ಬೀಳಗಿ - ಕಳೆದ ನಾಲ್ಕು ದಶಕಗಳಿಂದ ಬಾಗಲಕೋಟೆ ಜಿಲ್ಲೆಯಲ್ಲಿ ತಮ್ಮದೆಯಾದ ಜನಮನ ಸಾಧಿಸಿ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಸೇವಕರಾಗಿ ಪಕ್ಷದ ಎಲ್ಲ ಚಟುವಟಿಕೆಗಳನ್ನು ನಿಭಾಯಿಸಿ ಜಿಲ್ಲೆಯಲ್ಲಿ ಕಾಂಗ್ರೆಸ್ ಬಲಿಷ್ಟ ಪಕ್ಷವಾಗಿ ಉಳಿಸುವಲ್ಲಿ ಶಾಸಕ ಜೆ ಟಿ ಪಾಟೀಲರ ಶ್ರಮ ಸಾಕಷ್ಟಿದ್ದು,ಶಾಸಕರಾಗಿ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ ಯುವಕರ ಆಶಾಕಿರಣ, ಸರ್ವ ಜನಾಂಗಗಳ ಹೆಮ್ಮೇಯ ಶಾಸಕ ಜಗದೀಶಗೌಡ ಪಾಟೀಲ್ ಅವರಿಗೆ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿರುವ ಡಿ ಕೆ ಶಿವುಕುಮಾರ ನೇತ್ರತ್ವದ ಸರ್ಕಾರದ ಸಚಿವ ಸಂಪುಟದಲ್ಲಿ ಮಂತ್ರಿ ಸ್ಥಾನ ನೀಡಬೇಕು ಎಂದು ಬೀಳಗಿ ಬ್ಲಾಕ್ ಕಾಂಗ್ರೆಸ್ ಯುವ ಮುಖಂಡ ಸಂತೋಷ ಕೋಲಾರ ಹೈಕಮಾಂಡ್ ಮುಖಂಡರಿಗೆ ಮನವಿ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಶಾಸಕ ಜೆ.ಟಿ ಪಾಟೀಲ ಅವರು ನಿರಂತರವಾದ ಹೋರಾಟಗಳ ಮೂಲಕ ಜನರ ಸಮಸ್ಯೆಗಳ ಬಗ್ಗೆ ಸದಾ ಗಟ್ಟಿ ಧ್ವನಿಯಾಗಿ ನಿಂತವರು, ನೇರ ನುಡಿ ಸ್ವಭಾವದ ಶಾಸಕರು ಸಾಮಾಜಿಕ ನ್ಯಾಯ ಮತ್ತು ಸಂವಿಧಾನದ ಮೌಲ್ಯಗಳಿಗೆ ಬದ್ಧರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದ ಅವರು ಶಾಸಕ ಜೆ.ಟಿ. ಪಾಟೀಲರಿಗೆ ಅನುಭವ, ಹಿರಿತನ, ಪಕ್ಷ ನಿಷ್ಠೆ,ಮೌಲ್ಯಗಳು ಮತ್ತು ಅವರ ಕೆಲಸದ ಪಾರದರ್ಶಕತೆ, ನುಡಿದಂತೆ ನೆಡೆಯುವ ಹಿರಿಯರು, ಯುವಕರಿಗೆ ಸದಾ ಮಾರ್ಗದರ್ಶನ ನೀಡುವುದು ಅವರ ಗುರಿಯಾಗಿದ್ದು ಇವೆಲ್ಲ ಆಧಾರದಲ್ಲಿ ಮುಂಬರುವ ಕ್ಯಾಬಿನೆಟ್ ನಲ್ಲಿ ಸ್ಥಾನ ನೀಡಬೇಕೆಂದರು.
