ವಿಜ್ಞಾನ ಮತ್ತು ತಂತ್ರಜ್ಞಾನ ಬಳಕೆ ವಿದ್ಯಾರ್ಥಿಗಳಿಗೆ ಅಗತ್ಯ: ಟಿ ಎಸ್ ಒಂಟಗೂಡಿ
ರಾಯಬಾಗ.ಜೂನ್ 30: ರಾಯಬಾಗ ಪಾಲಿಟೆಕ್ನಿಕ್ ರಾಯಬಾಗ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ ಕಾರ್ಯಕ್ರಮ ನೆರವೇರಿತು ಸಮಾರಂಭದ ಮುಖ್ಯ ಅತಿಥಿಗಳಾಗಿ ಹಾರೋಗೇರಿಯ ಶ್ರೀ ಸಿದ್ದೇಶ್ವರ ಕಲಾ ಪದವಿ ಮಹಾವಿದ್ಯಾಲಯ ಕನ್ನಡ ಉಪನ್ಯಾಸಕರಾದ ಸಾಹಿತಿ ಟಿ ಎಸ್ ಒಂಟಗೂಡಿ ಮಾತನಾಡಿ ಆಧುನಿಕ ಯುಗದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಬಹಳಷ್ಟು ವೇಗವಾಗಿ ಬೆಳೆಯುತ್ತಿದೆ ವಿದ್ಯಾರ್ಥಿಗಳು ಅದರ ಬಳಕೆ ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳಿಗೆ ಕೇವಲ ಕಲಿಕೆಯೊಂದಿದ್ದರೆ ಸಾಲದು ಅದರೊಂದಿಗೆ ಕಲಿಸಿದ ಗುರುಗಳಿಗೆ ಕಲಿತ ಶಾಲೆಗೆ ಹೆತ್ತ ತಂದೆ ತಾಯಿಯರಿಗೆ ವಿಧೇಯರಾಗಿರಬೇಕು ವಿದ್ಯಾರ್ಥಿಗಳು ಮನುಕುಲ ಬೆಳಗುವ ದಿವ್ಯ ಜ್ಯೋತಿಗಳಾಗಬೇಕು ವಿದ್ಯಾವಂತ ಸುಸಂಸ್ಕೃತ ಮಕ್ಕಳೇ ದೇಶದ ನಿಜವಾದ ಆಸ್ತಿ ಎಂದು ಸಾಹಿತಿ ಟಿ ಎಸ್ ವಂಟಗೂಡಿ ಅಭಿಮತ ವ್ಯಕ್ತಪಡಿಸಿದರು ಸಮಾರಂಭದ ಅಧ್ಯಕ್ಷತೆಯನ್ನು ಶುಗರ್ ಫ್ಯಾಕ್ಟರಿಯ ಜನರಲ್ ಮ್ಯಾನೇಜರ್ ಸಂಗಮನಾಥ ಜಮಾದಾರ ಕಾರ್ಯಕ್ರಮ ಉದ್ಘಾಟಿಸಿ ಅಧ್ಯಕ್ಷತೆ ನುಡಿ ಆಡಿದರು ವೇದಿಕೆಯ ಮೇಲೆ ಡೆಪ್ಯೂಟಿ ಜನರಲ್ ಮ್ಯಾನೇಜರ್ ಸಂಜೀವ್ ಕಿಲ್ಲೆದಾರ ಪ್ರಾಚಾರ್ಯ ಭರತೇಶ ಎಸ್ ದಡ್ಡಿ ಪ್ರೊ ಎಸ್ ವಿ ದೇಸಾಯಿ ಪ್ರೊ ಎಲ್ ಕೆ ಸಂತೋಷ ಸಂಸ್ಕೃತಿಕ ಚಟುವಟಿಕೆ ಅಧ್ಯಕ್ಷರಾದ ಎಮ್ ಆರ್ ಜೇಡರ ಉಪಸ್ಥಿತರಿದ್ದರು ಕಾರ್ಯಕ್ರಮವನ್ನು ಪ್ರೊ ಆರ್ ಎ ಅನ್ವೇಕರ ಸ್ವಾಗತಿಸಿದರು ಪ್ರೊ ಚಂದ್ರಕಾಂತ ಒಡೆಯರ ನಿರೂಪಿಸಿದರು
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.