Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸಾವಿತ್ರಿ ಬಾಯಿ ಫುಲೆ ಸಮಾಜಕ್ಕೇ ನೀಡಿದ ಕೊಡುಗೆ ಅಪಾರ: ಭರತೇಶ ಉಪಾದ್ಯೆ

ಹಳ್ಳೂರ 01. ಬಡವ ದಿನ ದಲಿತರ ಹಿಂದುಳಿದ ವರ್ಗದ ಜನರಿಗೆ ಶಿಕ್ಷಣವನ್ನು ನೀಡಿ ಅವರ ಬಾಳಿಗೆ ಬೆಳಕು ನೀಡಿ ದೇಶದ ಮೊದಲ ಮಹಿಳಾ ಶಿಕ್ಷಕಿ ಅಕ್ಷರದವ್ವಾ ಸಾವಿತ್ರಿ ಬಾಯಿ ಫುಲೆ ಅವರು ಸಮಾಜಕ್ಕೇ ನೀಡಿದ ಕೊಡುಗೆ ಅಪಾರವಾದದ್ದು ಎಂದು ಭರತೇಶ ಉಪಾದ್ಯೆ ಪೂಜೆ ನೆರವೇರಿಸಿ ಮಂಗಳಾರತಿ ಮಾಡಿ ಮಾತನಾಡಿದರು.

ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ರಂಗಣ್ಣ ಗುಜನಟ್ಟಿ ಮಾತನಾಡಿ ಸಾವಿತ್ರಿ ಬಾಯಿ ಫುಲೆ ಅವರು ಜಾತಿ ಬೇಧ ಭಾವ ಮಾಡದೆ ಎಲ್ಲರಿಗೂ ಸಮಾಜದಲ್ಲಿ ಮಾದರಿಯಾಗಿದ್ದಾರೆ. ಶಾಲೆಯ ಹತ್ತಿರ ಸಾವಿತ್ರಿ ಬಾಯಿ ಫುಲೆ ವೃತ್ತ ಆದದ್ದು ಹೆಮ್ಮೆಯ ಸಂಗತಿಯಾಗಿದೆ.ಇವರ ತತ್ವ ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಗ್ರಾಮ ಆಡಳಿತ ಅಧಿಕಾರಿ ಸಂಜು ಅಗ್ನೆಪ್ಪಗೋಳ ಮಾತನಾಡಿ ಸಾವಿತ್ರಿ ಬಾಯಿ ಫುಲೆ ಅವರು ಶಿಕ್ಷಣ ಕಲಿಸಲು ದಾರಿಯಲ್ಲಿ ಹೊರಟಾಗ ಕೆಟ್ಟ ಜನರು ಸಗಣಿ, ಕಲ್ಲು ಎಸೆಯುತ್ತಿದ್ದರು ಮಾನ ಅಪಮಾನಕ್ಕೆ ಹೆದರದೆ ಮುನ್ನಡೆದು ಶಿಕ್ಷಣ ನೀಡಿ ಶಿಕ್ಷಣದ ಕ್ರಾಂತಿಯನ್ನು ಮಾಡಿದ್ದಾರೆ ಎಂದು ಹೇಳಿದರು.                  ಪ್ರಾರಂಭದಲ್ಲಿ ಸಾವಿತ್ರಿ ಬಾಯಿ ಫುಲೆ ಅವರ ವೃತ್ತ ಫಲಕದ ಅನಾವರಣ ಪೂಜಾ ಸಮಾರಂಭವು , ಪುಷ್ಪ ನಮನ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಂದ ರಾಷ್ಟ್ರಗೀತೆ ನಡೆಯಿತು.

ಈ ಸಮಯದಲ್ಲಿ  ಗ್ರಾಮ ಪಂಚಾಯಿತಿ ಅಧ್ಯಕ್ಷೆ ನೀಲವ್ವ ಹೊಸಟ್ಟಿ.ಮಾಜಿ ಜಿ ಪಂ ಸದಸ್ಯೆ ವಾಸಂತಿ ತೇರದಾಳ. ಮಾ,ಜಿ,ಪಂ ಸದಸ್ಯ ಭೀಮಶಿ ಮಗದುಮ. ಮಾ, ತಾ ಪಂ ಸದಸ್ಯೆ ಸವಿತಾ ಡಬ್ಬನ್ನವರ. ಸಾವಿತ್ರಿ ಬಾಯಿ ಫುಲೆ ಮಹಿಳಾ ಮಂಡಳ ಅಧ್ಯಕ್ಷೆ ಬಂದವ್ವ ಕಾಗೆ.ಉಪಾಧ್ಯಕ್ಷೆ ಕಸ್ತೂರಿ ನಿಡೋಣಿ. ಮಾ ಗ್ರಾಂ ಪ ಅಧ್ಯಕ್ಷ ಲಕ್ಷ್ಮಣ ಕತ್ತಿ. ಅರ್ಚಕ ಪಾವಡೆಪ್ಪ ಪೂಜೆರಿ.ಗ್ರಾಂ ಪ ಸದಸ್ಯ ಮಾದೇವ ಹೊಸಟ್ಟಿ. ಪಶು ವೈದ್ದಾಧಿಕಾರಿಗಳಾದ ವಿಶ್ವನಾಥ ಹುಕ್ಕೇರಿ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಮುರಿಗೆಪ್ಪ ಮಾಲಗಾರ. ಮುಖಂಡರಾದ ಯಮನಪ್ಪ ನಿಡೋಣಿ. ಸಿದ್ದಪ್ಪ ಕೂಲಿಗೋಡ.ಭೀಮಪ್ಪ ಹೊಸಟ್ಟಿ.ಅಡಿವೆಪ್ಪ ಪಾಲಬಾಂವಿ. ಹನಮಂತ ತೇರದಾಳ.ಶಂಕರ ಬೋಳನ್ನವರ. ಸುರೇಶ ಕತ್ತಿ. ಮುತ್ತಪ್ಪ ಲಿಗಾಡೆ.ಹನಮಂತ ಹಳ್ಳೂರ.ದುಂಡಪ್ಪ ಕೂಲಿಗೋಡ. ಸತ್ಯೆಪ್ಪ ಮರಿಚಂಡಿ. ಪ್ರ ಗು,ಎಸ್ ಎಚ್ ವಾಸನ.ದುಂಡಪ್ಪ ಕತ್ತಿ. ಶಾನೂರ ಹರಿಜನ. ರಾಮಣ್ಣ ಹೊಸೂರ.ಇಬ್ರಾಹಿಂ ಮುಜಾವರ. ಗೋಪಾಲ ಅಟ್ಟಮಟ್ಟಿ ರಮೇಶ ಸವದಿ. ಲಕ್ಷ್ಮಣ ಕೌಜಲಗಿ. ಸೈದುಸಾಬ ಮುಜಾವರ.ಕಲ್ಲಪ್ಪ ಹುಬ್ಬಳ್ಳಿ.ಸೇರಿದಂತೆ ಗ್ರಾಮದ ಗುರು ಹಿರಿಯರು ವಿದ್ಯಾರ್ಥಿಗಳು, ಶಿಕ್ಷಕ ಶಿಕ್ಷಕಿಯರು,ಹಾಗೂ  ಸಾವಿತ್ರಿ ಬಾಯಿ ಫುಲೆ ಮಹಿಳಾ ಮಂಡಳ ಸದಸ್ಯರಿದ್ದು ಸರ್ವರಿಗೂ ಅಲ್ಪೋಪಹಾರ ವ್ಯವಸ್ಥೆ ನಡೆಯಿತು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ