ಬಳ್ಳಾರಿ,ಮೇ.೦೭: ಟ್ರಡಿಷನಲ್ ಶೊಟೋಕಾನ್ ಕರಾಟೆ ಅಕಾಡೆಮಿ ಕರ್ನಾಟಕದ* ಕರಾಟೆ ವಿದ್ಯಾರ್ಥಿಗಳು ಅಸ್ಸಾಂ ರಾಜ್ಯದ ಗುಹಾಟಿಯಲ್ಲಿ ಮೇ ೧೬ ಮತ್ತು ೧೭ ರಂದು ನಡೆಯಲಿರುವ ೨೪ನೇ ಅಖಿಲ ಭಾರತ ಕರಾಟೆ ಪಂದ್ಯಾವಳಿಯಲ್ಲಿ ಬಳ್ಳಾರಿಯ ತೋರಣಗಲ್ಲು ಜಿಂದಾಲ್ ಶಾಲೆಯ ಕರಾಟೆ ಪಟುಗಳು, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯ ಕರಾಟೆ ಪಟುಗಳು ಕಟಾ ಮತ್ತು ಕುಮಿತೆ ವಿಭಾಗಗಳಲ್ಲಿ ತೂಕ ಮತ್ತು ವಯೋಮಿತಿಯಲ್ಲಿ ೧೦ ಬಾಲಕರು, ೩ ಬಾಲಕಿಯರು, ೪ ತರಬೇತುದಾರರು ಭಾಗವಹಿಸಲಿದ್ದಾರೆ ಎಂದು *ಕರಾಟೆ ಅಕಾಡೆಮಿಯ ಹಿರಿಯ ಕರಾಟೆ ತರಬೇತುದಾರರಾದ ಕಟ್ಟೆ ಸ್ವಾಮಿ ತಿಳಿಸಿದ್ದಾರೆ