Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ರಾಜ್ಯ ಮಟ್ಟದ ಕವಿಗೋಷ್ಠಿಗೆ ಬಾಳೇಶ ಫಕ್ಕೀರಪ್ಪನವರ ಆಯ್ಕೆ


ಬೆಳಗಾವಿ - ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಗೋಸಬಾಳ ಗ್ರಾಮದ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ  ಶಾಲೆಯ ಆಂಗ್ಲ ಭಾಷಾ ಶಿಕ್ಷಕ,ಉದಯೋನ್ಮುಖ ಬರಹಗಾರ,ಸಂಘಟಕ ಬಾಳೇಶ ಬಸವರಾಜ  ಫಕ್ಕೀರಪ್ಪನವರ ( ತಡಕೋಡ)ಅವರು ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ನವೆಂಬರ 23ರಂದು ಬೆಂಗಳೂರು ಕೇಂದ್ರ ಬಸವ ಸಮಿತಿಯಿಂದ ಬೈಲಹೊಂಗಲ ಪಟ್ಟಣದ ಚನ್ನಮ್ಮ ಸಮಾಧಿ ರಸ್ತೆಯಲ್ಲಿರುವ ಗಣಾಚಾರಿ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ  ನಡೆಯುವ ರಾಜ್ಯಮಟ್ಟದ ಕವಿಗೋಷ್ಠಿಗೆ ಆಯ್ಕೆ ಆಗಿದ್ದಾರೆ ಎಂದು ರಾಜ್ಯ ಮಟ್ಟದ ಕವಿಗೋಷ್ಠಿಯ ಮುಖ್ಯ ಸಂಯೋಜಕರಾದ, ಕನ್ನಡ ಸಾಹಿತ್ಯ ಪರಿಷತ್ತಿನ ಬೆಳಗಾವಿ ಜಿಲ್ಲಾ ಮಾಜಿ ಅಧ್ಯಕ್ಷರಾದ ಮೋಹನ ಬಸನಗೌಡ ಪಾಟೀಲ ಅವರು ತಿಳಿಸಿದ್ದಾರೆ.


ರಾಜ್ಯಮಟ್ಟದ ಕವಿಗೋಷ್ಠಿಗೆ ಆಯ್ಕೆಯಾದ ಬಾಳೇಶರವರು ವೃತ್ತಿಯಲ್ಲಿ ಆಂಗ್ಲ ಭಾಷಾ ಶಿಕ್ಷಕರಾದರೂ ಕನ್ನಡ ಸಾಹಿತ್ಯದ ಅಪಾರ ಒಲವು ಹೊಂದಿದ್ದಾರೆ. ಕಥೆ,ಕವನ,ಶಾಲಾ ಗೀತೆ ಮತ್ತು ಚುಟುಕುಗಳನ್ನು ಬರೆದಿದ್ದಾರೆ.ಉತ್ತಮ ವಾಗ್ಮಿಯೂ ಆಗಿರುವ  ಬಾಳೇಶ ರವರು

 ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತಿನ ,ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಹಾಗೂ ಕೇಂದ್ರ ಬಸವ ಸಮಿತಿಯ ಬಸವ ಪಥ ಸದಸ್ಯರು ಆಗಿ ಕನ್ನಡದ ಸೇವೆ ಸಲ್ಲಿಸುತ್ತಿದ್ದಾರೆ.

ರಾಜ್ಯ ಮಟ್ಟದ ಕವಿಗೋಷ್ಠಿಗೆ ಆಯ್ಕೆಯಾದ ಬಾಳೇಶ ರವರನ್ನು,

 ಕನ್ನಡ ಸಾಹಿತ್ಯ ಪರಿಷತ್ತಿನ ಬೆಳಗಾವಿ ಜಿಲ್ಲಾ ಮಾಜಿ ಅಧ್ಯಕ್ಷರಾದ  ಮೋಹನ ಬಸನಗೌಡ ಪಾಟೀಲ, ಅಖಿಲ ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಅಧ್ಯಕ್ಷರಾದ  ಸಿದ್ರಾಮ ಮಲ್ಲಪ್ಪ ಲೋಕನ್ನವರ (ಕೌಜಲಗಿ), ಗೋಕಾಕ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀಮತಿ

ಭಾರತಿ ಮದಬಾವಿ, ಎಸ್‌.ಡಿ.ಎಂ.ಸಿ. ಅಧ್ಯಕ್ಷರಾದ ಶಂಕರಯ್ಯ ಮಠದ,ಉಪಾಧ್ಯಕ್ಷರಾದ ಮುತ್ತೆವ್ವ ವಿಠ್ಠಲ ಮೆಳ್ಳಿಕೇರಿ,ಸದಸ್ಯರಾದ ಗಿರೀಶ ಪಾಟೀಲ,ಲೋಕೇಶ ಬಂಡಿವಡ್ಡರ,ಮಹಾದೇವ ನಂದಿ,ಬಸವರಾಜ ಬುಳ್ಳಿ,ಗೋಪಾಲ ಬಡಿಗೇರ,ಯಲ್ಲಾಲಿಂಗ ಪಾಟೀಲ,ಹಣಮಂತ ಅಕ್ಕಮ್ಮನವರ,ಬಾಳಪ್ಪ ತೋಟಗಿ, ಲಕ್ಷ್ಮೀ ಸಿಂಗಾಡಿ,ಮಹಾನಂದಾ ಸೂಲನ್ನವರ,ಸಕ್ಕುಬಾಯಿ ಭಜಂತ್ರಿ,ಶಿವಲೀಲಾ ಪಾಟೀಲ,ರತ್ನವ್ವ ಹರಿಜನ,ವಿಜಯಲಕ್ಷ್ಮಿ ಹಿರೇಮಠ,ಲಕ್ಷ್ಮೀ ಅಕ್ಕಿಸಾಗರ,ಹೇಮಾ ಮಗದುಮ, ಶಿಕ್ಷಕರಾದ ಶೇಖರ ಪಾಟೀಲ,ಸುರೇಶ ಸವದತ್ತಿ,ಖ್ವಾಜಾ ಮೂಲಿಮನಿ,ಬಸವರಾಜ ಹಳ್ಳಿ,ಮಾರುತಿ ಹೊಸಟ್ಟಿ ಶಿಕ್ಷಕಿಯರಾದ ಶ್ರೀಮತಿ ಉಮಾ ಹೊಸಕೋಟಿ,ಶ್ರೀಮತಿ ತಬಸುಮ್ ನದಾಫ,ಶ್ರೀಮತಿ ವಿದ್ಯಾ ಪತ್ತಾರ ,  ಬಾಳೇಶ ಅವರನ್ನು  ಅಭಿನಂದಿಸಿದ್ದಾರೆ.

Advertisement
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದು ನದಾಫ್-ಪಿಂಜಾರ ಸಂಘ ತಾಲೂಕ ಘಟಕದ ಕಚೇರಿ ಉದ್ಘಾಟನೆ ಟ್ರಕ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ : ಅಕ್ಕ-ತಮ್ಮ ದಾರುಣ ಸಾವುತಾಲೂಕಾ ಅಧಿಕಾರಿಗಳ ಸಾಮಾನ್ಯ ಸಭೆ; ರೈತರಿಗೆ ಬೀಜ, ಗೊಬ್ಬರ ಕೊರತೆಯಾಗದಂತೆ ನೋಡಿಕೊಳ್ಳಿ: ಬಸವರಾಜ್ ಅಡವಿಮಠ್ ಸೂಚನೆಕೊಪ್ಪಳ ಕಾರ್ಯನಿರತ ಪತ್ರಕರ್ತರ ಸಂಘದ ಸಭೆನೂತನ ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ ಅವರಿಗೆ ಅಭಿನಂದಿಸಿದ ಲಕ್ಷ್ಮೀ  ಹೆಬ್ಬಾಳಕರ.ಸಿದ್ದರಾಮಯ್ಯ ಭೇಟಿ ಮಾಡಿ ಧನ್ಯವಾದ ಸಲ್ಲಿಸಿದ ಲಕ್ಷ್ಮೀ ಹೆಬ್ಬಾಳಕರಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ ಅವರಿಗೆ ಸತ್ಕರಿಸಿದ ಯುವ ಮುಖಂಡ  ರಾಹುಲ  ಜಾರಕಿಹೊಳಿ.ಸಚಿವ ಸತೀಶ ಜಾರಕಿಹೊಳಿ, ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ ಬೇಟಿ ಪರಸ್ಪರ ಶುಭ ಕೋರಿಕೆಗ್ಲೋಬಲ್ ಕ್ಯಾಪೆಬಿಲಿಟಿ ಸೆಂಟರ್‌ಗಳ ಬೆಳವಣಿಗೆಗೆ ಉತ್ತೇಜನ*ಶರಣು ಕಾರ್ಯಾಲಯ ಆರಂಭಿಸುವ ಮೂಲಕ ಬಡವರ ಕಣ್ಣಿರು ಒರೆಸುವ ಕಾರ್ಯಕ್ಕೆ ಮುಂದಾಗಿರುವುದು ಶ್ಲಾಘನೀಯ : ಬಳಗಾನೂರು ಶ್ರೀಗಳು,,*