Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

"ಸ್ಕೌಟ್ಸ್-ಗೈಡ್ಸ್ ಮಕ್ಕಳಿಂದ ಪರಿಸರ ದಿನಾಚರಣೆ

ಸವದತ್ತಿ:- "ಸ್ಕೌಟ್ಸ್-ಗೈಡ್ಸ್ ಎಂಬುದು ಸೇವೆಗಾಗಿ ಇರುವ ಸಂಸ್ಥೆಯಾಗಿದ್ದು ಮಕ್ಕಳಿಗೆ ಸೇವಾ ಮನೋಭಾವನೆ ಬೆಳೆಸುವ ಜೊತೆಗೆ ಪರಿಸರ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ, ಆದುದರಿಂದ ಪರಿಸರ ರಕ್ಷಣೆ ಮಾಡುವುದು ನಮ್ಮೆಲ್ಲರ ಹೊಣೆಯಾಗಿದೆ. ಗಿಡಮರಗಳನ್ನು ನೆಟ್ಟು ಪೋಷಿಸಬೇಕು" ಎಂದು ಕುಮಾರೇಶ್ವರ ವಿದ್ಯಾಮಂದಿರದ ಚೇರಮನ್ ಶ್ರೀಕಾಂತ ಮಿರಜಕರ ತಮ್ಮ ಅಭಿಪ್ರಾಯ ಹಂಚಿಕೊಂಡರು.

ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಸವದತ್ತಿ, ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಸ್ಥಳೀಯ ಸಂಸ್ಥೆ ಸವದತ್ತಿ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ ಬೆಳಗಾವಿ ಹಾಗೂ ಶ್ರೀ ರೇಣುಕಾ ಶುಗರ್ಸ್ ಲಿಮಿಟೆಡ್ ಮುನವಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀ ಕುಮಾರೇಶ್ವರ ವಿದ್ಯಾಮಂದಿರ ಮುನವಳ್ಳಿಯಲ್ಲಿ "ವಿಶ್ವ ಪರಿಸರ ದಿನಾಚರಣೆ" ಮತ್ತು ಸ್ಕೌಟ್ಸ್-ಗೈಡ್ಸ್ ಮಕ್ಕಳಿಗಾಗಿ ವಿವಿಧ ಸ್ಪರ್ಧೆಗಳ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನಂತರ ಮಾತನಾಡಿದ ಬಿಇಓ ಮೋಹನ ದಂಡಿನ ಸ್ಕೌಟ್ಸ್-ಗೈಡ್ಸ್ ಮಕ್ಕಳಿಗೆ ಶಾಲೆಗಳಲ್ಲಿ ಹಾಗೂ ಜೀವನದಲ್ಲಿ ಶಿಸ್ತು ಕಲಿಸುವುದರ ಜೊತೆಗೆ ದೇಶಪ್ರೇಮ ಬೆಳೆಸಲು ಸಹಾಯಕಾರಿಯಾಗಿದೆ, ಜೊತೆಗೆ ಮುಂದಿನ ನೂರು ವ?ಗಳ ಭವಿ?ಕ್ಕಾಗಿ ನಾವು ಪರಿಸರ ರಕ್ಷಣೆಗಾಗಿ ಸುಶಿಕ್ಷಿತರಾಗಬೇಕಾಗಿದೆ ಎಂದರು.

ಪ್ರಾಸ್ತಾವಿಕವಾಗ ಸ್ಕೌಟ್ಸ್-ಗೈಡ್ಸ್ ಕಾರ್ಯದರ್ಶಿ ಎನ್.ಎನ್.ಕಬ್ಬೂರ ಮಾತನಾಡಿದರು, ಶ್ರೀ ರೇಣುಕಾ ಶುಗರ್ಸ್ ಲಿಮಿಟೆಡ್ ಮುನವಳ್ಳಿಯ ರಾಘವೇಂದ್ರ ಕುಲಕರ್ಣಿ ತಮ್ಮ ಅಭಿಪ್ರಾಯ ಹಂಚಿಕೊಂಡರು. ಸಂಜೀವ ಕುಮಾರ ನಾಯ್ಕ, ಬಸವರಾಜ ಕಬ್ಬೂರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ನಂತರ ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಮಕ್ಕಳಿಗೆ ಹಮ್ಮಿಕೊಂಡಿದ್ದ ಭಾ?ಣ, ಚಿತ್ರಕಲೆ, ಪ್ರಬಂಧ, ರಂಗೋಲಿ ಸ್ಪರ್ಧೆಗಳನ್ನು ನಡೆಸಲಾಯಿತು. ಸುಮಾರು ೨೦೦ ಕ್ಕಿಂತ ಹೆಚ್ಚು ಮಕ್ಕಳು ಸಮವಸ್ತ್ರದೊಂದಿಗೆ ಭಾಗವಹಿಸಿದ್ದರು. ಸ್ಕೌಟ್ಸ್-ಗೈಡ್ಸ್ ಜಿಲ್ಲಾ ಸಂಘಟಕರಾದ ಎಸ್.ಬಿ.ವಿಠ್ಠಲ್, ರಾಜಕುಮಾರ ಕುಂಬಾರ, ಇಸಿಒ ಎಸ್.ಎಸ್.ವಾಗೇರಿ, ಸಿ.ಆರ್.ಪಿಗಳಾದ ಜಿ.ಎಸ್.ಚಿಪ್ಪಲಕಟ್ಟಿ, ಎಮ್.ಎಮ್.ಮುರನಾಳ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣೆ ಮಾಡಿದರು.

ಕಾರ್ಯಕ್ರಮದಲ್ಲಿ ಶಿಕ್ಷಕ ಸಂಘದ ಅಧ್ಯಕ್ಷ ಕಿರಣ ಕುರಿ, ಗೌರವಾಧ್ಯಕ್ಷ ಎಮ್.ಎಸ್.ಹೊಂಗಲ, ದೈಹಿಕ ಶಿಕ್ಷಕ ಲಕ್ಕನ್ನವರ, ನೌಕರ ಸಂಘದ ಉಪಾಧ್ಯಕ್ಷ ರವಿ ಸಣಕಲ್ಲ, ಶಿಕ್ಷಕರಾದ ಸುನಿಲ ಏಗನಗೌಡ್ರ, ಶಾಲೆಯ ಎಲ್ಲ ಸಿಬ್ಬಂದಿ ಮತ್ತು ಮಕ್ಕಳು ಭಾಗವಹಿಸಿದ್ದರು, ಸಿ.ಆರ್.ಪಿ ಎನ್.ಎ.ಹೊನ್ನಳ್ಳಿ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರು, ಮುಖ್ಯ ಶಿಕ್ಷಕ ಶಂಕರ ರಾಠೋಡ ವಂದಿಸಿದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ