Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕಾರ್ಖಾನೆ ಸ್ಥಾಪಿಸಿ ಇಲ್ಲವೇ ಸರ್ಕಾರಿ ನೌಕರಿ ಕೊಡಿ : ಹನುಮಂತಪ್ಪ ಕೌದಿ 





ಕೊಪ್ಪಳ: ಬಲ್ದೋಟ ಕಾರ್ಖಾನೆ ಸ್ಥಾಪಿಸಿ ಇಲ್ಲವೇ ಸರ್ಕಾರಿ ನೌಕರಿ ಕೊಡಿ ಎಂದು ಭೂಮಿ ಕಳೆದುಕೊಂಡ ರೈತರು 100 ದಿನಗಳ ಅನಿರ್ದಿಷ್ಟಾವಧಿ  ಧರಣಿ ನಿಮಿತ್ಯ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು ಅದು ಯಶಸ್ವಿಯಾಯಿತು ಎಂದು ಭೂಮಿ ಕಳೆದುಕೊಂಡ ರೈತ ಒಕ್ಕೂಟದ ಮುಖಂಡ ಹನುಮಂತಪ್ಪ ಕೌದಿ ಹೇಳಿದರು.

ಅವರು ಬುಧವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿದ್ದೇಶಿಸಿ ಮಾತನಾಡಿ ಕೊಪ್ಪಳದ ಹತ್ತಿರ ಇರುವ ಹಾಲವರ್ತಿ, ಬಸಾಪುರ ಕೊಪ್ಪಳ, ಕಿಡದಾಳ ನಮ್ಮ ಗ್ರಾಮಗಳ ರೈತರ ಜಮೀನನ್ನು  2006-2007 ರಲ್ಲಿ ಒತ್ತಾಯ ಪೂರಕವಾಗಿ ಬಲತ್ಕಾರದಿಂದ ಅಂದಿನ ಸರ್ಕಾರ, ಭೂಸ್ವಾದೀನಪಡಿಸಿಕೊಂಡು ಬಿಎಸ್ಪಿಎಲ್ ಬಲ್ದೋಟ ಕಂಪನಿಗೆ ನಮ್ಮ ಜಮೀನನ್ನು ಲೀಜ್ ಅಗ್ರಿಮೆಂಟ್ ಮಾಡಿ ಕೊಟ್ಟಿರುತ್ತದೆ. ಕಾರ್ಖಾನೆ ಪ್ರಾರಂಭವಾದರೆ ಕೆಲಸ ಕೊಡಲು ಒಪ್ಪಿದ್ದರು ಆದರೆ ಅಂದಿನಿಂದ ಹಿಂದಿನವರೆಗೆ  ಕಾರ್ಖಾನೆ ಪ್ರಾರಂಭವಾಗಲಿಲ್ಲ, 2023ರಲ್ಲಿ ಸುಪ್ರೀಂ ಕೋರ್ಟ್ ಆದೇಶದ ಮುಖಾಂತರ ಕಾರ್ಖಾನೆ ಪ್ರಾರಂಭವಾಗಬೇಕಿತ್ತು, ಆ ಕನಸುಗಳು ನನಸಾಗುವ ಸಮಯದಲ್ಲಿ ಕೆಲವೊಂದು ಪಟ್ಟ ಬದ್ದ ಹಿತಾಶಕ್ತಿಗಳು ತಮ್ಮ ಸ್ವಾರ್ಥಕ್ಕಾಗಿ ಅಂದೋಲನ ರೂಪದಲ್ಲಿ ನಮ್ಮ ಆಸೆಗಳಿಗೆ ನೀರು ಏರುಚುತ್ತಿದ್ದಾರೆ,

2007 ರಲ್ಲಿ ಭೂಮಿಗಳನ್ನು ಕಳೆದುಕೊಂಡು ಸಾಲ ಮಾಡಿ ರೈತರು ಮತ್ತು ಅವರ ಕುಟುಂಬದವರು ಕಳೆದ 117 ದಿನಗಳಿಂದ  ಧರಣಿ ಮಾಡುತ್ತಾ ಬಂದಿದ್ದರೂ  ನಮ್ಮಿಂದ ಚುನಾಯಿಸಲ್ಪಟ್ಟ ರಾಜಕೀಯವರಾಗಲಿ , ಸರ್ಕಾರದ ಮಂತ್ರಿಗಳಾಗಲಿ ಕನಿಷ್ಠ ಪಕ್ಷ ನಮ್ಮ ಅಹವಾಲುಗಳನ್ನು ಕುಲಂಕುಶವಾಗಿ ಕೇಳಲು ಕಿಂಚತ್ತು ಸೌಜನ್ಯತೆಯನ್ನು ತೋರಲಿಲ್ಲ ಇದು ಎಲ್ಲಾ ಗ್ರಾಮಸ್ಥರ ರೈತರ ಹೃದಯದಲ್ಲಿ ಮರೆಯಲಾಗದ ಗಾಯವಾಗಿದೆ.

 ಈ ಸ್ಪಾಂಜ್ ಐರನ್ ಪ್ಲಾಂಟ್ ಮತ್ತು ರೈಸ್ ಮಿಲ್ ಗಳು MoEFCC ಮತ್ತು KSPCB ನೀಡಿದ ಅನುಬಂಧಗಳನ್ನು ಪಾಲಿಸಿದರೆ ಈಗಿನ ಪರಿಸ್ಥಿತಿಯನ್ನು ತಡೆಗಟ್ಟಬಹುದಾಗಿದೆ. ಈಗಿನ ಧೂಳು ಮತ್ತು ಬೂದಿ ಹರಡಲು ಕಾರಣಭೂತವಾದ ಸ್ಪಾಂಜ ಐರನ್ ಪ್ಲಾಂಟ್ ಕಂಪನಿಗಳ ಮೇಲೆ ಸೂಕ್ತ ಕ್ರಮ ವಹಿಸುವುದು ಬಿಟ್ಟು ಪರಿಸರ ಪ್ರೇಮಿ ಮತ್ತು ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿ ಜೀರೋ ಡಸ್ಟ್

ಗುರಿಯಾಗಿಸಿಕೊಂಡು ಇನ್ನು ಅಸ್ತಿತ್ವಕ್ಕೆ ಬರದ ಬಿ.ಎಸ್.ಪಿ.ಎಲ್ ಕಂಪನಿಯ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಕ್ರಮ ಎತ್ತಿಗೆ ಜ್ವರ ಬಂದರೆ ಎಮ್ಮಿಗೆ ಇಂಜೆಕ್ಷನ್ ಕೊಡುವದಾಗಿದೆ

ಬಿ.ಎಸ್.ಪಿ.ಎಲ್  ಕಂಪನಿಯಂತಹ ಆಧುನಿಕ ತಂತ್ರಜ್ಞಾನ  ಅಳವಡಿಸಿಕೊಂಡು  ಪ್ರಾರಂಭವಾಗುತ್ತಿರುವ ಉಕ್ಕು ಉತ್ಪಾದನೆ ಸಂಸ್ಥೆ ಬರುವದನ್ನು ಕೊಪ್ಪಳ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರ  ಸ್ವಾಗತಿಸಬೇಕು ವಿನಃಹ  ಧರಣಿ ಮೂಲಕ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ.

ನಿಜವಾಗಲೂ ದೂಳು ಬಿಡುವ ಕಂಪನಿಗಳು ಹಠಾವು ಕೊಪ್ಪಳ ಬಚಾವ್ ಅಂತಾ ಬ್ಯಾನರ್ ಹಾಕಿಕೊಂಡು ಧರಣಿ ಪ್ರತಿಭಟನೆ ಮಾಡಬೇಕಿತ್ತು, ಆದರೆ ಅದರ ಬದಲು ದುರುದ್ದೇಶದಿಂದ  ಪ್ರಾರಂಭವಾಗದ ಕಾರ್ಖಾನೆಯ ವಿರುದ್ಧ  ಸುಳ್ಳು ಆರೋಪ ಅವೈಜ್ಞಾನಿಕ ತಿಳುವಳಿಕೆ ಊಹಾಪೋಹಗಳನ್ನು ಮಾಡುತ್ತಿರುವ ಜನರನ್ನು ವಿರೋಧಿಸುತ್ತೇವೆ. ನಮಗೆ ಕಾರ್ಖಾನೆ ಪ್ರಾರಂಭವಾಗಬೇಕು ಅಲ್ಲಿ ನಮ್ಮ ಬದುಕನ್ನು ಕಟ್ಟಿಕೊಳ್ಳುತ್ತೇವೆ ಇಲ್ಲವಾದರೆ ಸರ್ಕಾರ ನಮ್ಮ ಜಮೀನನ್ನು ತೆಗೆದುಕೊಂಡಿದೆ ನಿರಾಶ್ರಿತ ಎಲ್ಲ ರೈತರಿಗೆ ಸರ್ಕಾರಿ ನೌಕರಿ ಕೊಡಲಿ ಎಂದು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದೇವೆ. ಸರ್ಕಾರ ನಮಗೆ ನ್ಯಾಯ ಕೊಡಲಿ ಇಲ್ಲವೇ ಎಲ್ಲ ರೈತರಿಗೆ ಮತ್ತು ರೈತರ ಮಕ್ಕಳಿಗೆ ವಿಷ ಕೊಡಲಿ ನಾವು ಸಂತೋಷದಿಂದ ತೆಗೆದುಕೊಂಡು ಪ್ರಾಣ ಬಿಡುತ್ತೇವೆ ಮತ್ತು ಮುಂದಿನ ವಾರದಿಂದ ನಮ್ಮ ಪ್ರತಿಭಟನೆ ಧರಣಿ ಸ್ಥಳವನ್ನು ನಗರಸಭೆ ಹತ್ತಿರ ವರ್ಗಾಯಿಸಲು ಯೋಜನೆಯನ್ನು ಮಾಡಿಕೊಂಡಿದ್ದೇವೆ ಅದಕ್ಕೆ ಪೊಲೀಸ್ ವರಿಷ್ಠಾಧಿಕಾರಿಗಳ ಪರವಾನಿಗೆಯನ್ನು  ಕೇಳುತ್ತೇವೆ . ಪರವಾನಿಗೆಯನ್ನು ನೀಡದಿದ್ದರೆ, ನ್ಯಾಯ ಸಿಗುವವರೆಗೂ ನಮ್ಮ ಹಕ್ಕಿಗಾಗಿ ನಾವು ಹೋರಾಡುತ್ತೇವೆ ಎಂದರು.

ಸುದ್ದಿಗೋಷ್ಠಿಯಲ್ಲಿ ಭೂಮಿ ಕಳೆದುಕೊಂಡ ರೈತ ಒಕ್ಕೂಟದ ಮುಖಂಡರಾದ ಕಾಮಣ್ಣ ಕಂಬಳಿ, ಕೇಮಪ್ಪ ಇಟಗಿ, ನಾಗರಾಜ್, ಗೋಣಿಬಸಪ್ಪ, ಹನುಮೇಶ ಹಾಲವರ್ತಿ, ಮನೋಜ್ ಹಾಲವರ್ತಿ, ಸ್ವಾಮಿ ಹಾಲವರ್ತಿ, ಗವಿಸಿದ್ದಪ್ಪ  ರೆಡ್ಡೇರ್, ಭೀಮೇಶ್ ಪೂಜಾರ್ ಉಪಸ್ಥಿತರಿದ್ದರು.







Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ