆ ಆಗಿರುತ್ತದೆ ಸಂಬಂಧಿಸಿದ ಸ್ಥಳೀಯ ಅಧಿಕಾರಿಗಳು ಕೂಡಲೇ ಚರಂಡಿಯನ್ನು ದುರಸ್ತಿಗೊಳಿಸಿ ರಸ್ತೆಯ ಮೇಲೆ ಹರಿಯುವ ಚರಂಡಿ ನೀರಿನಿಂದ ಆ ಪ್ರದೇಶದ ಸಾರ್ವಜನಿಕರ ತೊಂದರೆಯನ್ನು ಪರಿಹರಿಸಬೇಕೆಂದು ಕಾರೆಕಲ್ ವೀರಪುರ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಈ ಕುರಿತು ಈಗಾಗಲೇ ಹಲವಾರು ಬಾರಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಜ್ ಕುಮಾರ ಗಮನಕ್ಕೆ ತಂದರೂ ಸಹ ಅವರು ಯಾವುದೇ ಕ್ರಮ ಕೈಗೊಂಡಿರುವುದಿಲ್ಲ ಮತ್ತು ನಾನು ಇಂಚಾರ್ಜ್ ಇದ್ದೇನೆ ಎಂದು ಸುಮ್ಮನೆ ಕಾಲಹರಣ ಮಾಡುತ್ತಿದ್ದಾರೆ ಸಾರ್ವಜನಿಕರ ಸಮಸ್ಯೆಯನ್ನು ಪರಿಹರಿಸದ ಸ್ಥಳೀಯ ಅಧಿಕಾರಿ ಪಿ. ಡಿ. ಒ ವಿರುದ್ಧ ಆ ಪ್ರದೇಶದ ನಿವಾಸಿಗಳು ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
